ಎಸ್ಬಿಐ ಉಳಿತಾಯ ಖಾತೆ ಕನಿಷ್ಠ ಮೊತ್ತದ ಮಿತಿ ಇಳಿಕೆ?
Team Udayavani, Jan 6, 2018, 8:35 AM IST
ಮುಂಬಯಿ: ಭಾರತೀಯ ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆಯಲ್ಲಿ ಇರಿಸಬೇಕಾದ ಕನಿಷ್ಠ ಮೊತ್ತ ಇಳಿಕೆಗೆ ಚಿಂತನೆ ಮಾಡಿದೆ. ಇದಲ್ಲದೆ ಕನಿಷ್ಠ ಮೊತ್ತ ಇರದೇ ಇದ್ದರೆ ವಿಧಿಸುವ ದಂಡದ ಪ್ರಮಾಣವೂ ಇಳಿಕೆಯಾಗಲಿದೆ. ಕನಿಷ್ಠ ಮೊತ್ತ ಕಾಯ್ದುಕೊಂಡು ಬರದೇ ಇದ್ದವರಿಗೆ ದಂಡ ವಿಧಿಸಿಯೇ 1,771 ಕೋಟಿ ರೂ.ಗಳನ್ನು ಎಸ್ಬಿಐ ಸಂಗ್ರಹಿಸಿದೆ ಎಂಬ ವರದಿ ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವೇ ಕನಿಷ್ಠ ಮೊತ್ತದ ಮಿತಿಯನ್ನು ಕಡಿತಗೊಳಿಸುವಂತೆ ಬ್ಯಾಂಕ್ಗೆ ಸೂಚಿಸಿದೆ.
ಮೂಲಗಳ ಪ್ರಕಾರ ಉಳಿತಾಯ ಖಾತೆಯಲ್ಲಿ ಕನಿಷ್ಠ 1 ಸಾವಿರ ರೂ. ಇದ್ದರೆ ಮಾತ್ರ ಸಾಕು ಎಂಬ ನಿಯಮ ಮತ್ತೆ ಜಾರಿಗೆ ಬರುವ ಸಾಧ್ಯತೆಗಳಿವೆ. ಸದ್ಯ ಮೆಟ್ರೋ ನಗರಗಳ ವ್ಯಾಪ್ತಿಯಲ್ಲಿ 3 ಸಾವಿರ ರೂ., ಅರೆ ನಗರ ಮಿತಿಯಲ್ಲಿ 2 ಸಾವಿರ ರೂ., ಗ್ರಾಮೀಣ ಪ್ರದೇಶದಲ್ಲಿ 1 ಸಾವಿರ ರೂ. ಮೊತ್ತದ ಮಿತಿ ಹೇರಲಾಗಿದೆ.
2017ರ ಎಪ್ರಿಲ್ನಲ್ಲಿ ಐದು ವರ್ಷಗಳ ಬಳಿಕ ಉಳಿತಾಯ ಖಾತೆಯಲ್ಲಿ ಕನಿಷ್ಠ ಮೊತ್ತ 5 ಸಾವಿರ ರೂ. ಇರಬೇಕು ಎಂದು ಬ್ಯಾಂಕ್ ಆದೇಶಿಸಿತ್ತು. ದೇಶಾದ್ಯಂತ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾದ್ದರಿಂದ ಅದನ್ನು 3 ಸಾವಿರ ರೂ.ಗೆ ಇಳಿಕೆ ಮಾಡಲಾಯಿತು.
ಖಾತೆಯಲ್ಲಿ ಕನಿಷ್ಠ ಮೊತ್ತ ಕಾಯ್ದು ಕೊಳ್ಳದೇ ಇದ್ದರೆ 20 ರೂ.ಗಳಿಂದ 40 ರೂ.ಗಳ ವರೆಗೆ ದಂಡ ವಿಧಿಸಲಾಗುತ್ತದೆ. ಅದಕ್ಕೆ ಪ್ರತ್ಯೇಕ ತೆರಿಗೆಯನ್ನೂ ಪಾವತಿಸಬೇಕು. ಐಸಿಐಸಿಐ, ಎಚ್ಡಿಎಫ್ಸಿ ಬ್ಯಾಂಕ್, ಕೋಟಕ್ ಮತ್ತು ಆ್ಯಕ್ಸಿಸ್ ಬ್ಯಾಂಕ್ಗಳಲ್ಲಿ ಮೆಟ್ರೋ ನಗರಗಳ ಖಾತೆದಾರರು ಕನಿಷ್ಠ 10 ಸಾವಿರ ರೂ. ಇರಿಸಿಕೊಳ್ಳಬೇಕೆಂಬ ನಿಯಮವಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Issue: ನಾಳೆಯಿಂದ ಜೆಪಿಸಿ ಎದುರು ಕರ್ನಾಟಕ ಸೇರಿ 6 ರಾಜ್ಯಗಳ ಪ್ರತಿನಿಧಿಗಳು ಹಾಜರು
ಪತ್ನಿಗಾಗಿ ಕೆಲಸದಿಂದ ನಿವೃತ್ತಿ ಪಡೆದ ಪತಿ; ಬೀಳ್ಕೊಡುಗೆ ಕಾರ್ಯಕ್ರಮದಲ್ಲೇ ಪತ್ನಿ ಮೃತ್ಯು
Uttarakhand: ಕಂದಕಕ್ಕೆ ಬಿದ್ದ ಬಸ್ ನಾಲ್ವರು ಮೃ*ತ್ಯು; 20ಕ್ಕೂ ಅಧಿಕ ಮಂದಿಗೆ ಗಾಯ
Uttar Pradesh: 16 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ*ಚಾರ; ಇಬ್ಬರ ಬಂಧನ
Atul Subhash Case: ಮೊಮ್ಮಗನನ್ನು ನೀಡದಿದ್ದರೆ ಆತ್ಮಹತ್ಯೆ; ಅತುಲ್ ತಂದೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.