ಎಫ್ಡಿ ಮೇಲೆ ಎಸ್‌ಬಿಐ ಬಡ್ಡಿ ದರ ಏರಿಕೆ
Team Udayavani, Jul 31, 2018, 6:00 AM IST
ಹೊಸದಿಲ್ಲಿ: ಎಸ್‌ಬಿಐ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡಿದೆ. ಸೋಮವಾರದಿಂದಲೇ ಬಡ್ಡಿ ದರ ಏರಿಕೆ ಜಾರಿಗೆ ಬಂದಿದ್ದು, ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಠೇವಣಿ ಮೇಲಿನ ದರಗಳನ್ನು ಮಾತ್ರ ಏರಿಕೆ ಮಾಡಲಾಗಿದೆ. 5ರಿಂದ 10 ಮೂಲಾಂಶ ದಷ್ಟು ಹೆಚ್ಚಿಸಲಾಗಿದೆ. 1 ಕೋಟಿ ರೂ. ಗಿಂತ ಕಡಿಮೆ ಮೊತ್ತದ 1ರಿಂದ 2 ವರ್ಷ ಗಳವರೆಗಿನ ಠೇವಣಿ ಮೇಲಿನ ಬಡ್ಡಿಯನ್ನು ಹಿಂದಿದ್ದ ಶೇ. 6.65ರಿಂದ ಶೇ. 6.70ಕ್ಕೆ ಏರಿಸಲಾಗಿದೆ. ಅದೇ ರೀತಿ 2ರಿಂದ 3 ವರ್ಷಗಳ ಠೇವಣಿಗೆ ಶೇ.6.65ರಿಂದ ಶೇ. 6.75, 3ರಿಂದ 5 ವರ್ಷಗಳ ಠೇವಣಿಗೆ ಶೇ. 6.7ರಿಂದ ಶೇ. 6.8 ಹಾಗೂ 5ರಿಂದ 10 ವರ್ಷಗಳ ಅವಧಿಯ ಠೇವಣಿಗೆ ಶೇ. 6.75ರಿಂದ ಶೇ. 6.85ಗೆ ಏರಿಸಲಾಗಿದೆ. ಹಿರಿಯ ನಾಗರಿಕರಿಗೆ ಪ್ರಸ್ತುತ ದರದ ಮೇಲೆ ಶೇ. 0.5ರಷ್ಟು ಹೆಚ್ಚುವರಿ ಬಡ್ಡಿ ನೀಡಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hydarabad: ಪುಷ್ಪ-2 ಚಿತ್ರದ ಪ್ರದರ್ಶನ ವೇಳೆ ಗಾಯಗೊಂಡಿದ್ದ ಬಾಲಕನ ಸ್ಥಿತಿ ಗಂಭೀರ
ನಾವು ಅಧಿಕಾರಕ್ಕೆ ಬಂದರೆ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಚಿಕಿತ್ಸೆ: ಕೇಜ್ರಿವಾಲ್
Noida: ಟಾಯ್ಲೆಟಲ್ಲಿ ರಹಸ್ಯ ಕ್ಯಾಮರಾ ಇಟ್ಟಿದ್ದ ಶಾಲಾ ನಿರ್ದೇಶಕ… ಪತ್ತೆ ಹಚ್ಚಿದ ಶಿಕ್ಷಕಿ
Mumbai: ಗೇಟ್‌ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Umar Khalid: ದೆಹಲಿ ಗಲಭೆ ಪ್ರಕರಣದ ಆರೋಪಿ ಉಮರ್ ಖಾಲಿದ್‌ಗೆ 7 ದಿನಗಳ ಮಧ್ಯಂತರ ಜಾಮೀನು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.