ಎಸ್‌ಬಿಐ ರುಪೇ ಕಾರ್ಡ್ ; ಉಚಿತ ರೈಲ್ವೇ ಟಿಕೆಟ್ ಬುಕಿಂಗ್‌ಗೆ ಅವಕಾಶ
Team Udayavani, Nov 12, 2020, 6:10 AM IST
ಮಣಿಪಾಲ: ಭಾರತೀಯ ರೈಲ್ವೇಯು ಪ್ರಯಾಣಿಕರಿಗೆ ರಿವಾರ್ಡ್ ಪಾಯಿಂಟ್ ಬಳಸಿಕೊಂಡು ಉಚಿತ ರೈಲು ಟಿಕೆಟ್ ಕಾಯ್ದಿರಿಸುವ ಅವಕಾಶವನ್ನು ನೀಡುತ್ತಿದೆ.
ಮೋದಿ ಸರಕಾರದ ಆತ್ಮನಿರ್ಭರ ಭಾರತ, ಡಿಜಿಟಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾ ಅಭಿಯಾನಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಕ್ರೆಡಿಟ್ ಕಾರ್ಡ್- ಐಆರ್‌ಸಿಟಿಸಿ ಎಸ್‌ಬಿಐ ರುಪೇ ಕಾರ್ಡ್‌ಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ), ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಮತ್ತು ನ್ಯಾಶನಲ್ ಪೇಮೆಂಟ್ಸ… ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿಸಿಐ) ಕೆಲವು ತಿಂಗಳುಗಳ ಹಿಂದೆ ಚಾಲನೆ ನೀಡಿದೆ. ಐಆರ್‌ಸಿಟಿಸಿ ಎಸ್‌ಬಿಐ ರುಪೇ ಕಾರ್ಡ್ ಹೆಚ್ಚು ಅನುಕೂಲಕರ ಮತ್ತು ಸುರಕ್ಷಿತವಾಗಿದೆ. ನಿಯರ್ ಫೀಲ್ಡ… ಕಮ್ಯುನಿಕೇಷನ್ ತಂತ್ರಜ್ಞಾನ ಸಹ ಹೊಂದಿದೆ.
ಆನ್‌ಲೈನ್ ಶಾಪರ್‌ಗಳಿಗೆ ಬಂಪರ್ ಕೊಡುಗೆ
ಐಆರ್‌ಸಿಟಿಸಿ ಎಸ್‌ಬಿಐ ರುಪೇ ಕಾರ್ಡ್ ಆನ್‌ಲೈನ್ ಖರೀದಿದಾರರಿಗೆ ವಿವಿಧ ಪ್ರಯೋಜನಗಳು ಲಭಿಸಲಿದೆ. ಮೆಡ್‌ಲೈಫ್, ಫಿಟರ್‌ನಿಟಿ, ಮಿ ಆ್ಯಂಡ್ ಮಾಮ್ಸ್ ಸಹಿತ ಇತರ ಇ-ಕಾಮರ್ಸ್ ಸೈಟ್‌ಗಳಲ್ಲಿ ಶಾಪಿಂಗ್ ಮಾಡುವ ಗ್ರಾಹಕರು ಹಲವು ರೀತಿಯಲ್ಲಿ ರಿಯಾಯಿತಿಗಳನ್ನು ಪಡೆಯಬಹುದು. ಕಾರ್ಡ್ ಗ್ರಾಹಕರು ಅನಾರೋಗ್ಯಕ್ಕೀಡಾದಾಗ ಚಿಕಿತ್ಸಾ ವೆಚ್ಚದಲ್ಲಿ ಶೇ.40ರಷ್ಟು ರಿಯಾಯಿತಿ, 1 ಎಂಜಿ ಸೈಟ್‌ನಿಂದ ಔಷಧ ಖರೀದಿಸುವ ಗ್ರಾಹಕರಿಗೆ ಶೇ.18ರಷ್ಟು ವಿನಾಯಿತಿ ನೀಡುತ್ತದೆ. ಜತೆಗೆ ಆಪ್‌ಗ್ರೇಡ್ ಕೋರ್ಸ್ ಗಳಿಗಾಗಿ ದಾಖಲಾತಿ ಪಡೆದಿದ್ದರೆ ಶೇ.10 ಶುಲ್ಕ ವಿನಾಯಿತಿ ಲಭ್ಯವಾಗಲಿದ್ದು, ದಿ ಮ್ಯಾನ್ ಕಂಪೆನಿಯ ಉತ್ಪನ್ನಗಳನ್ನು ಖರೀದಿಸಿದರೆ 250 ರೂ. ಆಫರ್, ಅಪೋಲೊ ಖರೀದಿಗೆ ಶೇ.10 ರಿಯಾಯಿತಿ ಹಾಗೂ ಮಾಮೆಯರ್ತ್ ಫಾರ್ಮಸಿ ಮೇಲೆ ಮೂಲಕ ಖರೀದಿಸುವ ಉತ್ಪನ್ನಗಳಿಗೂ ಶೇ.10 ರಿಯಾಯಿತಿ ಪಡೆಯಬಹುದು.
ಕಾರ್ಡ್‌ನ ವೈಶಿಷ್ಟ್ಯಗಳು
– 2021ರ ಮಾರ್ಚ್ 31ರ ವರೆಗೆ ಶುಲ್ಕವಿಲ್ಲ.
– ಐಆರ್‌ಸಿಟಿಸಿ ವೆಬ್ ಪೋರ್ಟಲ್ ಮೂಲಕ ಟಿಕೆಟ್ ಬುಕ್ ಮಾಡಿದರೆ ರಿವಾರ್ಡ್ (1 ರಿವಾರ್ಡ್ ಪಾಯಿಂಟ್ = ರೂ. 1)ಪಾಯಿಂಟ್ ಸಿಗುತ್ತದೆ.
– ಗರಿಷ್ಠ ಶೇ 10ರಷ್ಟು ಹಿಮ್ಮುಖ ಕೊಡುಗೆ ಲಭ್ಯವಿದೆ. ಬಳಕೆದಾರರು ಉಚಿತ ರೈಲು ಟಿಕೆಟ್‌ಗೆ ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಶಿಫಾರಸು ಮಾಡಿದರೂ ಅಂಕಗಳು ಸಿಗುತ್ತವೆ.
– ಮೊದಲ 45 ದಿನಗಳಲ್ಲಿ 500 ರೂ. ಅಥವಾ ಅದಕ್ಕಿಂತ ಹೆಚ್ಚಿನ ವಹಿವಾಟಿನ ಮೇಲೆ ಬಳಕೆದಾರರು 350 ಬೋನಸ್ ರಿವಾರ್ಡ್ ಪಾಯಿಂಟ್ ಪಡೆಯಬಹುದು.
-ಐಆರ್‌ಸಿಟಿಸಿ ವೆಬ್‌ಸೈಟ್ ಮೂಲಕ ರೈಲ್ವೇ ಟಿಕೆಟ್ ಬುಕ್ಕಿಂಗ್‌ನಲ್ಲಿ ಶೇ.1ರಷ್ಟು ವಹಿವಾಟು ಶುಲ್ಕ ಮನ್ನಾ.
-ಎಲ್ಲ ಪೆಟ್ರೋಲ್ ಪಂಪ್‌ಗ್ಳಲ್ಲಿ ಶೇ.1ರಷ್ಟು ಇಂಧನ ಮೇಲಿನ ಹೆಚ್ಚುವರಿ ಶುಲ್ಕ ಮನ್ನಾ.
-ಸಂಪರ್ಕರಹಿತ ಮತ್ತು ಆನ್‌ಲೈನ್ ವಹಿವಾಟುಗಳಿಗೆ ನ್ಯಾಶನಲ್ ಕಾಮನ್ ಮೊಬಿಲಿಟಿ ಕಾರ್ಡ್ (ಎನ್‌ಸಿಎಂಸಿ) ಅನ್ನು ಮೆಟ್ರೋ, ಟೋಲ…, ಪ್ಲಾಟ್ ಫಾರ್ಮ್ ಟಿಕೆಟ್ ಸೇರಿದಂತೆ ಇತರ ಸೇವೆಗಳನ್ನು ಶೀಘ್ರವೇ ಪರಿಚಯಿಸಲಾಗುತ್ತದೆ.
-ಐಆರ್‌ಸಿಟಿಸಿ ಎಸ್‌ಬಿಐ ರುಪೇ ಕಾರ್ಡ್ ಆನ್‌ಲೈನ್ ಶಾಪರ್‌ಗಳಿಗೆ ವಿವಿಧ ಪ್ರಯೋಜನಗಳನ್ನು ಸಹ ಪಡೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.