ವಕೀಲರಿಗೆ ಜೇಷ್ಠತೆ ವೇಳೆ ಪಾರದರ್ಶಕತೆಗೆ ಸೂಚನೆ
Team Udayavani, Oct 13, 2017, 10:02 AM IST
ಹೊಸದಿಲ್ಲಿ: ಭಾರತದ ನ್ಯಾಯಾ ಲಯಗಳ ನ್ಯಾಯವಾದಿಗಳಿಗೆ ಜೇಷ್ಠತೆಯನ್ನು ನೀಡುವ ವ್ಯವಸ್ಥೆಯನ್ನು ಪಾರದರ್ಶಕವಾಗಿಸುವ ನಿಟ್ಟಿ ನಲ್ಲಿ ಸುಪ್ರೀಂ ಕೋರ್ಟ್ ಮಹತ್ವದ ಹೆಜ್ಜೆಯಿ ಟ್ಟಿದ್ದು, ಕೆಲವು ಮಾರ್ಗಸೂಚಿಗಳನ್ನು ನೀಡಿದೆ.
ಹಿರಿಯ ನ್ಯಾಯವಾದಿ ಇಂದಿರಾ ಜೈಸಿಂಗ್ ಅವರು, ವಕೀಲರಿಗೆ ಉನ್ನತ ಹುದ್ದೆಗಳನ್ನು ನೀಡುವ ಕುರಿತಂತೆ ಪಾರದರ್ಶಕತೆ ತರ ಬೇಕೆಂದು ಆಗ್ರಹಿಸಿ ಸಲ್ಲಿಸಿದ್ದ ಪಿಐಎಲ್ ಹಿನ್ನೆಲೆ ಯಲ್ಲಿ ಈ ಮಾರ್ಗಸೂಚಿಗಳನ್ನು ಪ್ರಕಟಿಸಲಾ ಗಿದೆ. ವಕೀಲರಿಗೆ ಜೇಷ್ಠತೆ ನೀಡುವ ವಿಚಾರದಲ್ಲಿ ಈಗ ಚಾಲ್ತಿಯಲ್ಲಿರುವ ವ್ಯವಸ್ಥೆಯನ್ನು ಕೈಬಿಟ್ಟು ಹೊಸ ವ್ಯವಸ್ಥೆ ಜಾರಿಗೆ ತರಬೇಕೆಂದು ಆಶಿಸಿರುವ ನ್ಯಾ| ರಂಜನ್ ಗೊಗೊಯ್ ನೇತೃ ತ್ವದ ನ್ಯಾಯಪೀಠ, ಇದಕ್ಕಾಗಿ ಒಂದು ಕಾರ್ಯಾಲಯ, ಅದರ ಮೇಲ್ಮಟ್ಟದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯ ಮೂರ್ತಿಗಳ ನೇತೃತ್ವದಲ್ಲಿ ಒಂದು ಉನ್ನತ ಸಮಿತಿ ರಚಿಸಲು ಸಲಹೆ ನೀಡಿದೆ. ಜತೆಗೆ, ಉನ್ನತ ಹುದ್ದೆಗೇರುವವರೂ ಸಂದರ್ಶನ ಎದುರಿಸಬೇಕು ಎಂದು ಹೇಳಿದೆ.
ಕಾರ್ಯಾಲಯವು ವಿವಿಧ ನ್ಯಾಯಾಲಯ ಗಳಲ್ಲಿ ಸೇವೆ ಸಲ್ಲಿಸುತ್ತಿರುವ ವಕೀಲರ ಪಟ್ಟಿ ಯೊಂದನ್ನು ತಯಾರಿಸಿ ಇವರಲ್ಲಿ ಜೇಷ್ಠತೆಗೆ ಅರ್ಹರಾದವರ ಮತ್ತೂಂದು ಪಟ್ಟಿಯನ್ನು ಕಾಲ ಕಾಲಕ್ಕೆ ತನ್ನ ಮೇಲಿರುವ ಉನ್ನತ ಸಮಿತಿಗೆ ಸಲ್ಲಿಸಬೇಕು. ಅಲ್ಲದೆ, ಈ ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲೂ ಪ್ರಕಟಿಸಿ, ಆಕ್ಷೇಪಣೆ ಹಾಗೂ ಸಲಹೆಗಳ ಸಲ್ಲಿಕೆಗೆ ಕಾಲಾವಕಾಶ ನೀಡಬೇಕು.
ಇತ್ತ, ಕಾರ್ಯಾಲಯದಿಂದ ಬಂದ ಪಟ್ಟಿಯ ಬಗ್ಗೆ ಉನ್ನತ ಸಮಿತಿಯು ಕೂಲಂಕಶ ಅಧ್ಯಯನ ಮಾಡಿ, ಪ್ರತಿ ವ್ಯಕ್ತಿಯ ಆವರೆಗಿನ ಸೇವಾವಧಿ, ವ್ಯಕ್ತಿತ್ವ, ಸಾರ್ವಜನಿಕ ಹಿತಾಸಕ್ತಿಗಳ ಪ್ರಕರಣಗಳನ್ನು ಮುನ್ನಡೆಸಿದ ರೀತಿ – ಇವೆಲ್ಲವನ್ನೂ ಮನದಟ್ಟು ಮಾಡಿಕೊಂಡು ಅರ್ಹರೆನಿಸಿದ ವಕೀಲರಿಗೆ ಜೇಷ್ಠತೆ ನೀಡಿ ಪಟ್ಟಿ ತಯಾರಿಸಬೇಕು. ಹೀಗೆ, ಉನ್ನತ ಸಮಿತಿಯು ಅಂತಿಮ ಗೊಳಿಸಿದ ಪಟ್ಟಿಯು ಮತ್ತೆ ಮುಕ್ತ ಕಲಾಪ ವೊಂದರಲ್ಲಿ (ಸುಪ್ರೀಂ ಕೋರ್ಟ್‌ಗೆ ಸಂಬಂಧ ಪಟ್ಟರೆ ಸುಪ್ರೀಂ ಕೋರ್ಟ್‌ನಲ್ಲಿ, ಹೈಕೋರ್ಟ್ ಗೆ ಸಂಬಂಧಪಟ್ಟರೆ ಹೈಕೋರ್ಟ್ ಕಲಾಪದಲ್ಲಿ) ಚರ್ಚೆಗೊಂಡ ಅನಂತರ ಪಟ್ಟಿಯಲ್ಲಿನ ಪ್ರತಿ ಯೊಬ್ಬ ವಕೀಲರ ಬಗ್ಗೆ ಸರ್ವಾನುಮತ ಅಥವಾ ಬಹುಮತದ ಆಧಾರದ ಮೇಲೆ ಜೇಷ್ಠತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
PKL Season 11: ಇಂದು ಪ್ರೊ ಕಬಡ್ಡಿ ಫೈನಲ್… ಹರಿಯಾಣ – ಪಾಟ್ನಾ ಹಣಾಹಣಿ
BBK11: 13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿಯೇ ಎಲಿಮಿನೇಟ್
RBI: ಯುಪಿಐ ಮೂಲಕ ಡಿಜಿಟಲ್ ವ್ಯಾಲೆಟ್ ಹಣ ಬಳಕೆಗೆ ಅಸ್ತು
Madikeri: ಗುಂಡು ಹೊಡೆದು ಕಾರ್ಮಿಕನ ಕೊ*ಲೆ; ವ್ಯಕ್ತಿ ಬಂಧನ
Daily Horoscope: ಅಪಾತ್ರರಿಗೆ ಸಲಹೆ ನೀಡಿ ಅವಮಾನ ಹೊಂದದಿರಿ, ಭವಿಷ್ಯದ ಕುರಿತು ಚಿಂತನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.