ರಾಷ್ಟ್ರೀಯ ಭಾಷೆಯಾಗಿ ಸಂಸ್ಕೃತ: ಪಿಐಎಲ್ ವಜಾಗೊಳಿಸಿದ ಸುಪ್ರೀಂ ಕೋರ್ಟ್
Team Udayavani, Sep 2, 2022, 1:21 PM IST
ಹೊಸದಿಲ್ಲಿ: ಸಂಸ್ಕೃತವನ್ನು ಭಾರತದ ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (ಪಿಐಎಲ್) ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ. ಈ ವಿಚಾರವನ್ನು ಚರ್ಚೆ ಮಾಡಲು ನ್ಯಾಯಾಲಯ ಸರಿಯಾದ ವೇದಿಕೆಯಲ್ಲ ಎಂದು ಪೀಠ ಹೇಳಿದೆ.
“ನೀವು ನಿಮ್ಮ ಪ್ರಾರ್ಥನೆಯನ್ನು ಸಂಸ್ಕೃತದಲ್ಲಿ ರಚಿಸುತ್ತೀರಿ. ನಾವು ಏಕೆ ನೋಟೀಸ್ ಅಥವಾ ಘೋಷಣೆ ಮಾಡಬೇಕು? ಪ್ರಚಾರಕ್ಕಾಗಿಯೇ? ನಿಮ್ಮ ಕೆಲವು ಅಭಿಪ್ರಾಯಗಳನ್ನು ನಾವು ಹಂಚಿಕೊಳ್ಳಬಹುದು, ಆದರೆ ಈ ಬಗ್ಗೆ ಚರ್ಚೆ ನಡೆಸಲು ಸರಿಯಾದ ವೇದಿಕೆ ಸಂಸತ್ತು. ಇದಕ್ಕೆ ಸಂವಿಧಾನದಲ್ಲಿ ತಿದ್ದುಪಡಿಯ ಅಗತ್ಯವಿದೆ” ಎಂದುಸುಪ್ರೀಂ ಕೋರ್ಟ್ ಮನವಿಯನ್ನು ತಿರಸ್ಕರಿಸಿತು.
ಈ ಪಿಐಎಲ್ ಅನ್ನು ಗುಜರಾತ್ ಸರ್ಕಾರದ ಮಾಜಿ ಹೆಚ್ಚುವರಿ ಕಾರ್ಯದರ್ಶಿ ಕೆ.ಜಿ. ವಂಝಾರ ಸಲ್ಲಿಸಿದ್ದರು. ಹಿಂದೂ ಅಧಿಕೃತ ಭಾಷೆಯಾಗಿ ಮುಂದುವರಿಯುವ ಸಂದರ್ಭದಲ್ಲಿ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಘೋಷಿಸಲು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು.
ಇದನ್ನೂ ಓದಿ:ವೈದ್ಯನಿಗೆ ಬ್ಲ್ಯಾಕ್ ಮೇಲ್: ಮಹಿಳೆಯ ಬಂಧನ; ತಲೆ ಮರೆಸಿಕೊಂಡಿರುವ ಇಬ್ಬರು ವೈದ್ಯರು
“ಸಂಸ್ಕೃತವು ಸಂಸ್ಕೃತದ ಜೈವಿಕ ವೈಜ್ಞಾನಿಕ ಫೋನೆಟಿಕ್ ರಚನೆಯನ್ನು ಹೊಂದಿದೆ, ಇದು ಮೆದುಳು, ಲಯಬದ್ಧ ಉಚ್ಚಾರಣೆ ಮತ್ತು ಮಕ್ಕಳಲ್ಲಿ ಕಂಠಪಾಠ ಮಾಡುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸುತ್ತದೆ” ಎಂದು ಮನವಿಯಲ್ಲಿ ಹೇಳಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Poll code violations ; ಖರ್ಗೆ, ನಡ್ಡಾ ಪ್ರತಿಕ್ರಿಯೆ ಕೇಳಿದ ಚುನಾವಣ ಆಯೋಗ
Rahul Gandhi ಭರವಸೆಗಳನ್ನು ನೀಡುತ್ತಾರೆ ಮತ್ತು ವಿದೇಶಕ್ಕೆ ಹಾರುತ್ತಾರೆ: ಶಾ ವಾಗ್ದಾಳಿ
PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ
Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ
Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.