ಕೋರ್ಟ್ ನಿಂದನೆ: ರಾವ್, DoPಗೆ ಸುಪ್ರೀಂ ಶಿಕ್ಷೆ, 1 ಲಕ್ಷ ರೂ. ದಂಡ
Team Udayavani, Feb 12, 2019, 7:06 AM IST
ಹೊಸದಿಲ್ಲಿ : ಸಿಬಿಐನ ಆಗಿನ ಪ್ರಭಾರ ನಿರ್ದೇಶಕ ಎಂ ನಾಗೇಶ್ವರ ರಾವ್ ಮತ್ತು ಸಿಬಿಐ ನ ಪ್ರಾಸಿಕ್ಯೂಶನ್ ನಿರ್ದೇಶಕ (DoP) ಎಸ್ ಭಾಸು ರಾಮ್ ಅವರನ್ನು ಸುಪ್ರೀಂ ಕೋರ್ಟ್ ಇಂದು ಮಂಗಳವಾರ ಕೋರ್ಟ್ ನಿಂದನೆಯ ಅಪರಾಧಿಗಳೆಂದು ಪರಿಗಣಿಸಿತು.
ಮಾತ್ರವಲ್ಲದೆ ಇಂದು ಕೋರ್ಟ್ ಕಲಾಪ ಮುಗಿಯುವ ತನಕ ನ್ಯಾಯಾಲಯದಲ್ಲಿ ಶಿಕ್ಷೆಯ ರೂಪದಲ್ಲಿ ಕುಳಿತಿರಲು ಅವರಿಗೆ ಆದೇಶಿಸಿತು.
ಬಿಹಾರದ ಆಸರೆ ಮನೆ ಲೈಂಗಿಕ ಹಗರಣದ ತನಿಖೆ ನಡಸುತ್ತಿದ್ದ ಸಿಬಿಐ ಜಂಟಿ ನಿರ್ದೇಶಕ ಎ ಕೆ ಶರ್ಮಾ ಅವರನ್ನು ವರ್ಗಾಯಿಸುವ ಮೂಲಕ ಸುಪ್ರೀಂ ಕೋರ್ಟಿನ ಆದೇಶಕ್ಕೆ ಉದ್ದೇಶಪೂರ್ವಕ ಅವಿಧೇಯತೆ ತೋರಿದ ಅಪರಾಧಕ್ಕಾಗಿ ರಾವ್ ಮತ್ತು ರಾಮ್ ಅವರಿಗೆ ಸರ್ವೋಚ್ಚ ನ್ಯಾಯಾಲಯ ತಲಾ 1 ಲಕ್ಷ ರೂ. ದಂಡವನ್ನು ವಿಧಿಸಿತು.
ಶರ್ಮಾ ಅವರನ್ನು ವರ್ಗಾಯಿಸಿದ್ದಕ್ಕಾಗಿ ಸುಪ್ರೀಂ ಕೋರ್ಟ್ ಪ್ರಭಾರ ಸಿಬಿಐ ನಿರ್ದೇಶಕ ನಾಗೇಶ್ವರ್ ರಾವ್ ಮತ್ತು DoP ಭಾಸು ರಾಮ್ ಗೆ ಕೋರ್ಟ್ ನಿಂದನೆ ನೊಟೀಸ್ ಜಾರಿ ಮಾಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬಿಗಡಾಯಿಸಿದ ವಾಯುಮಾಲಿನ್ಯ… ಕೃತಕ ಮಳೆಗೆ ಅನುಮತಿ ಕೋರಿ ಕೇಂದ್ರಕ್ಕೆ ಪತ್ರ
Dense Smog: ಸರಣಿ ಅಪಘಾತ… ಇಬ್ಬರು ಮೃತ್ಯು, ಹಲವು ಮಂದಿಗೆ ಗಾಯ
Video: ಮದುವೆ ಸಂಭ್ರಮದಲ್ಲಿದ್ದ ವರನಿಗೆ ಹೃದಯಾಘಾತ… ಆಸ್ಪತ್ರೆ ದಾರಿ ಮಧ್ಯೆ ಮೃತ್ಯು
Maharastra: ಕಾರಿನ ಮೇಲೆ ಕಲ್ಲು ತೂರಾಟ… ಮಾಜಿ ಸಚಿವ ಅನಿಲ್ ದೇಶಮುಖ್ ಹಣೆಗೆ ಗಾಯ
Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ
MUST WATCH
ಹೊಸ ಸೇರ್ಪಡೆ
Sagara: ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪರನ್ನು ತಕ್ಷಣ ಬಂಧಿಸಿ; ಕಾಂಗ್ರೆಸ್ ಆಗ್ರಹ
Ullal: ನ್ಯೂಪಡ್ಪುವಿನಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಉದ್ಘಾಟನೆ
Hosanagara: ನಗರದ ಹೋಬಳಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ: ಬಿಜೆಪಿ ಪ್ರತಿಭಟನೆ
Mangaluru: ಪಿಲಿಕುಳದಲ್ಲಿ ಚಿಟ್ಟೆಪಾರ್ಕ್; ಪ್ರವಾಸಿಗರಿಗೆ ಹೊಸ ಆಕರ್ಷಣೆ
Mangaluru: ಕಾರು ಢಿಕ್ಕಿಯಾಗಿ ಮಹಿಳೆ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.