ಕೇರಳ ಕರಾವಳಿ ವಲಯದ 5 ಅಕ್ರಮ ಗಗನಚುಂಬಿ ಕಟ್ಟಡ ಕೆಡಹಲು ಸುಪ್ರೀಂ ಆದೇಶ
Team Udayavani, May 9, 2019, 11:46 AM IST
ಹೊಸದಿಲ್ಲಿ : ಕೇರಳದ ಕೊಚ್ಚಿ ಸಮೀಪ ಮರಾಡು ಮುನಿಸಿಪಾಲಿಟಿ ಪ್ರದೇಶದಲ್ಲಿ ಕರಾವಳಿ ವಲಯ ನಿಯಮ ಉಲ್ಲಂಘನೆ ಗೈದು ನಿರ್ಮಿಸಲಾಗಿರುವ ಐದು ಗಗನಚುಂಬಿ ಕಟ್ಟಡಗಳನ್ನು ಕೆಡಹುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
ಸುಪ್ರೀಂ ಕೋರ್ಟ್ ಕೆಡಹಲು ಆದೇಶಿಸಿರುವ ಐದು ಕಟ್ಟಡಗಳೆಂದರೆ ಅಲ್ಫಾ ವೆಂಚೂರ್, ಹೋಲಿ ಫೇತ್, ಕಾಯಲೋರಮ್, ಹಾಲಿಡೇ ಹೆರಿಟೇಜ್ ಮತ್ತು ಜೈನ್ ಹೌಸಿಂಗ್.
ಕರಾವಳಿ ನಿರ್ಬಂಧಿತ ವಲಯ ನಿಯಮಗಳ ಉಲ್ಲಂಘನೆ ಗೈದು ನಿರ್ಮಿಸಲಾಗಿರುವ ಈ ಐದು ಕಟ್ಟಡಗಳನ್ನು ಒಂದು ತಿಂಗಳ ಒಳಗೆ ಉರುಳಿಸಿ, ಆ ಬಳಿಕ ವರದಿಯೊಂದನ್ನು ತನಗೆ ಸಲ್ಲಿಸುವಂತೆ ಜಸ್ಟಿಸ್ ಅರುಣ್ ಮಿಶ್ರ ನೇತೃತ್ವದ ಪೀಠ ಆದೇಶಿಸಿದೆ.
ಕರಾವಳಿ ವಲಯದಲ್ಲಿ ಉಂಟಾಗುವ ಪ್ರವಾಹ ಮತ್ತು ಭಾರಿ ಮಳೆಯ ಅಪಾಯಕ್ಕೆ ಕಾನೂನು ಬಾಹಿರ ಕಟ್ಟಡಗಳು ಗುರಿಯಾಗುವುದರ ನಷ್ಟವನ್ನು ರಾಜ್ಯ ಸರಕಾರ ಭರಿಸುವಂತಿಲ್ಲ ಎಂದು ಪೀಠ ತನ್ನ ಆದೇಶದಲ್ಲಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.