ರಾಮ್ ಕೀ ಜನ್ಮಭೂಮಿ ಚಿತ್ರ ಬಿಡುಗಡೆ ತಡೆಗೆ ಸುಪ್ರೀಂ ಕೋರ್ಟ್ ನಕಾರ
Team Udayavani, Mar 28, 2019, 12:20 PM IST
ಹೊಸದಿಲ್ಲಿ :: ಇದೇ ಮಾರ್ಚ್ 29ರಂದು ದೇಶಾದ್ಯಂತ ತೆರೆ ಕಾಣಲಿರುವ ರಾಮ್ ಕೀ ಜನ್ಮಭೂಮಿ ಚಿತ್ರದ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಈ ಚಿತ್ರವು ತೆರೆಕಂಡಲ್ಲಿ ಪ್ರಕೃತ ಸಾಗುತ್ತಿರುವ ಅಯೋಧ್ಯೆ ಭೂವಿವಾದ ಸಂಧಾನ ಮಾತುಕತೆಯ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿ ಚಿತ್ರಕ್ಕೆ ತಡೆ ನೀಡಬೇಕು ಎಂದು ಕೋರಿದ ಅರ್ಜಿಯು ಇಂದು ಜಸ್ಟಿಸ್ ಎಸ್ ಎ ಬೋಬಡೆ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂತು.
ರಾಮ್ ಕೀ ಜನ್ಮಭೂಮಿ ಚಿತ್ರ ಬಿಡುಗಡೆಗೂ ಅಯೋಧ್ಯೆ ಭೂವಿವಾದ ಸಂಧಾನ ಮಾತುಕತೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ ಸುಪ್ರೀಂ ಪೀಠ, ಅರ್ಜಿಯ ವಿಚಾರಣೆಯನ್ನು ಎರಡು ವಾರಗಳ ಬಳಿಕ ನಿಗದಿಸಲು ಸೂಚಿಸಿತು.
ರಾಮ ಕೀ ಜನ್ಮಭೂಮಿ ಚಿತ್ರವನ್ನು ಸನೋಜ್ ಮಿಶ್ರಾ ನಿರ್ದೇಶಿಸಿದ್ದಾರೆ. ಈ ಚಿತ್ರದ ಕಥೆಯನ್ನು ವಿವಾದಾತ್ಮಕ ರಾಮ ಮಂದಿರ ಕುರಿತಾಗಿ ಹೆಣೆಯಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…