ದಾವೂದ್ ಆಸ್ತಿ ವಶಪಡಿಸದಿರಲು ಸಂಬಂಧಿಕರ ಅರ್ಜಿ: ಸುಪ್ರೀಂನಿಂದ ವಜಾ
Team Udayavani, Apr 20, 2018, 12:01 PM IST
ಹೊಸದಿಲ್ಲಿ : 1993ರ ಮುಂಬಯಿ ಬ್ಲಾಸ್ಟ್ ನ ಮಾಸ್ಟರ್ ಮೈಂಡ್ ಮತ್ತು ಡಿ ಕಂಪೆನಿ ಬಾಸ್ ಆಗಿರುವ ಉಗ್ರ ದಾವೂದ್ ಇಬ್ರಾಹಿಂ ಅಕ್ರಮ ಆಸ್ತಿಪಾಸ್ತಿಗಳನ್ನು ವಶಪಡಿಸಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಇಂದು ಶುಕ್ರವಾರ ಕೇಂದ್ರ ಸರಕಾರಕ್ಕೆ ಆದೇಶಿಸಿತು.
ಮುಂಬಯಿಯಲ್ಲಿನ ದಾವೂದ್ ಒಡೆತನದ ವಸತಿ ಕಟ್ಟಡವನ್ನು ಮುಟ್ಟು ಗೋಲು ಹಾಕದಂತೆ ದಾವೂದ್ ತಾಯಿ ಅಮೀನಾ ಬೀ (ವಿಧಿವಶರಾಗಿರುವ ಇವರ ಕಾನೂನುಸಮ್ಮತ ಪ್ರತಿನಿಧಿಗಳು) ಮತ್ತು ಸಹೋದರಿ ಹಸೀನಾ ಇಬ್ರಾಹಿಂ ಪಾರ್ಕ್ರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ಜಸ್ಟಿಸ್ ಆರ್ ಕೆ ಅಗ್ರವಾಲ್ ನೇತ್ರತ್ವದ ಪೀಠ ವಜಾಗೊಳಿಸಿತು.
ಈ ವಸತಿ ಕಟ್ಟಡಗಳ ಸರಕಾರ ವಶಕ್ಕೆ ಪಡೆಯುವ ಪ್ರಕ್ರಿಯೆಯು ಕಾನೂನು ಬಾಹಿರವಾಗಿದ್ದು ಇದರ ಮುಟ್ಟುಗೋಲಿಗೆ ಸಂಬಂಧಿಸಿ ತಮಗೆ ಯಾವುದೇ ನೊಟೀಸ್ ಜಾರಿ ಮಾಡಲಾಗಿಲ್ಲ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.
ದಿಲ್ಲಿ ಹೈಕೋರ್ಟ್ ತಮ್ಮ ಅರ್ಜಿಯನ್ನು ಕಳ್ಳಸಾಗಣೆಗಾರರು ಮತ್ತು ವಿದೇಶ ವಿನಿಮಯ ಅಕ್ರಮ ನಡೆಸುವವರ ವಿರುದ್ಧ (ಆಸ್ತಿ ಮುಟ್ಟುಗೋಲು) ಕಾಯಿದೆಯಡಿ ತಮ್ಮ ಅರ್ಜಿಯನ್ನು ತಿರಸ್ಕರಿಸಿತ್ತು ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ವಾದಿಸಿದ್ದರು.
ದಾವೂದ್ ಇಬ್ರಾಹಿಂ ಒಡೆತನದಲ್ಲಿ ಮುಂಬಯಿಯ ನಾಗಪಾಡದಲ್ಲಿ ಒಟ್ಟು ಏಳು ವಸತಿ ಕಟ್ಟಡ ಇದೆ. ಇವುಗಳಲ್ಲಿ ಎರಡು ಆತನ ತಾಯಿ ಅಮೀನಾ ಅವರ ಹೆಸರಲ್ಲಿದೆ; ಉಳಿದ ಐದು ಹಸೀನಾ ಅವರ ಹೆಸರಲ್ಲಿದೆ. ಆದರೆ ಇವೆಲ್ಲವನ್ನೂ ದಾವೂದ್ ಇಬ್ರಾಹಿಂ ಅಕ್ರಮವಾಗಿ ಕಲೆ ಹಾಕಿರುವುದರಿಂದ ಅದನ್ನು ವಶಪಡಿಸಿಕೊಳ್ಳುವ ಅಧಿಕಾರ ಸರಕಾರಕ್ಕೆ ಇದೆ ಎಂದು ಕೋರ್ಟ್ ಹೇಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
AAP ತೊರೆದ ಬೆನ್ನಲ್ಲೇ ಬಿಜೆಪಿ ಸೇರ್ಪಡೆಗೊಂಡ ಕೇಜ್ರಿವಾಲ್ ಆಪ್ತ ಕೈಲಾಶ್ ಗೆಹ್ಲೋಟ್!
Gujarat: ಹಿರಿಯ ವಿದ್ಯಾರ್ಥಿಗಳ Ragging-ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿ ಸಾ*ವು
Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್ಸಾನಿಕ್ ಅಸ್ತ್ರ !
Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ
Maharashtra: ಮತಗಟ್ಟೆ ಬಳಿ ಚಪ್ಪಲಿ ನಿಷೇಧಿಸಿ ಎಂದು ಮಹಾಪಕ್ಷೇತರ ಅಭ್ಯರ್ಥಿ ಮನವಿ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.