ಎಸ್ಸಿ , ಎಸ್ಟಿ ಕಾಯ್ದೆಗೆ ಮತ್ತೆ ಸುಪ್ರೀಂ ಶಕ್ತಿ


Team Udayavani, Oct 2, 2019, 5:18 AM IST

sc

ಹೊಸದಿಲ್ಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ತೀರ್ಪಿಗೆ ಮತ್ತೆ ಬಲ ಬಂದಿದೆ. ತನ್ನದೊಂದು ತೀರ್ಪಿನ ಕಾರಣದಿಂದಾಗಿ ನಿಸ್ಸಾರವಾಗಿದ್ದ ಈ ಕಾಯ್ದೆಯನ್ನು, ಸ್ವತಃ ಸುಪ್ರೀಂ ಕೋರ್ಟ್‌ ಗಟ್ಟಿಗೊಳಿಸಿದೆ.

ಪರಿಶಿಷ್ಟ ಜಾತಿ, ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ಜಾತಿ ನಿಂದನೆ ಪ್ರಕರಣದಲ್ಲಿ ಎಫ್ಐಆರ್‌ ದಾಖಲಾದ ತತ್‌ಕ್ಷಣ ಆರೋಪಿಗಳನ್ನು ಬಂಧಿ ಸುವ ಅವಕಾಶವನ್ನು ರದ್ದುಪಡಿಸಿದ್ದ ಕೋರ್ಟ್‌, ಹೊಸ ಮಾರ್ಗಸೂಚಿಗಳುಳ್ಳ ತೀರ್ಪನ್ನು ಕಳೆದ ವರ್ಷ ಪ್ರಕಟ ಮಾಡಿತ್ತು. ಮಂಗಳವಾರ ನಡೆದ ವಿಚಾರಣೆಯಲ್ಲಿ ಈ ತೀರ್ಪಿನ ಕೆಲವು ಅಂಶಗಳನ್ನು ಅದು ವಾಪಸ್‌ ಪಡೆದು, ತೀರ್ಪನ್ನು ಮತ್ತಷ್ಟು ಗಟ್ಟಿ ಮಾಡಿದೆ. ಅಂದರೆ ಇನ್ನು ಮುಂದೆ ಜಾತಿ ನಿಂದನೆ ದೂರು ದಾಖಲಾದ ಕೂಡಲೇ ಆರೋಪಿಯನ್ನು ಬಂಧಿಸಬಹುದು.

ಕೋರ್ಟ್‌ ಹೇಳಿದ್ದೇನು?
ನ್ಯಾಯಮೂರ್ತಿಗಳಾದ ಅರುಣ್‌ ಮಿಶ್ರಾ, ಎ.ಆರ್‌. ಶಾ ಮತ್ತು ಬಿ.ಆರ್‌. ಗವಾಯಿ ಅವರುಳ್ಳ ಪೀಠವು ಹಿಂದಿನ ತೀರ್ಪಿನಲ್ಲಿ ನೀಡಲಾಗಿದ್ದ ಮಾರ್ಗಸೂಚಿಗಳು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿವೆ. ಸಮಾನತೆಗಾಗಿ ಪರಿಶಿಷ್ಟರು ಈಗಲೂ ಹೋರಾಡುತ್ತಿದ್ದಾರೆ ಎಂದು ಹೇಳಿತು.

ಎಲ್ಲರೂ ಸುಳ್ಳು ದೂರು ನೀಡುವುದಿಲ್ಲ
ಜತೆಗೆ ಯಾರೋ ಒಬ್ಬರು ಎಸ್ಸಿ ಮತ್ತು ಎಸ್ಟಿ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎಂದ ಮಾತ್ರಕ್ಕೆ ಕಾಯ್ದೆಯ ಪರಿಣಾಮಕಾರಿ ಅಂಶಗಳನ್ನು ಬದಲಿಸುವುದು ಸರಿಯಲ್ಲ. ಸುಳ್ಳು ದೂರುಗಳನ್ನು ಕೇವಲ ಪರಿಶಿಷ್ಟರಷ್ಟೇ ನೀಡು ವುದಿಲ್ಲ. ಮೇಲ್ವರ್ಗದ ಜನರೂ ನೀಡುತ್ತಾರೆ ಎಂದು ನ್ಯಾಯಪೀಠ ಹೇಳಿತು.

ಹಿಂದಿನ ಸೂಚನೆಗಳೇನು?
ಸೂಚನೆ 3: ಜಾತಿ ನಿಂದನೆ ಆರೋಪಕ್ಕೆ ಗುರಿ ಯಾಗಿರುವಾತ ಸರಕಾರಿ ನೌಕರನಾಗಿದ್ದಲ್ಲಿ ಆತನನ್ನು ಬಂಧಿಸುವ ಮುನ್ನ ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಬೇಕು. ಆರೋಪಿಯು ಸರಕಾರಿ ನೌಕರನಾಗಿರದಿದ್ದಲ್ಲಿ, ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿಯ ಗಮನಕ್ಕೆ ದೂರನ್ನು ತಂದು, ಅವರಿಂದ ಲಿಖೀತ ರೂಪದ ಅನುಮತಿ ಪಡೆದ ಅನಂತರವಷ್ಟೇ ಬಂಧಿಸಬೇಕು. ಇನ್ನು ಆರೋಪಿಗಳ ಬಂಧನಾವಧಿ ವಿಸ್ತರಣೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರ ಆಣತಿಯನ್ನು ಪಾಲಿಸಬೇಕು. ಆರೋಪಿಯ ಹೇಳಿಕೆಗಳನ್ನು ದಾಖಲಿಸಬೇಕು ಎಂಬ ಆವಶ್ಯಕತೆ ಕಂಡುಬಂದಲ್ಲಿ ಮಾತ್ರ ಈ ಸೂಚನೆ ಅನುಸರಿಸಬೇಕು.

ಸೂಚನೆ 4: ದೂರುದಾರರು ಮಾಡಿರುವ ಆರೋಪ ಗಳು ಜಾತಿ ನಿಂದನೆ ಆರೋಪಕ್ಕೆ ನಿಜ ವಾಗಿಯೂ ಅರ್ಹವೆ, ಅಲ್ಲವೇ ಎಂಬುದನ್ನು ಡಿಎಸ್‌ಪಿ ನೇತೃತ್ವದಲ್ಲಿ ತನಿಖೆಗೊಳಪಡಿಸಬೇಕು.

ಸೂಚನೆ 5: ಸೂಚನೆ 3 ಮತ್ತು 4ನ್ನು ಉಲ್ಲಂ ಸಿ ದಲ್ಲಿ ಅಂಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕು.

ತೀರ್ಪಿನಲ್ಲಿನ ಪ್ರಮುಖಾಂಶಗಳು
– ಕೆಳವರ್ಗದಲ್ಲಿರುವುದರಿಂದ ಕಾಯ್ದೆಯ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದೇ ತಪ್ಪು ಕಲ್ಪನೆ.

– ಮೀಸಲಾತಿಯ ಹೊರತಾಗಿಯೂ ಅಭಿವೃದ್ಧಿಯ ಫ‌ಲ ಎಸ್‌ಸಿ-ಎಸ್‌ಟಿ ವರ್ಗಕ್ಕೆ ಸಿಕ್ಕೇ ಇಲ್ಲ .

– ಹಲವಾರು ರಾಜ್ಯಗಳಲ್ಲಿ ಇನ್ನೂ ಜಾರಿಯಲ್ಲಿದೆ ಅಸ್ಪ ƒಶ್ಯತೆ

– ಗ್ರಾಮಾಂತರ, ಕುಗ್ರಾಮಗಳಲ್ಲಿ ಪರಿಸ್ಥಿತಿ ಇನ್ನೂ ಚಿಂತಾಜನಕ.

– ಚರಂಡಿ ಸ್ವತ್ಛತಾ ಕಾರ್ಮಿಕರನ್ನೂ ಸರಿಯಾಗಿ ನೋಡಿಕೊಳ್ಳುತ್ತಿಲ್ಲ.

ನ್ಯಾಯಪೀಠ ಹೇಳಿದ್ದೇನು?
ಈ ಮೂರೂ ಮಾರ್ಗಸೂಚಿಗಳು, ಜಾತಿನಿಂದನೆ ಪ್ರಕರಣಗಳ ತನಿಖೆಯ ವೇಗವನ್ನು ಕುಂಠಿತಗೊಳಿಸುತ್ತವೆ. ಸೂಚನೆ 3ರಲ್ಲಿ, ಜಾತಿ ನಿಂದನೆ ಮಾಡಿದ ಸರಕಾರಿ ಅಧಿಕಾರಿಯನ್ನು ಬಂಧಿಸಲು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಬೇಕು ಎಂಬುದು ಕ್ರಿಮಿನಲ್‌ ದಂಡ ಸಂಹಿತೆಯ 197ನೇ ಕಲಂನ ಆಶಯಗಳಿಗೆ ಧಕ್ಕೆ ತರುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಇನ್ನುಳಿದ ಮಾರ್ಗಸೂಚಿಯಲ್ಲಿರುವ ಆವಶ್ಯಕತೆ ಬಿದ್ದಲ್ಲಿ ಮಾತ್ರ ತನಿಖೆ ಎಂಬ ವಿಚಾರ, ಜಾತಿನಿಂದನೆಯಿಂದ ಅವಮಾನಕ್ಕೊಳಗಾದ ವ್ಯಕ್ತಿಯು, ತ್ರಿಶಂಕು ಸ್ಥಿತಿಯಲ್ಲಿ ನಿಲ್ಲುವಂತೆ ಮಾಡುತ್ತದೆ. ಜತೆಗೆ, ಮೇಲ್ವರ್ಗದ ವ್ಯಕ್ತಿಗಳು, ಪರಿಶಿಷ್ಟರ ವಿರುದ್ಧವೇ ಮರು ದೂರು ದಾಖಲಿಸಬಹುದಾದ ಅವಕಾಶ ಕಲ್ಪಿಸುವುದರಿಂದ ಇಲ್ಲಿ ಪರಿಶಿಷ್ಟರು ಶೋಷಣೆಗೆ ಈಡಾಗುವ ಅಪಾಯವಿದೆ ಎಂದು ನ್ಯಾಯಪೀಠ ಹೇಳಿತು.

ಟಾಪ್ ನ್ಯೂಸ್

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

tirupati

Tirupati; ದೇವಸ್ಥಾನದಲ್ಲೂ ಶೀಘ್ರ ಎಐ ಚಾಟ್‌ಬಾಟ್‌!

RD-Parede

Parade: ಗಣರಾಜ್ಯೋತ್ಸವಕ್ಕೆ 15 ಸ್ತಬ್ಧಚಿತ್ರ ಆಯ್ಕೆ: ಮತ್ತೆ ದೆಹಲಿಗೆ ಕೊಕ್‌

YOutube

Click Bite: ಹಾದಿ ತಪ್ಪಿಸಿದರೆ ವೀಡಿಯೋ ಡಿಲೀಟ್‌: ಯೂಟ್ಯೂಬ್‌!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-chali

Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!

Hemmadi-Sevantige

Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?

1-puri

Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.