ಶಾಲಾ ಬ್ಯಾಗ್ ತೂಕ ಇಳಿಕೆ: “ಸ್ಕೂಲ್ ಬ್ಯಾಗ್ ಪಾಲಿಸಿ-2020′ ಸಿದ್ಧಪಡಿಸಿದ ಕೇಂದ್ರ
Team Udayavani, Dec 10, 2020, 6:39 AM IST
ಸಾಂದರ್ಭಿಕ ಚಿತ್ರ
ಶಾಲಾ ಮಕ್ಕಳ ಬೆನ್ನಿನ ಮೇಲೆ ಬೆಟ್ಟದಂತೆ ಇದ್ದ ಶಾಲಾ ಬ್ಯಾಗ್‌ಗಳ ಭಾರಕ್ಕೆ ಕೇಂದ್ರ ಶಿಕ್ಷಣ ಸಚಿವಾಲಯ ಭರ್ಜರಿ “ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ. ನೂತನ ಶೈಕ್ಷಣಿಕ ನೀತಿ (ಎನ್‌ಇಪಿ) ಅನುಸಾರ ಶೈಕ್ಷಣಿಕ ಸಚಿವಾಲಯ “ಸ್ಕೂಲ್ ಬ್ಯಾಗ್ ಪಾಲಿಸಿ-2020′ ನಿಯಮಾ ವಳಿ ಸಿದ್ಧಪಡಿಸಿದ್ದು, ರಾಜ್ಯ ಸರಕಾರ ಗಳಿಂದಲೂ ಅಗತ್ಯ ಸಲಹೆ ಕೋರಿದೆ.
“ಕೆಜಿ’ಗೆ ಬ್ಯಾಗ್ ಇಲ್ಲ
ಎಲ್‌ಕೆಜಿ, ಯುಕೆಜಿ ಮಕ್ಕಳು ಶಾಲೆಗೆ ಬ್ಯಾಗ್ ಒಯ್ಯುವಂತಿಲ್ಲ. 1ರಿಂದ 12ನೇ ತರಗತಿ ವಿದ್ಯಾರ್ಥಿಗಳು ಅವರ ಶರೀರದ ಶೇ. 10ರಷ್ಟು ತೂಕದ ಬ್ಯಾಗನ್ನಷ್ಟೇ ಒಯ್ಯಬೇಕು ಎಂದು ಸ್ಪಷ್ಟಪಡಿಸಿದೆ.
ಶಿಕ್ಷಕರೇ ಗಮನಿಸಿ…
01 ತರಗತಿ ವೇಳಾಪಟ್ಟಿಯಲ್ಲಿ ಕ್ರೀಡೆ, ದೈಹಿಕ ಶಿಕ್ಷಣ ಬೋಧನೆಗೆ ಹೆಚ್ಚು ಆದ್ಯತೆ ಇರಲಿ.
02ಪಠ್ಯಪುಸ್ತಕ ಹೊರತುಪಡಿಸಿ, ಶಾಲೆಯಲ್ಲಿನ ಇತರ ಪುಸ್ತಕಗಳಿಗೂ ಓದಲು ಅವಕಾಶ ಕಲ್ಪಿಸಬೇಕು.
03 ಮಕ್ಕಳ ಬ್ಯಾಗ್‌ಗಳನ್ನು ತೂಕ ಮಾಡಲು, ಶಾಲಾ ವರಣದಲ್ಲಿ ಡಿಜಿಟಲ್ ತೂಕದ ಯಂತ್ರ ನಿಯೋಜನೆ.
ಹೋಂ ವರ್ಕ್ ನೀತಿ
01ಪ್ರಿ-ನರ್ಸರಿಯಿಂದ 2ನೇ ತರಗತಿ ವರೆಗೆ ಹೋಂ ವರ್ಕ್ ಬೇಡ.
02 3ರಿಂದ 5ನೇ ತರಗತಿ ವರೆಗೆ ವಾರದಲ್ಲಿ ಗರಿಷ್ಠ 2 ಗಂಟೆ ಮಾತ್ರ ಹೋಂ ವರ್ಕ್.
03 6ರಿಂದ 8ನೇ ತರಗತಿ ಮಕ್ಕಳಿಗೆ ವಾರದಲ್ಲಿ ಗರಿಷ್ಠ 5-6 ಗಂಟೆ ಹೋಂವರ್ಕ್.
04 9-12ನೇ ತರಗತಿ ವಿದ್ಯಾರ್ಥಿಗಳಿಗೆ ವಾರದಲ್ಲಿ 10-12 ಗಂಟೆ ಹೋಂ ವರ್ಕ್ ನೀಡಬಹುದು.
ಲಂಚ್ ಬಾಕ್ಸ್ ನೀತಿ
01 ಪ್ರತಿಶಾಲೆಯೂ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟ ಒದಗಿಸಬೇಕು.
02 ಶುದ್ಧ ಕುಡಿವ ನೀರನ್ನೂ ಶಾಲೆಗಳೇ ಪೂರೈಸುವುದು.
03ಇದರಿಂದಾಗಿ ಮಕ್ಕಳಿಗೆ ಲಂಚ್ ಬಾಕ್ಸ್, ನೀರಿನ ಬಾಟಲ್ ಹೊರೆ ತಪ್ಪುತ್ತದೆ.
ಬ್ಯಾಗ್ ಹೇಗಿರಬೇಕು?
– ಅಗತ್ಯ ವಿಭಾಗಗಳ ಜತೆಗೆ ಅತಿಹಗುರ ಇರಬೇಕು.
– ಎರಡೂ ಭುಜಗಳಿಗೆ ಹೊಂದಿಸಲು “ಭುಜಪಟ್ಟಿ’ ಹೊಂದಿರಬೇಕು.
– ಚಕ್ರಗಳುಳ್ಳ ಬ್ಯಾಗನ್ನು ಅನುಮತಿಸುವಂತಿಲ್ಲ.
ಪಠ್ಯಕ್ಕೂ ಪಾಲಿಸಿ
– ಪ್ರತಿ ಪಠ್ಯಪುಸ್ತಕದ ಮೇಲೂ ಪ್ರಕಾಶಕರು ತೂಕ ನಮೂದಿಸಬೇಕು.
– ಪ್ರಿ-ಪ್ರೈಮರಿಗೆ ಯಾವುದೇ ಪುಸ್ತಕಗಳಿಲ್ಲ.
– 1ನೇ ತರಗತಿಗೆ 1,078 ಗ್ರಾಂ ಇರುವ ಗರಿಷ್ಠ 3 ಪಠ್ಯಪುಸ್ತಕ ಮಾತ್ರ.
– 2-3ನೇ ತರಗತಿ ಮಕ್ಕಳಿಗೆ ಗರಿಷ್ಠ 1,080 ಗ್ರಾಂ ತೂಕದ ಪಠ್ಯಪುಸ್ತಕಗಳು ಸಾಕು.
– 10ನೇ ತರಗತಿಗೆ ಪಠ್ಯಪುಸ್ತಕ ತೂಕ ಮಿತಿ ಗರಿಷ್ಠ 4,182 ಗ್ರಾಂ.
– ಶಾಲಾ ಡೈರಿಗಳ ಗಾತ್ರ ದಪ್ಪ ಬೇಡ, ತೆಳುವಿರಲಿ.
ಸ್ಕೂಲ್ ಬ್ಯಾಗ್ ನೀತಿ ಏಕೆ?
ಶಾಲಾ ಬ್ಯಾಗ್ ತೂಕ ಮಿತಿ ಮೀರುತ್ತಿದೆ ಎಂದು ಮದ್ರಾಸ್ ಹೈಕೋರ್ಟ್ 2018ರಲ್ಲಿ ಆತಂಕ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವಾಲಯ ಎನ್‌ಸಿಇಆರ್‌ಟಿ ಮುಖ್ಯಸ್ಥೆ ರಂಜನಾ ಅರೋರಾ ನೇತೃತ್ವದಲ್ಲಿ ಶಾಲಾ ಬ್ಯಾಗ್ ನೀತಿ ರೂಪಿಸಲು ಸಮಿತಿ ರಚಿಸಿತ್ತು. ಈ ತಂಡ ದೇಶಾದ್ಯಂತ ಸರ್ವೇ ಕೈಗೊಂಡಿತ್ತು. 350 ಶಾಲೆಗಳು, 3 ಸಾವಿರ ಪೋಷಕರು, 3,600ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಶೇ. 38.9 ಶಾಲಾ ಮುಖ್ಯಸ್ಥರು, ಶೇ. 77.7 ಪೋಷಕರು, ಶೇ. 74.4 ವಿದ್ಯಾರ್ಥಿಗಳು ಸ್ಕೂಲ್ ಬ್ಯಾಗ್ ಹೊರೆ “ಗಂಭೀರ ಸಮಸ್ಯೆ’ ಎಂದೇ ಅನಿಸಿಕೆ ಹಂಚಿಕೊಂಡಿದ್ದರು.
ಬ್ಯಾಗ್ ತೂಕದ ಲೆಕ್ಕಾಚಾರ
ತರಗತಿ ಬ್ಯಾಗ್ ತೂಕ
1 2 2.2 ಕಿಲೋ
3 5 2.5 ಕಿಲೋ ಗರಿಷ್ಠ
5 7 3 ಕಿಲೋ ಗರಿಷ್ಠ
8 4 ಕಿಲೋ ಗರಿಷ್ಠ
9 10 4.5 ಕಿಲೋ ಗರಿಷ್ಠ
11 12 5 ಕಿಲೋ ಗರಿಷ್ಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Cast Census: ಜಾತಿ ಗಣತಿ ಮರು ಸಮೀಕ್ಷೆ ಅಗತ್ಯ: ಅಶೋಕ್ ಹಾರನಹಳ್ಳಿ
Congress: ‘ಒಬ್ಬರಿಗೆ ಒಂದೇ ಹುದ್ದೆ’ಗೆ ವಿಶೇಷ ಸಂದರ್ಭಗಳಲ್ಲಿ ವಿನಾಯಿತಿ: ರಣದೀಪ್
ಬಣ ಜಗಳ ಸಾಕು ನಿಲ್ಲಿಸಿ, ಗೊಂದಲದ ಹೇಳಿಕೆ ನೀಡಿದ್ರೆ ಕ್ರಮ: ಕಾಂಗ್ರೆಸ್ ಹೈಕಮಾಂಡ್ ತಾಕೀತು
Election: ರಾಜ್ಯದ ಜಿ.ಪಂ, ತಾ.ಪಂ. ಚುನಾವಣೆಗೆ ಮತಪತ್ರ ಬಳಕೆ: ಚುನಾವಣ ಆಯೋಗ
Congress Session: ಸಚಿವರ ಸುಧಾರಣೆಗೆ ಎರಡು ತಿಂಗಳ ಗಡುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.