School Reopen: ಈ ರಾಜ್ಯದಲ್ಲಿ ಲೋಕಸಭೆ ಚುನಾವಣಾ ಫಲಿತಾಂಶ ದಿನದಂದೇ ಶಾಲಾ ಕಾಲೇಜು ಆರಂಭ…
Team Udayavani, May 29, 2024, 4:12 PM IST
ಪಣಜಿ: ಲೋಕಸಭೆ ಚುನಾವಣೆ ಫಲಿತಾಂಶದ ಹೊರತಾಗಿಯೂ ರಾಜ್ಯದಲ್ಲಿ ಶಾಲಾ-ಕಾಲೇಜುಗಳು ನಿಗದಿಯಂತೆ ಜೂನ್ 4ರಂದು ಆರಂಭವಾಗಲಿವೆ. ಎನ್‍ಸಿಇಆರ್‍ಟಿ ಪುಸ್ತಕಗಳ ವಿತರಣೆ ಮೇ 27 ರಿಂದ ಪ್ರಾರಂಭವಾಗಲಿದೆ ಎಂದು ಶಿಕ್ಷಣ ನಿರ್ದೇಶಕ ಶೈಲೇಶ್ ಜಿಂಗ್ಡೆ ಮಾಹಿತಿ ನೀಡಿದ್ದಾರೆ.
ಶಿಕ್ಷಣ ಇಲಾಖೆಯ ವೇಳಾಪಟ್ಟಿಯಂತೆ ಜೂನ್ 4 ರಿಂದ ಶೈಕ್ಷಣಿಕ ವರ್ಷ ಪ್ರಾರಂಭವಾಗಬೇಕಿತ್ತು. ಲೋಕಸಭೆ ಚುನಾವಣೆಯ ಫಲಿತಾಂಶ ಜೂನ್ 4 ರಂದು ಪ್ರಕಟವಾಗಲಿದೆ. ಹಾಗಾಗಿ ಜೂನ್ 4ರ ನಂತರ ಶಾಲೆಗಳು ಆರಂಭವಾಗಲಿವೆ ಎಂಬ ಮಾತು ಕೇಳಿಬಂದಿತ್ತು. ಚುನಾವಣೆ ಫಲಿತಾಂಶಕ್ಕೂ ಶಾಲೆ ಆರಂಭಕ್ಕೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಶಾಲೆಗಳು ನಿಗದಿಯಂತೆ ಜೂನ್ 4ರಂದು ಆರಂಭವಾಗಲಿವೆ. ಹೈಯರ್ ಸೆಕೆಂಡರಿ ಶಾಲೆಗಳಲ್ಲಿ 11ನೇ ತರಗತಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದೆ. ಹಾಗಾಗಿ ಹನ್ನೊಂದನೇ ತರಗತಿಗಳೂ ಜೂನ್ 4 ರಂದು ಆರಂಭವಾಗಬೇಕು. ಇದು 11ರ ದಾಖಲಾತಿ ಪ್ರಕ್ರಿಯೆಯ ಮೇಲೆ ಅವಲಂಬಿತವಾಗಿರುತ್ತದೆ ಎಂದು ಶಿಕ್ಷಣ ನಿರ್ದೇಶಕರು ವಿವರಿಸಿದರು. ಏತನ್ಮಧ್ಯೆ, ಎನ್‍ಸಿಇಆರ್‍ಟಿ ಪುಸ್ತಕಗಳ ವಿತರಣೆ ಮೇ 27 ರಿಂದ ಪ್ರಾರಂಭವಾಗಿದೆ. ಈ ಪುಸ್ತಕಗಳು ಶಿಕ್ಷಣ ಇಲಾಖೆಯ ವೆಬ್‍ಸೈಟ್‍ನಲ್ಲಿ ಲಭ್ಯವಿರುತ್ತದೆ. ಪುಸ್ತಕಗಳನ್ನು ಡೌನ್‍ಲೋಡ್ ಮಾಡಿಕೊಳ್ಳುವ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದು ಶಿಕ್ಷಣ ನಿರ್ದೇಶಕರು ತಿಳಿಸಿದ್ದಾರೆ.
12 ನೇ ತರಗತಿ ವಿದ್ಯಾರ್ಥಿಗಳಿಗೆ ಮೇ 27 ರ ಸೋಮವಾರದಿಂದ ಪೂರಕ ಪರೀಕ್ಷೆಯನ್ನು ಪ್ರಾರಂಭವಾಗಿದೆ. ಕಲೆ, ವಾಣಿಜ್ಯ, ವಿಜ್ಞಾನ ಮತ್ತು ವೃತ್ತಿಪರ ವಿಭಾಗಗಳಿಗೆ ಪೂರಕ ಪರೀಕ್ಷೆ ನಡೆಯಲಿದೆ. ಈ ಮೊದಲು ಈ ಪರೀಕ್ಷೆಯು ಮೇ 16 ರಿಂದ ಪ್ರಾರಂಭವಾಗಬೇಕಿತ್ತು. ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ, ಮಂಡಳಿಯು ಶಾಲಾ ವರ್ಷದ ಕೊನೆಯಲ್ಲಿ ಪೂರಕ ಪರೀಕ್ಷೆಯನ್ನು ನಡೆಸುತ್ತದೆ. ಸೋಮವಾರದಂದು ಅರ್ಥಶಾಸ್ತ್ರ ಪತ್ರಿಕೆಯಾಗಿರುತ್ತದೆ. ಸೋಮವಾರ ವೃತ್ತಿಪರ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಸಂವಹನ ಕೌಶಲ್ಯಗಳು ಪತ್ರಿಕೆಯಾಗಿರುತ್ತವೆ. ಕಲೆ, ವಾಣಿಜ್ಯ ಮತ್ತು ವಿಜ್ಞಾನ ಶಾಖೆಗಳಿಗೆ ಜೂನ್ 7 ರಂದು ಕೊನೆಯ ಪತ್ರಿಕೆ ಇರುತ್ತದೆ. ವೃತ್ತಿಪರ ಸ್ಟ್ರೀಮ್‍ನ ವಿದ್ಯಾರ್ಥಿಗಳಿಗೆ ಅಂತಿಮ ಪತ್ರಿಕೆ ಜೂನ್ 1 ರಂದು ಇರುತ್ತದೆ. ಎಲ್ಲಾ ಪತ್ರಿಕೆಗಳು ಬೆಳಿಗ್ಗೆ 9.30 ರಿಂದ ಪ್ರಾರಂಭವಾಗುತ್ತವೆ. ಯಾವುದೇ ದಿನ ಸಾರ್ವಜನಿಕ ರಜೆ ಘೋಷಿಸಿದರೂ ಪತ್ರಿಕೆಯನ್ನು ಮುಂದೂಡುವುದಿಲ್ಲ ಎಂದು ಶಿಕ್ಷಣ ಇಲಾಖೆ ನಿರ್ದೇಶಕರು ಮಾಹಿತಿ ನೀಡಿದರು.
ಇದನ್ನೂ ಓದಿ: ಹೊಟ್ಟೆನೋವೆಂದು ಆಸ್ಪತ್ರೆಗೆ ಹೋದ ಮಹಿಳೆಯ ಕಿಡ್ನಿಯನ್ನೇ ತೆಗೆದ ವೈದ್ಯರು… ಮಹಿಳೆ ಗಂಭೀರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಿವಾಹಕ್ಕೆ 4 ದಿನ ಇರುವಾಗಲೇ ಮಗಳನ್ನು ಪೊಲೀಸರ ಎದುರೇ ಗುಂಡಿಟ್ಟು ಹ*ತ್ಯೆಗೈದ ತಂದೆ!
Kerala: ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎನ್ನಲಾದ ವ್ಯಕ್ತಿ ಶವಾಗಾರದಲ್ಲಿ ಜೀವಂತವಾದ!
Liquor Policy Case:ಕೇಜ್ರಿ, ಸಿಸೋಡಿಯಾ ವಿರುದ್ಧ ಪ್ರಾಸಿಕ್ಯೂಷನ್: EDಗೆ ಕೇಂದ್ರದ ಅನುಮತಿ
RSS ಮೋಹನ್ ಭಾಗವತ್ ದೇಶದ್ರೋಹದ ಹೇಳಿಕೆ ನೀಡಿದ್ದಾರೆ: ರಾಹುಲ್ ಗಾಂಧಿ ಕಿಡಿ
BJP ನಾಯಕನಿಂದ ಪಕ್ಷದ ಕಾರ್ಯಕರ್ತೆಯ ಅತ್ಯಾಚಾ*ರ;ಬಂಧನ,ಪಕ್ಷದಿಂದ ಉಚ್ಚಾಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.