ಪ್ರಾಣವನ್ನೇ ಪಣಕ್ಕಿಟ್ಟು 10 ಕೇಜಿ ಬಾಂಬ್ ಹಿಡಿದು ಓಡಿದ ಪೊಲೀಸ್!
Team Udayavani, Aug 28, 2017, 6:25 AM IST
ಭೋಪಾಲ್: ಸಜೀವ ಬಾಂಬ್ ಪತ್ತೆಯಾದರೆ ಏನಾಗಬಹುದು? ಗಾಬರಿಯಿಂದ ಎಲ್ಲರೂ ಓಡಬಹುದು. ಅಪಾಯದ ಪರಿಣಾಮ ಊಹಿಸಲೂ ಸಾಧ್ಯವಿಲ್ಲ. ಆದರೆ, ಮಧ್ಯಪ್ರದೇಶದ ಚಿತೋರಾ ಎಂಬಲ್ಲಿ ನಡೆದ ಪ್ರಕರಣವೊಂದರಲ್ಲಿ ಶಾಲೆ, ಮನೆಗಳಿದ್ದ ಪ್ರದೇಶದಿಂದ ಜನರನ್ನು ರಕ್ಷಿಸಲು, ಪೊಲೀಸ್ ಪೇದೆಯೊಬ್ಬರು 10 ಕೇಜಿ ತೂಕದ ಬಾಂಬನ್ನು ಬರಿಗೈಯ್ಯಲ್ಲಿ ಎತ್ತಿಕೊಂಡು 1 ಕಿ.ಮೀ. ಓಡಿದ್ದು, ಹಲವಾರು ಮಂದಿಯ ಜೀವ ಉಳಿಸಿದ ಕೀರ್ತಿಗೆ ಪಾತ್ರವಾಗಿದ್ದಾರೆ.
ಶುಕ್ರವಾರ ಸರ್ಕಾರಿ ಶಾಲೆಯ ಹಿಂಭಾಗ ಬಾಂಬ್ ಪತ್ತೆಯಾಗಿದ್ದು, ಈ ವೇಳೆ ಶಾಲೆಯಲ್ಲಿ ಸುಮಾರು 400 ಮಕ್ಕಳಿದ್ದರು. ಜೊತೆಗೆ ಅದು ಜನ ವಸತಿ ಪ್ರದೇಶವಾಗಿತ್ತು. ಈ ವೇಳೆ ಪೊಲೀಸರಿಗೆ ಕರೆ ಹೋಗಿದ್ದು ಸ್ಥಳಕ್ಕೆ ಪೊಲೀಸ್ ಪೇದೆ ಅಭಿಶೇಕ್ ಪಟೇಲ್ ಬಂದಿದ್ದರು. ಬಳಿಕ ಅಲ್ಲಿ ಬಾಂಬ್ ವಿಲೇವಾರಿ ಕುರಿತಾಗಿ ಭಾರೀ ಗುಲ್ಲೆದ್ದಿತ್ತು. ಶೀಘ್ರ ಬಾಂಬ್ ನಿಷಿ¢ಯ ತಜ್ಞರು ಲಭ್ಯವಿಲ್ಲದ್ದರಿಂದ ಪೊಲೀಸ್ ಪೇದೆ ತಡೆ ಮಾಡದೇ 40 ವರ್ಷದ ಪಟೇಲ್ ಅವರು ಬಾಂಬ್ ಎತ್ತಿಕೊಂಡು 1 ಕಿ.ಮೀ. ಓಡಿದ್ದಾರೆ. ಜನವಸತಿಯಿಂದ ಆದಷ್ಟು ದೂರಕ್ಕೆ ಬಾಂಬ್ ತೆಗೆದುಕೊಂಡು ಹೋಗಿದ್ದಾರೆ. ಪಟೇಲ್ ಅವರ ಈ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸ್ ಇಲಾಖೆ ಅವರನ್ನು ಅಭಿನಂದಿಸಿದೆ.
ಆದರೆ ಈ ಬಾಂಬ್ ಎಲ್ಲಿಂದ ಬಂತು ಎಂಬುದಕ್ಕೆ ಉತ್ತರ ಸಿಕ್ಕಿಲ್ಲ. ಸನಿಹದಲ್ಲೇ ಸೇನಾ ಸರಹದ್ದು ಇದ್ದು, ಅಲ್ಲಿಂದ ಬಂದು ಬಿದ್ದಿರಬಹುದೇ ಎಂಬ ಸಂಶಯ ಮೂಡಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಾಗರ್ ಎಂಬಲ್ಲಿನ ಬನ್ನಾದ್ ಹೆಸರಿನ ಗ್ರಾಮದಲ್ಲಿ ಇದೇ ರೀತಿ ಬಾಂಬ್ ಪತ್ತೆಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tamil Nadu: ಗೋ ಮಾಂಸ ತಿನ್ನೋದು ಸರಿ ಎಂದಾದರೆ ಮೂತ್ರ ಯಾಕೆ ಬೇಡ: ಬಿಜೆಪಿ
Delhi Polls: ದಿಲ್ಲಿ ವಿಧಾನಸಭೆಯ 70 ಸ್ಥಾನಕ್ಕೆ ಬರೋಬ್ಬರಿ 699 ಅಭ್ಯರ್ಥಿಗಳು ಸ್ಪರ್ಧೆ!
Supreme Court: ಟೆಕಿ ಅತುಲ್ ಪುತ್ರನನ್ನು ಅಜ್ಜಿ ಸುಪರ್ದಿಗೆ ನೀಡಲು ಸುಪ್ರೀಂ ನಕಾರ
NRI: ಸಂಸತ್ತಿನಲ್ಲಿ ಎನ್‌ಆರ್‌ಐ ಪ್ರಾತಿನಿಧ್ಯ: ಸ್ಥಾಯಿ ಸಮಿತಿ ಸಭೇಲಿ ಚರ್ಚೆ
Dog’s Revenge: ತನಗೆ ಡಿಕ್ಕಿ ಹೊಡೆದ ಕಾರಿನ ಮೇಲೆ ಸೇಡು ತೀರಿಸಿಕೊಂಡ ಶ್ವಾನ…