ಸಿಂಧಿಯಾ ಅವರು ಯಾವುದೇ ಸಮಯದಲ್ಲಾದರೂ ನನ್ನ ಮನೆಗೆ ಬರುವ ಅವಕಾಶವಿತ್ತು: ರಾಹುಲ್ ಗಾಂಧಿ
Team Udayavani, Mar 12, 2020, 9:35 AM IST
ನವದೆಹಲಿ: ಜ್ಯೋತಿರಾಧಿತ್ಯ ಸಿಂಧಿಯಾ ಅವರು ಯಾವ ಸಮಯದಲ್ಲಾದರೂ ನನ್ನನ್ನು ಭೇಟಿಯಾಗಲು ಅವಕಾಶವಿರುವ ಏಕೈಕ ಕಾಂಗ್ರೆಸ್ ನಾಯಕರಾಗಿದ್ದರು ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ.
ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಜ್ಯೋತಿರಾಧಿತ್ಯ ಸಿಂಧಿಯಾ ಹಲವು ಭಾರೀ ಪ್ರಯತ್ನಿಸಿದರೂ ಅನುಮತಿ ನಿರಕಾರಿಸಲಾಗಿತ್ತು ಎಂಬ ವರದಿಗಳ ಹಿನ್ನಲೆಯಲ್ಲಿ ಈ ಹೇಳಿಕೆ ನೀಡಿದ್ದಾರೆ. ಅವರಿಗೆ ಯಾವುದೇ ಸಮಯದಲ್ಲೂ ನನ್ನ ಮನೆಗೆ ಬರುವ ಎಲ್ಲಾ ಅವಕಾಶಗಳಿದ್ದವು. ಆದರೇ ಅದು ಈಗ ಮುಗಿದ ಅಧ್ಯಾಯವಾಗಿದೆ ಎಂದಿದ್ದಾರೆ.
ಮಾತ್ರವಲ್ಲದೆ ಒಂದು ವರ್ಷದ ಹಿಂದೆ ಮಧ್ಯಪ್ರದೇಶ ಮುಖ್ಯಮಂತ್ರಿ ಪದವಿಗಾಗಿ ಕಮಲ್ ನಾಥ್ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ನಡುವೆ ನಡೆಸಿದ ಶಾಂತಿ ಮಾತುಕತೆಯ ಟ್ವೀಟ್ ಗಳನ್ನು ಟೀಟ್ವೀಟ್ ಮಾಡಿದ್ದಾರೆ.
ಅದರಲ್ಲಿ ‘ಇಬ್ಬರು ಶಕ್ತಿಶಾಲಿ ಯೋಧರರೆಂದರೇ ತಾಳ್ಮೆ ಮತ್ತು ಸಮಯ ಎಂಬ ‘ ಮಾತನ್ನು ಉಲ್ಲೇಖ ಮಾಡಿದ್ದರು.
The two most powerful warriors are patience and time.
– Leo Tolstoy pic.twitter.com/MiRq2IlrIg
— Rahul Gandhi (@RahulGandhi) December 13, 2018
ಈಗಾಗಲೇ ಕಾಂಗ್ರೆಸ್ ತೊರೆದಿರುವ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ. ಜತೆಗೆ ಮಾ.22 ರಂದು ಮಧ್ಯಪ್ರದೇಶದಿಂದ ನಡೆಯಲಿರುವ ರಾಜ್ಯಸಭೆ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿಯೂ ಆಯ್ಕೆಯಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.