Manali; ದಟ್ಟಾರಣ್ಯದಲ್ಲಿ ನಾಪತ್ತೆಯಾದ ಬೆಂಗಳೂರಿನ ಚಾರಣಿಗ; ತೀವ್ರ ಶೋಧ
Team Udayavani, Oct 2, 2023, 10:35 PM IST
ಮನಾಲಿ(ಹಿಮಾಚಲ ಪ್ರದೇಶ): ನಾಲ್ಕು ದಿನಗಳ ಹಿಂದೆ ಮನಾಲಿಯ ಉಪನಗರದ ಅರಣ್ಯದಲ್ಲಿ ನಾಪತ್ತೆಯಾಗಿದ್ದ ಚಾರಣಿಗನ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಬೆಂಗಳೂರು ಮೂಲದ ರಾಹುಲ್ ರಮೇಶ್ (35) ಸೆಪ್ಟೆಂಬರ್ 28 ರಂದು ಸಂಜೆ ಕಾಡಿನಲ್ಲಿ ನಾಪತ್ತೆಯಾಗಿದ್ದರು.
ರಮೇಶ್ ಟ್ರೆಕ್ಕಿಂಗ್ ಮುಗಿಸಿ ಹಿಂತಿರುಗದಿರುವ ಬಗ್ಗೆ ಅವರ ಸ್ನೇಹಿತ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಹುಡುಕಾಟ ಆರಂಭಿಸಲಾಗಿದೆ. ರಮೇಶ್ ಅವರು ಎತ್ತರದಲ್ಲಿ ನಡೆದ ಮ್ಯಾರಥಾನ್ ಸೋಲಾಂಗ್ ಸ್ಕೈಲ್ಟ್ರಾ ಸ್ಪರ್ಧೆಯಲ್ಲಿ ಭಾಗವಹಿಸಲು ಮನಾಲಿಗೆ ಬಂದಿದ್ದರು ಮತ್ತು ಓಟದ ತಯಾರಿಯಲ್ಲಿದ್ದರು. ಈವೆಂಟ್ ಅನ್ನು ಸೆ 30 ಮತ್ತು ಅಕ್ಟೋಬರ್ 1 ರಂದು ನಿಗದಿಪಡಿಸಲಾಗಿತ್ತು.
ಡಿಎಸ್ ಪಿ ಮನಾಲಿ ನೇತೃತ್ವದ ಪೊಲೀಸ್ ತಂಡವು ನಾಪತ್ತೆಯಾದ ಚಾರಣಿಗ ರಮೇಶ್ ಅವರನ್ನು ಹುಡುಕುತ್ತಿದ್ದಾರೆ. ಇದುವರೆಗೆ ಯಾವುದೇ ಯಶಸ್ಸು ಸಿಕ್ಕಿಲ್ಲ ಎಂದು ಕುಲು ಎಸ್ ಪಿ ಸಾಕ್ಷಿ ವರ್ಮಾ ಸೋಮವಾರ ಪಿಟಿಐಗೆ ತಿಳಿಸಿದ್ದಾರೆ. ಶೋಧ ಕಾರ್ಯ ನಡೆಯುತ್ತಿದ್ದು, ತಂಡ ಇಂದು ರಾತ್ರಿ ಕಾಡಿನಲ್ಲಿ ಬಿಡಾರ ಹೂಡಲಿದೆ ಎಂದು ವರ್ಮಾ ತಿಳಿಸಿದ್ದಾರೆ.
ನಾಪತ್ತೆಯಾದ ರಮೇಶ್ ಅವರ ಮೊಬೈಲ್ ಫೋನ್ ಅನ್ನು ಸೆ 29 ರಂದು ಮನಾಲಿ ಬಳಿಯ ಜೋಗಿನಿ ಫಾಲ್ ಅರಣ್ಯದಲ್ಲಿ ಪತ್ತೆ ಹಚ್ಚಲಾಗಿದೆ. ಇತ್ತೀಚೆಗಷ್ಟೇ ಮನಾಲಿಯ ಹೊರವಲಯದ ನಗರ್ ಬಳಿ ಮಹಿಳೆಯೊಬ್ಬರ ಮೇಲೆ ದಾಳಿ ನಡೆದಿದ್ದು, ರಮೇಶ್ ನಾಪತ್ತೆಯಲ್ಲಿ ಪ್ರಾಣಿ ದಾಳಿ ಅಥವಾ ಬೆಟ್ಟದಿಂದ ಬೀಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.