ಗಂಡನನ್ನು ಬಿಟ್ಟು ಪ್ರಿಯಕರನ ಜತೆ ಮಗಳು ಎಸ್ಕೇಪ್; ಸಿಟ್ಟಿಗೆದ್ದ ತಂದೆಯಿಂದ ಇಬ್ಬರ ಕೊಲೆ
ಅನಿಲ್ ಜಾಟ್ (40ವರ್ಷ) ಎಂಬಾತನ ಪುತ್ರಿ ಸುಮನ್ ಪತ್ನಿಯನ್ನು ಬಿಟ್ಟು, ಪ್ರಿಯಕರ ಕೃಷ್ಣನ ಜತೆ ಪರಾರಿ
Team Udayavani, Jun 11, 2020, 8:50 PM IST
Representative Image
ರಾಜಸ್ಥಾನ್: ಪತಿಯನ್ನು ಬಿಟ್ಟು ಪ್ರಿಯಕರನ ಜತೆ ಮಗಳು ಓಡಿಹೋದ ಆಕ್ರೋಶದಲ್ಲಿ ತಂದೆ ಪ್ರಿಯಕರನ ಮನೆಗೆ ಹೋಗಿ ಇಬ್ಬರನ್ನು ಹತ್ಯೆಗೈದಿರುವ ಘಟನೆ ರಾಜಸ್ಥಾನದಲ್ಲಿ ನಡೆದಿದೆ.
ಏನಿದು ಘಟನೆ:
ಅನಿಲ್ ಜಾಟ್ (40ವರ್ಷ) ಎಂಬಾತನ ಪುತ್ರಿ ಸುಮನ್ ಪತ್ನಿಯನ್ನು ಬಿಟ್ಟು, ಪ್ರಿಯಕರ ಕೃಷ್ಣ ಎಂಬಾತನ ಜತೆಪರಾರಿಯಾಗಿದ್ದಳು. ಈ ವಿಷಯ ತಿಳಿದ ಅನಿಲ್, ನೇರವಾಗಿ ಕೃಷ್ಣನ ಮನೆಗೆ ತೆರಳಿ, ಒಂದು ವೇಳೆ ನನ್ನ ಮಗಳು ವಾಪಸ್ ಬಾರದಿದ್ದರೆ ಮುಂದೆನಾಗುತ್ತೆ ನೋಡಿ ಎಂದು ಬೆದರಿಕೆ ಹಾಕಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆದರೆ ಇಬ್ಬರೂ ವಾಪಸ್ ಆಗಿಲ್ಲವಾಗಿತ್ತು. ಇದರಿಂದ ಕೋಪಗೊಂಡ ತಂದೆ ಅನಿಲ್ ಜುನ್ ಜುನು ಎಂಬಲ್ಲಿಗೆ ತೆರಳಿ ಅಲ್ಲಿ ಕೃಷ್ಣನ ಮನೆಗೆ ಹೋಗಿ ಆತನ ಸಹೋದರ ದೀಪಕ್ (20ವರ್ಷ) ಹಾಗೂ ಆತನ ಗೆಳೆಯ ನರೇಶ್ (19ವರ್ಷ)ಎಂಬಾತನನ್ನು ಹತ್ಯೆಗೈದಿದ್ದ.
ಕೃಷ್ಣನ ಮನೆಯ ಮಹಡಿ ಮೇಲೆ ಮಲಗಿದ್ದ ಇಬ್ಬರನ್ನೂ ಯುವತಿಯ ತಂದೆ ಕೊಡಲಿಯಿಂದ ಕಡಿದು ಹತ್ಯೆಗೈದಿರುವುದಾಗಿ ಪೊಲೀಸ್ ಅಧಿಕಾರಿ ದೇವೇಂದ್ರ ಪ್ರತಾಪ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.