ಆಟೋ ಚಾಲಕರಿಗೂ ಕಡ್ಡಾಯ! ಚಾಲಕನಿಗೆ 1 ಸಾವಿರ ರೂ. ದಂಡ
Team Udayavani, Sep 16, 2019, 5:10 AM IST
ಪಾಟ್ನಾ/ಹೈದರಾಬಾದ್: ಈಗ ಎಲ್ಲೆಲ್ಲೂ ಸಾರಿಗೆ ನಿಯಮ ಉಲ್ಲಂ ಸಿದ್ದಕ್ಕೆ ದಂಡ ವಿಧಿಸುವ ಬಗೆಗೆ ಸುದ್ದಿಯೋ ಸುದ್ದಿ. ಆದರೆ ಬಿಹಾರದ ಮುಝಾಫರ್‌ಪುರದಲ್ಲಿ ಸೀಟ್ ಬೆಲ್ಟ್ ಧರಿಸಿಲ್ಲ ಎಂಬ ಕಾರಣಕ್ಕೆ ಆಟೋ ಚಾಲಕನಿಗೆ 1 ಸಾವಿರ ರೂ. ದಂಡ ವಿಧಿಸಲಾಗಿದೆ. ಶನಿವಾರ ಈ ಘಟನೆ ನಡೆದಿದೆ. ತಪಾಸಣೆ ವೇಳೆ ಆಟೋ ಚಾಲಕ ಸೀಟ್ ಬೆಲ್ಟ್ ಧರಿಸದೇ ಇದ್ದದ್ದು ಕಂಡು ಬಂತು. ಜತೆಗೆ ಆತ ಬಡವ ಎಂದು ಗೊತ್ತಾಯಿತು. ಆದರೂ, ಕನಿಷ್ಠ ದಂಡ ವಿಧಿಸಬೇಕು ಎಂಬ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ಸರಯಿಯಾ ಠಾಣಾಧಿಕಾರಿ ಅಜಯ ಕುಮಾರ್ ಹೇಳಿದ್ದಾರೆ. ಜತೆಗೆ ಇದೊಂದು ತಪ್ಪು ಎನ್ನುವುದು ಗೊತ್ತು ಎಂದಿದ್ದಾರೆ.
ಪೊಲೀಸರ ನೆರವು: ಹೈದರಾಬಾದ್‌ನಲ್ಲಿ ಸಂಚಾರ ಪೊಲೀಸರು ನಿಯಮ ಉಲ್ಲಂ ಸಿ ದವರಿಗೆ ದಂಡ ವಿಧಿಸುವ ಬದಲಾಗಿ, ಹೆಲ್ಮೆಟ್ ಖರೀದಿಗೆ ನೆರವಾಗುತ್ತಿದ್ದಾರೆ. ಹೆಲ್ಮೆಟ್ ಧರಿಸದವರಿಗೆ, ವಿಮೆ ಮತ್ತು ಪರವಾನಗಿ ದಾಖಲೆಗಳು ಇಲ್ಲದವರಿಗೆ, ಮಾಲಿನ್ಯ ಪ್ರಮಾಣ ಪತ್ರ ಇಲ್ಲದವರಿಗೆ ಅದನ್ನು ಒದಗಿಸಲು ನೆರವಾಗಿದ್ದಾರೆ.
ಇದೇ ವೇಳೆ, ನಾಗಾಲ್ಯಾಂಡ್‌ನಲ್ಲಿ ನೋಂದಾಯಿಸಿದ ಟ್ರಕ್ ಮಾಲೀಕ-ಚಾಲಕ ಶೈಲೇಶ್ ಶಂಕರ್ ಲಾಲ್ ಗುಪ್ತಾಗೆ ಒಡಿಶಾದಲ್ಲಿ ವಿವಿಧ ಸಂಚಾರ ನಿಯಮ ಉಲ್ಲಂಘನೆಗಳಿಗಾಗಿ 6.53 ಲಕ್ಷ ರೂ. ದಂಡ ವಿಧಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
House arrest: ಮಾರಾಮಾರಿ ಪ್ರಕರಣ; ಕೆಟಿಆರ್ ಸೇರಿ ಬಿಆರೆಸ್ ಪ್ರಮುಖರ ಗೃಹ ಬಂಧನ
Pathanamthitta: ದಲಿತ ಬಾಲಕಿಯ ಮೇಲೆ ದೌರ್ಜನ್ಯ ಪ್ರಕರಣದಲ್ಲಿ 44 ಜನರ ಬಂಧನ
MVA: ಏಕಾಂಗಿ ಸ್ಪರ್ಧೆ ಮಾತು: ಅಘಾಡಿ ಬಿರುಕು ವದಂತಿಗೆ ಪುಷ್ಟಿ ನೀಡಿದ ಪವಾರ್
ಸಂಸತ್ತಿನಲ್ಲಿ ಕ್ಷಮೆ ಕೇಳಿ..: ತಪ್ಪು ಮಾಹಿತಿಗಾಗಿ ಮೆಟಾಗೆ ಸಂಸದೀಯ ಸ್ಥಾಯಿ ಸಮಿತಿ ಸಮನ್ಸ್
Mahakumbh Mela: ಮಕರ ಸಂಕ್ರಾಂತಿಯಂದು ಮಹಾಕುಂಭದಲ್ಲಿ ಸಾಧು ಸಂತರ ಶಾಹಿ ಸ್ನಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.