ಮೊದಲ ಅಲೆ ಮುಗಿದಿಲ್ಲ ; ಇನ್ನೊಂದು ದೂರವಿಲ್ಲ
ನಿರ್ಲಕ್ಷಿಸಿದರೆ ಕೋವಿಡ್ ಕಾಟ: ಎಚ್ಚರಿಸಿದ ತಜ್ಞರು
Team Udayavani, Oct 3, 2020, 6:25 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಭಾರತದಲ್ಲಿ ಇನ್ನೂ ಕೊರೊನಾದ ಮೊದಲ ಅಲೆಯೇ ಮುಗಿದಿಲ್ಲ. ಎರಡನೇ ಅಲೆ ಅಪ್ಪಳಿಸುವ ದಿನಗಳೂ ಹೆಚ್ಚು ದೂರವಿಲ್ಲ! ಮಾಯಾವಿ ವೈರಾಣುವಿನ ಅಟ್ಟಹಾಸಕ್ಕೆ ದೇಶದಲ್ಲಿ ಲಕ್ಷ ಜೀವಗಳು ಉಸಿರು ಚೆಲ್ಲಿರುವ ನಡುವೆಯೇ ತಜ್ಞರು ಇಂಥ ಎಚ್ಚರಿಕೆ ರವಾನಿಸಿದ್ದಾರೆ. ದೇಶದಲ್ಲಿ ಪ್ರಕರಣ ಸಂಖ್ಯೆ ಕೊಂಚ ಇಳಿಕೆಯತ್ತ ಸಾಗಿದ ಮಾತ್ರಕ್ಕೆ ಕೊರೊನಾ ತೊಲಗಿತು ಎಂದಲ್ಲ. ನಾವಿನ್ನೂ ಮೊದಲ ಅಲೆಯಲ್ಲೇ ಇಂಥ ಏರಿಳಿತಗಳನ್ನು ಕಾಣುತ್ತಿದ್ದೇವಷ್ಟೇ ಎಂದವರು ಹೇಳಿದ್ದಾರೆ.
ಇದುವರೆಗೆ ಮೊದಲ ಅಲೆಯೇ ಮುಗಿದಿಲ್ಲ. ಪ್ರಸ್ತುತ ಕೊರೊನಾ ಆರ್ಭಟದ ಎರಡನೇ ಅಲೆ ಎನ್ನುವ ಪ್ರಶ್ನೆಯೇ ಬೇಡ. ಸೋಂಕು ತೀವ್ರವಾಗಿ ಹಬ್ಬುತ್ತಿರುವುದರಿಂದ ನಾವು ಹೆಚ್ಚು ಜಾಗ್ರತೆ ವಹಿಸಬೇಕಿದೆ ಎಂದು ಖ್ಯಾತ ತಜ್ಞ ವೈದ್ಯ ಡಾ| ರಾಜೇಶ್ ಪಾರೀಖ್ “ಇಂಡಿಯಾ ಟುಡೇ ಹೆಲ್ತ್‌ಗಿರಿ ಅವಾರ್ಡ್ಸ್’ ಸಮಾರಂಭದಲ್ಲಿ ಎಚ್ಚರಿಸಿದ್ದಾರೆ.
ಪ್ರಕರಣಗಳ ಸಂಖ್ಯೆ ನೋಡಿ ಧೈರ್ಯಗೆಟ್ಟರೆ ಅದ ರಿಂದ ನಮಗೇ ತೊಂದರೆ. ಭಾರತ ಮತ್ತು ವಿಶ್ವ ಇಂಥ ಹಲವು ಸಂಕಷ್ಟದ ಸಮಯಗಳನ್ನು ಎದುರಿಸಿದ್ದನ್ನು ನೆನಪಿಸಿ ಕೊಳ್ಳೋಣ. 100 ವರ್ಷಗಳ ಹಿಂದೆ ಇನ್‌ಫುÉಯೆಂಜಾ ಸಾಂಕ್ರಾಮಿಕ ಕಾಡಿದಾಗ ಭಾರತವೊಂದರಲ್ಲೇ 1.5 ಕೋಟಿ ಮಂದಿ ಸಾವನ್ನಪ್ಪಿದ್ದರು. ಪೋಲಿಯೋ ಕೂಡ ದೇಶವನ್ನು ಹಿಂದೆ ಬೆಚ್ಚಿಬೀಳಿಸಿತ್ತು ಎಂದು ಅವರು ನೆನಪಿಸಿದ್ದಾರೆ.
ಒಂದೆರಡು ವರ್ಷ ಇರಲಿದೆ!
ಕೊರೊನಾದ ಕರಾಳ ಸ್ಥಿತಿ ಕೆಲವು ತಿಂಗಳು-ಒಂದೆರಡು ವರ್ಷಗಳ ವರೆಗೂ ಇರುವ ಸಾಧ್ಯತೆ ಇದೆ. ಆದರೆ ನಾವು ಕುಗ್ಗಬಾರದು. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ, ಸ್ಯಾನಿಟೈಸೇಶನ್- ಇಂಥ ಪ್ರಯತ್ನಗಳಿಂದ ಒಳ್ಳೆಯ ಫಲಿತಾಂಶ ಸಾಧ್ಯ. ಲಸಿಕೆ ಸಿಗುವ ವರೆಗೂ ನಾವು ಇವುಗಳನ್ನು ಅನುಸರಿಸಬೇಕಿದೆ ಎಂದು ಫೋರ್ಟಿಸ್ ಎಸ್ಕಾರ್ಟ್ ಹೆಲ್ತ್ ಇನ್‌ಸ್ಟಿಟ್ಯೂಟ್‌ನ ಡಾ| ಸೇಠ್ ಹೇಳಿದ್ದಾರೆ.
ಟ್ರಂಪ್ ದಂಪತಿಗೆ ಕೋವಿಡ್
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ಪತ್ನಿ ಮೆಲಾನಿಯಾ ಟ್ರಂಪ್‌ಗ್ೂ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಅಮೆರಿಕದಲ್ಲಿ ಚುನಾವಣೆ ಪ್ರಚಾರ ತಾರಕ ಕ್ಕೇರಿರುವಾಗಲೇ ಸೋಂಕು ತಗಲಿರುವುದು ರಿಪಬ್ಲಿಕನ್ ದಿಗ್ಗಜನಿಗೆ ಚಿಂತೆ ಹೆಚ್ಚಿಸಿದೆ. “ನನಗೆ, ನನ್ನ ಪತ್ನಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಈ ವಿಚಾರ ತಿಳಿದ ತತ್‌ಕ್ಷಣದಿಂದಲೇ ನಾವು ಕ್ವಾರಂಟೈನ್‌ಗೆ ಒಳಪಟ್ಟಿದ್ದೇವೆ’ ಎಂದು ತಿಳಿಸಿದ್ದಾರೆ. ಟ್ರಂಪ್ ಮತ್ತು ಮೆಲಾನಿಯಾ ಬೇಗ ಚೇತರಿಸಿಕೊಳ್ಳುವಂತೆ ರಾಷ್ಟ್ರಪತಿ ರಾಮನಾಥ ಕೋವಿಂದ್, ಪ್ರಧಾನಿ ಮೋದಿ ಸೇರಿದಂತೆ ಹಲವು ವಿಶ್ವನಾಯಕರು ಟ್ವೀಟ್ ಮೂಲಕ ಹಾರೈಸಿದ್ದಾರೆ.
ಪ್ರತೀ 10ರಲ್ಲಿ ಒಬ್ಬ ಭಾರತೀಯ
ಕೊರೊನಾದಿಂದ ಅತೀ ಹೆಚ್ಚು ಸಾವುಗಳನ್ನು ಕಂಡ 3ನೇ ರಾಷ್ಟ್ರ ಭಾರತ. ಇಂದು ಕೊರೊನಾದಿಂದ ಸಾಯುತ್ತಿರುವ ವಿಶ್ವದ ಪ್ರತೀ 10 ಮಂದಿಯಲ್ಲಿ ಒಬ್ಬ ಭಾರತೀಯ ಇರುತ್ತಾನೆ. ಆದರೆ ನಮ್ಮ ಜನಸಂಖ್ಯೆಯ ಎದುರು ಈ ಸಾವಿನ ಸಂಖ್ಯೆ ಏನೇನೂ ಅಲ್ಲ. ವಿಶ್ವದಲ್ಲಿ ಪ್ರತೀ 10 ಲಕ್ಷಕ್ಕೆ 131 ಮಂದಿ ಸಾವನ್ನಪ್ಪಿದ್ದರೆ ಭಾರತದಲ್ಲಿ ಈ ಪ್ರಮಾಣ 10 ಲಕ್ಷಕ್ಕೆ ಕೇವಲ 72.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿಮ ಬಂಗಾಲ ಗವರ್ನರ್
Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್: ನದಿಗೆ ಬಿದ್ದು ಮೂವರ ಸಾವು
Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.