ಕೋವಿಡ್ ಎರಡನೇ ಅಲೆ : ಒಂದು ಕೋಟಿ ಮಂದಿಯ ಉದ್ಯೋಗ ನಷ್ಟ : ಸಿಎಮ್ಐಇ
ಶೇಕಡಾ 97 ರಷ್ಟು ಮಂದಿಯ ಆದಾಯ ಕುಸಿತ : ಸಿಎಮ್ಐಇ
Team Udayavani, Jun 1, 2021, 6:20 PM IST
ಪ್ರಾತಿನಿಧಿಕ ಚಿತ್ರ
ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆ ಇಡೀ ದೇಶದ ನಾಗರಿಕ ವ್ಯವಸ್ಥೆಯ ಮೇಲೆ ದೊಡ್ಡ ಪ್ರಹಾರವನ್ನೇ ಮಾಡಿದೆ. ಕೋವಿಡ್ ಸೋಂಕಿನ ಹಠಾತ್ ಏರಿಕೆಯಿಂದಾಗಿ ಉದ್ಯೋಗ ಕ್ಷೇತ್ರದ ಮೇಲೂ ಭಾರಿ ದೊಡ್ಡ ಪ್ರಮಾಣದಲ್ಲಿ ಹೊಡೆತ ಬಿದ್ದಿದೆ.
ದೇಶದಲ್ಲಿ ಕೋವಿಡ್ ಸೋಂಕಿನ ನಿಯಂತ್ರಣದ ಹಿನ್ನೆಲೆಯಿಂದಾಗಿ ಲಾಕ್ ಡೌನ್ ನಂತಹ ಕಠಿಣ ಕ್ರಮಗಳನ್ನು ಸರ್ಕಾರ ಜಾರಿಗೆ ತಂದಿರುವ ಕಾರಣದಿಂದಾಗಿ ಉದ್ಯೋಗ ಸಮಸ್ಯೆ ಹೆಚ್ಚಾಗಿದೆ. ದೇಶದಲ್ಲಿ ಕೋವಿಡ್ ಸೋಂಕಿನ ಎರಡನೇ ಅಲೆಯಲ್ಲಿ ಒಂದು ಕೋಟಿ ಮಂದಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಮಾಹಿತಿ ನೀಡಿದೆ.
ಇದನ್ನೂ ಓದಿ : ವೊಡಾಫೋನ್ – ಐಡಿಯಾ ನೀಡುತ್ತಿದೆ ಅಗ್ಗದ ರೀಚಾರ್ಜ್ ಪ್ಲ್ಯಾನ್ : ಇಲ್ಲಿದೆ ಸಂಪೂರ್ಣ ಮಾಹಿತಿ
ಈ ಬಗ್ಗೆ ಮಾಹಿತಿ ನೀಡಿದ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ವ್ಯಾಸ್, ಕೋವಿಡ್ ನ ಕಾರಣದಿಂದ ದೇಶದಲ್ಲಿ ಒಂದು ಕೋಟಿಯಷ್ಟು ಮಂದಿ ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಲ್ಲದೇ, ಶೇಕಡಾ 97 ರಷ್ಟು ಮಂದಿಯ ಆದಾಯ ಕುಸಿತ ಕಂಡಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ತಂದ ಪರಿಸ‍್ಥಿತಿಯಿಂದ ಕಳೆದ ವರ್ಷವೂ ಕೂಡ ಇದೇ ಸಮಸ್ಯೆ ಎದುರಾಗಿತ್ತು, ಸ್ವಲ್ಪ ಮಟ್ಟಿಗೆ ಚೇತರಿಕೆಯನ್ನು ಕಾಣುತ್ತಿರಬೇಕಾದರೇ ಮತ್ತೆ ಎರಡನೇ ಅಲೆ ನಿರುದ್ಯೋಗ ಸಮಸ್ಯೆಯನ್ನು ತಂದೊಡ್ಡಿದೆ. ಏಪ್ರಿಲ್ ನಲ್ಲಿ ಶೇಕಡಾ 8 ರಷ್ಟು ನಿರುದ್ಯೋಗ ಸಮಸ್ಯೆ ಇದ್ದಿತ್ತು, ಮೇ ತಿಂಗಳಾಗುವಾಗ ನಿರುದ್ಯೋಗದ ಸಮಸ್ಯೆ ಶೇಕಡಾ 12 ಕ್ಕೆ ಏರಿಕೆಯಾಗಿದೆ ಎಂದು ಅಂಕಿ ಅಂಶಗಳು ತಿಳಿಸಿವೆ.
ಕೊವಿಡ್ ಸೋಂಕನ್ನು ನಿಯಂತ್ರಣ ಮಾಡುವ ಉದ್ದೆಶದಿಂದ ದೇಶದ ಹಲವು ರಾಜ್ಯಗಳು ಲಾಕ್ ಡೌನ್ ಗೆ ಮೊರೆ ಹೋಗಿದ್ದವು.ಈ ಕಾರಣದಿಂದಾಗಿ ಒಂದು ಕೋಟಿ ಭಾರತೀಯರಿಗೆ ಉದ್ಯೋಗ ನಷ್ಟವಾಗಿದೆ. ಆರ್ಥಿಕ ಸ್ಥಿತಿ ಚೇತರಿಕೆಯನ್ನು ಕಂಡರೇ, ನಿರುದ್ಯೋಗದ ಸಮಸ್ಯೆ ಕೊಂಚ ಮಟ್ಟಿಗೆ ನಿವಾರಣೆ ಆಗಬಹುದು. ಆದರೂ ಸಂಪೂರ್ಣ ಸಮಸ್ಯೆಯನ್ನು ನಿವಾರಣೆ ಆಗಲು ಸಾಧ್ಯವಿಲ್ಲ. ಈಗಾಗಲೇ ಸಾಕಷ್ಟು ಕಂಪೆನಿಗಳು ಸ್ಥಗಿತಗೊಂಡಿದ್ದು, ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಉದ್ಯೋಗವನ್ನು ಹಿಡಿದುಕೊಳ್ಳಲು ಬಹಳ ಕಷ್ಟ ಇದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು, ಅಸಂಘಟಿತ ವಲಯದಲ್ಲಿ ಸ್ವಲ್ಪ ಮಟ್ಟಿಗೆ ಉದ್ಯೋಗ ಮತ್ತೆ ಸೃಷ್ಟಿಯಾಗಬಹುದು. ಫಾರ್ಮಲ್ ಉದ್ಯೋಗಗಳನ್ನು ಕಳೆದುಕೊಂಡವರಿಗೆ ಇನ್ನೂ ಕೆಲವು ತಿಂಗಳುಗಳ ಕಾಲ ಉದ್ಯೋಗ ಸಮಸ್ಯೆ ಇರಲಿದೆ. ಆದಾಯದ ಮೇಲೆ ಮುಂದಿನ ಕೆಲವು ತಿಂಗಳುಗಳ ಕಾಲ ಭಾರಿ ಹೊಡೆತ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ನಿರುದ್ಯೋಗ ಸಮಸ್ಯೆ ದಾಖಲೆಯ ಪ್ರಮಾಣ ಶೇಕಡಾ 23.5ಕ್ಕೆ ಏರಿಕೆ ಕಂಡು ಸಾಕಷ್ಟು ಮಂದಿ ತೊಂದರೆ ಅನುಭವಿಸಿದ್ದರು.
ಇನ್ನು, ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ, ಆದಾಯ ಸಮಸ್ಯೆ ಬಗ್ಗೆ ಸಮೀಕ್ಷೆ ನಡೆಸಿದ್ದು, ಕುಟುಂಬದ ಆದಾಯವು ಕೋವಿಡ್ ಕಾರಣದಿಂದ ಪಾತಾಳಕ್ಕಿಳಿದಿದೆ ಎಂದು ಸಮೀಕ್ಷೆಯತ ವರದಿ ತಿಳಿಸಿದೆ. ಎರಡು ಲಕ್ಷ ಮನೆಗಳನ್ನು ಈ ಸಮೀಕ್ಷೆಗೆ ಒಳಪಡಿಸಿಕೊಂಡಿದ್ದು, ಆ ಪೈಕಿ ಕೇವಲ ಶೇಕಡಾ 3 ರಷ್ಟು ಕುಟುಂಬಗಳಲ್ಲಿ ಮಾತ್ರ ಆದಾಯ ಯತಾವತ್ತಾಗಿದ್ದು ಹಾಗೂ ಸ್ವಲ್ಪ ಮಟ್ಟಿಗೆ ಹೆಚ್ಚಳವಾಗಿದೆ. ಶೇಕಡಾ 42 ರಷ್ಟು ಕುಟುಂಬಗಳ ಆದಾಯ ಕುಸಿತ ಹಾಗೂ ಶೇಕಡಾ 42 ರಷ್ಟು ಕುಟುಂಬಗಳ ಆದಾಯದಲ್ಲಿ ವ್ಯತ್ಯಾಸ ಉಂಟಾಗಿದೆ ಎಂದು ಸಮೀಕ್ಷೆ ವರದಿ ತಿಳಿಸಿದೆ.
ಇದನ್ನೂ ಓದಿ : ಸದ್ಯಕ್ಕೆ ಯಡಿಯೂರಪ್ಪನರೆ ಮುಖ್ಯಮಂತ್ರಿ : ಶಾಸಕ ಸಿ.ಟಿ ರವಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.