![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Sep 19, 2020, 6:00 AM IST
ನವದೆಹಲಿ: ರಾಷ್ಟ್ರೀಯ ಮಾಹಿತಿ ಕೇಂದ್ರದ (ಎನ್‌ಐಸಿ) ನಾನಾ ಕಂಪ್ಯೂಟರ್‌ಗಳಲ್ಲಿ ಅಡಕವಾಗಿದ್ದ ರಾಷ್ಟ್ರೀಯ ಭದ್ರತೆ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಗಣ್ಯರ ಮಾಹಿತಿ ಹ್ಯಾಕ್ ಮಾಡಿರುವ ವಿಚಾರ ತಡವಾಗಿ ಬಹಿರಂಗವಾಗಿದೆ. ಅದರಲ್ಲೂ, ಬೆಂಗಳೂರಿನಲ್ಲಿರುವ ಐಟಿ ಕಂಪನಿಯಿಂದ ಎನ್‌ಐಸಿಗೆ ಕಳುಹಿಸಲಾಗಿದ್ದ ಇ-ಮೇಲ್‌ನ ಮೂಲಕ ಮಾಹಿತಿಯನ್ನು ಹ್ಯಾಕ್ ಮಾಡಿರುವುದು ತಿಳಿದುಬಂದಿದ್ದು ಇದು ಎಲ್ಲರನ್ನೂ ದಿಗ್ಭ್ರಾಂತಗೊಳಿಸಿದೆ. ಕಳವಾದ ಮಾಹಿತಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೊವಾಲ್ ಅವರಿಗೆ ಸಂಬಂಧಿಸಿದ ಮಾಹಿತಿಗಳೂ ಇದ್ದವೆಂದು ಹೇಳಲಾಗಿದೆ.
ಇ-ಮೇಲ್ ಮೂಲಕ ಬಂದಿದ್ದ ಮಾಲ್‌ವೇರ್: ದೆಹಲಿಯಲ್ಲಿರುವ ಎನ್‌ಐಸಿ ಕಚೇರಿ ಸಿಬ್ಬಂದಿಯೊಬ್ಬರಿಗೆ ಕೆಲ ದಿನಗಳ ಹಿಂದೆ ಒಂದು ಇ-ಮೇಲ್ ಬಂದಿದ್ದು, ಅದರಲ್ಲಿ ಕೆಲವು ಫೈಲ್‌ಗಳ ಅಟ್ಯಾಚ್‌ಮೆಂಟ್‌ಗಳನ್ನು ಕಳುಹಿಸಲಾಗಿತ್ತು. ಇ-ಮೇಲ್ ತೆರೆದು ಓದಿದ ಸಿಬ್ಬಂದಿ ಅಟ್ಯಾಚ್‌ಮೆಂಟ್‌ಗಳನ್ನು ಗಮನಿಸಲು ಅವುಗಳ ಮೇಲೆ ಕ್ಲಿಕ್ ಮಾಡಿದ ಕೂಡಲೇ ಅದರಲ್ಲಿದ್ದ ಮಾಲ್‌ವೇರ್‌ಗಳು ಆ ಕಂಪ್ಯೂಟರ್‌ನಲ್ಲಿ ರಹಸ್ಯವಾಗಿ ನುಗ್ಗಿ ಆ ಕಂಪ್ಯೂಟರ್‌ನಲ್ಲಿದ್ದ ಅಮೂಲ್ಯ ಮಾಹಿತಿಗಳನ್ನು ರವಾನಿಸಿದೆ. ಆನಂತರ, ಆ ಸಿಬ್ಬಂದಿಯ ಕಂಪ್ಯೂಟರಿನೊಂದಿಗೆ ಲ್ಯಾನ್ ಮೂಲಕ ಜೋಡಿಸಲ್ಪಟ್ಟಿರುವ ಕಚೇರಿಯ ಇನ್ನಿತರ ಕಂಪ್ಯೂಟರ್‌ಗಳಿಗೂ ದಾಳಿಯಿಟ್ಟು ಅವುಗಳಲ್ಲಿ ಇದ್ದ ಮತ್ತಷ್ಟು ಅಮೂಲ್ಯ ಮಾಹಿತಿಗಳನ್ನು ಸೋರಿಕೆ ಮಾಡಿದೆ.
ಇ-ಮೇಲ್ ಅಸಲಿ ಮೂಲ ಅಮೆರಿಕ!: ವಿಷಯ ಗಮನಕ್ಕೆ ಬರುತ್ತಲೇ, ಎನ್‌ಐಸಿ ಸಿಬ್ಬಂದಿ ದೆಹಲಿ ಪೊಲೀಸರಿಗೆ ದೂರು ಸಲ್ಲಿಸಿದ್ದು, ತಕ್ಷಣವೇ ತನಿಖೆ ಆರಂಭಿಸಲಾಗಿದೆ. ಮಾಲ್‌ವೇರ್ ಹೊಂದಿದ್ದ ಇ-ಮೇಲ್‌ನ ಮೂಲ ಕೆದಕಿದಾಗ ಅದು ಬೆಂಗಳೂರಿನ ಐಟಿ ಕಂಪನಿಯಿಂದ ರವಾನೆಯಾಗಿರುವುದು ತಿಳಿದು ಬಂದಿದೆ. ಆದರೆ, ಬೆಂಗಳೂರಿನ ಕಂಪನಿಗೆ ಆ ಇ-ಮೇಲ್ ಬಂದಿರುವುದು ಅಮೆರಿಕದ ಪ್ರಾಕ್ಸಿ ಸರ್ವರ್‌ನಿಂದ ಬಂದಿತ್ತೆಂಬ ವಿಚಾರವೂ ತನಿಖೆಯ ವೇಳೆ ಬಹಿರಂಗವಾಗಿದೆ. ಹಾಗಾಗಿ, ಈ ಪ್ರಕರಣವೀಗ ಅಂತಾರಾಷ್ಟ್ರೀಯ ಸ್ವರೂಪ ಪಡೆದುಕೊಂಡಿದೆ.
Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ
You seem to have an Ad Blocker on.
To continue reading, please turn it off or whitelist Udayavani.