ಸೇನೆ ಸಂಸದಗೆ ಮತ್ತೆ ಹಾರಾಟ ಭಾಗ್ಯ?
Team Udayavani, Mar 28, 2017, 11:32 AM IST
ಹೊಸದಿಲ್ಲಿ: ಏರ್ ಇಂಡಿಯಾ ಸಿಬಂದಿಗೆ ಚಪ್ಪಲಿಯಲ್ಲಿ ಹೊಡೆದ ವಿವಾದಲ್ಲಿ ಸಿಲುಕಿ, ವಿಮಾನ ಹಾರಾಟ ನಿಷೇಧಕ್ಕೊಳಗಾಗಿರುವ ಸಂಸದ ರವೀಂದ್ರ ಗಾಯಕ್ವಾಡ್‌ಗೆ ಮತ್ತೆ ಹಾರಾಟದ ಅವಕಾಶ ಲಭ್ಯವಾಗುವ ಲಕ್ಷಣವಿದೆ. ಜೊತೆಗೆ ಈ ವಿಚಾರದಲ್ಲಿ ಕಾನೂನು ಬದಲಾವಣೆಗೂ ಕೇಂದ್ರ ಸರಕಾರ ಚಿಂತಿಸಿದೆ. ಮೂಲಗಳ ಪ್ರಕಾರ, ಪ್ರಕರಣ ಕುರಿತಂತೆ ಕೇಂದ್ರ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು, ಸ್ಪೀಕರ್ ಸುಮಿತ್ರಾ ಮಹಾಜನ್ ಅವರನ್ನು ಗಾಯಕ್‌ವಾಡ್ ಅವರು ಭೇಟಿಯಾಗಿದ್ದು, 45 ನಿಮಿಷ ಮಾತುಕತೆ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಶೀಘ್ರ ಸರಕಾರ ವಿಮಾನ ಯಾನ ಸಂಸ್ಥೆಗಳ ಹಾರಾಟ ನಿಷಿದ್ಧ ಕ್ರಮವನ್ನು ಹಿಂತೆಗೆಯಲಿದೆ. ಕೇಂದ್ರ ಸರಕಾರ ನಾಗರಿಕ ವಿಮಾನಯಾನ ನಿಯಮಗಳನ್ನು ಬದಲಿಸಲಿದ್ದು, ಸೇವೆ ಮತ್ತು ಸುರಕ್ಷತಾ ಮಾನದಂಡಗಳನ್ನು ಸಮದೂಗಿಸುವ ನಿಯಮ ತರಲಿದೆ. ಜೊತೆಗೆ ಪ್ರಯಾಣ ನಿಷೇಧ ತೀರ್ಮಾನ ವಿಮಾನಯಾನ ಕಂಪನಿಗಳಾಗಿದ್ದರೂ, ಅಂತಿಮ ಹಂತದಲ್ಲಿ ನಿರ್ಧಾರ ಸರಕಾರದ ವಿವೇಚನೆಯದ್ದಾಗಿರುವಂತೆ ಮಾಡಲಾಗುತ್ತದೆ ಎನ್ನಲಾಗಿದೆ. ಪ್ರಕರಣ ಬಳಿಕ ಅವರು ಮುಂಬೈಗೆ ರೈಲಿನಲ್ಲಿ ತೆರಳುವಂತಾಗಿತ್ತು.
ಸಂಸತ್ತಿನಲ್ಲಿ ಗದ್ದಲ: ರವೀಂದ್ರ ಗಾಯಕ್ವಾಡ್ ಪ್ರಕರಣ ಸಂಸತ್ತಿನ ಎರಡೂ ಮನೆಗಳಲ್ಲಿ ಸೋಮವಾರ ಪ್ರಸ್ತಾಪವಾಗಿದ್ದು, ಸಂಸದರ ಪರ ದನಿ ಕೇಳಿಬಂದಿದೆ. ಜೊತೆಗೆ ವಿವಾದಕ್ಕೆ ಸೌಹಾರ್ದಯುತ ಅಂತ್ಯ ಹಾಡುವ ಬಗ್ಗೆ ಸ್ಪೀಕರ್ ಸುಮಿತ್ರಾ ಮಹಾಜನ್ ಹೇಳಿದ್ದಾರೆ. ಜೊತೆಗೆ ನಿಷೇಧದಿಂದ ಸಂಸದೀಯ ಕರ್ತವ್ಯಕ್ಕೆ ಅಡ್ಡಿಯಾಗುತ್ತದೆ. ಪ್ರತಿ ಬಾರಿ ಅವರು ರೈಲಿನಲ್ಲಿ ಸಂಚರಿಸುವುದು ಕಷ್ಟಸಾಧ್ಯ ಎಂದು ಅಭಿಪ್ರಾಯಪಟ್ಟರು. ಚರ್ಚೆ ವೇಳೆ ಮಾತನಾಡಿದ ಶಿವಸೇನಾ ಸಂಸದ ಅರವಿಂದ ಸಾವಂತ್ ಹಾರಾಟ ನಿಷೇಧ ಮೂಲಭೂತ ಸ್ವಾತಂತ್ರ್ಯವನ್ನು ನಿರಾಕರಿಸಿದಂತೆ ಎಂದರು. ಶಿವಸೇನಾ ಸಂಸದ ಆನಂದರಾವ್ ಅದುÕಲ್ ಮಾತನಾಡಿ, ಈ ಹಿಂದೆ ವಿಮಾನದಲ್ಲಿ ಗಲಾಟೆ ಮಾಡಿದ ನಟ ಕಪಿಲ್ ಶರ್ಮಾ ಅವರನ್ನು ನಿಷೇಧಿಸಿಲ್ಲ. ಆದರೆ ಗಾಯಕ್‌ವಾಡ್ ಅವರನ್ನು ನಿಷೇಧಿಸಿದ್ದು ಸರಿಯೇ ಎಂದು ಕೇಳಿದ್ದಾರೆ. ಅತ್ತ ರಾಜ್ಯಸಭೆಯಲ್ಲೂ ಸಮಾಜವಾದಿ ಸಂಸದರು ಗಾಯಕ್‌ವಾಡ್ ಪರ ಮಾತನಾಡಿದ್ದು ಸಂಸದನಾಗಿ ಅವರ ಕರ್ತವ್ಯಕ್ಕೆ ಅಡ್ಡಿ ಪಡಿಸಿದಂತೆ ಎಂದಿದ್ದಾರೆ. ಪ್ರಕರಣ ಬಗ್ಗೆ ಮಾತನಾಡಿದ ಸಚಿವ ಗಜಪತಿ ರಾಜು, ವಿಮಾನದಲ್ಲಿ ಇಂತಹ ವರ್ತನೆಗಳು ತಪ್ಪು. ಇಂತಹ ವಿವಾದಗಳಿಂದ ಸಂಸದರಾದವರು ದೂರ ಇರಬೇಕಾಗಿದೆ ಎಂದರು.
ಒಸ್ಮಾನಾಬಾದ್ ಬಂದ್: ಗಾಯಕ್‌ವಾಡ್‌ಗೆ ವಿಮಾನ ಹಾರಾಟ ನಿಷೇಧ ವಿರುದ್ಧ ಮತ್ತು ತಮ್ಮ ಸಂಸದರನ್ನು ಹೀಗಳೆಯಲಾಗಿದೆ ಎಂದು ಆರೋಪಿಸಿ, ಸೋಮವಾರ ಗಾಯಕ್ವಾಡ್ ಕ್ಷೇತ್ರ ಒಸ್ಮಾನಾಬಾದ್‌ನಲ್ಲಿ ಬಂದ್‌ಗೆ ಕರೆ ನೀಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್ ವಿಧಿವಶ
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Manipur; ಪೊಲೀಸ್ ಇಲಾಖೆಯಲ್ಲಿ ಮೈತೇಯಿ ಮತ್ತು ಕುಕಿಗಳು ಒಟ್ಟಾಗಿ ಕೆಲಸ ಮಾಡಬೇಕು
Kerala; ಸರಕಾರಿ ಶಾಲೆಯಲ್ಲಿ ಕ್ರಿಸ್ಮಸ್ ಆಚರಣೆಗೆ ಅಡ್ಡಿ,ಗೋದಲಿ ಧ್ವಂಸ: ವ್ಯಾಪಕ ಆಕ್ರೋಶ
Mahakumbh 2025: 45 ಕೋಟಿ ಯಾತ್ರಾರ್ಥಿಗಳ ನಿರೀಕ್ಷೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಕರಾವಳಿಯಲ್ಲಿ “ಕರ್ನಾಟಕ ಕೂಟ’: ಜ. 17-23ರ ವರೆಗೆ ಮಂಗಳೂರು, ಉಡುಪಿಯಲ್ಲಿ
Uppinangady; ಕಾಡಾನೆ ಸಂಚಾರದಿಂದ ಹಿರೇಬಂಡಾಡಿ ಗ್ರಾಮಸ್ಥರು ಭಯಭೀತ
Vijay Hazare Trophy: ಕರ್ನಾಟಕಕ್ಕೆ ಸತತ 2ನೇ ಗೆಲುವಿನ ಸಿಹಿ
Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್ ಜಾಮ್
Pro Kabaddi League: ಗುಜರಾತ್ ಜೈಂಟ್ಸ್ ವಿರುದ್ಧದಬಾಂಗ್ ಡೆಲ್ಲಿಗೆ ಗೆಲುವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.