ಎನ್‌ಸಿಪಿ  ಹಿರಿಯ ನಾಯಕ ಛಗನ್‌ ಭುಜಬಲ್‌ ಮತ್ತೆ ಶಿವಸೇನೆ ತೆಕ್ಕೆಗೆ?


Team Udayavani, May 23, 2018, 12:21 PM IST

254113.jpg

ಮುಂಬಯಿ : ಅಕ್ರಮ ಹಣ ವರ್ಗಾವಣೆ  ಪ್ರಕರಣದಲ್ಲಿ  ಜಾರಿ ನಿರ್ದೇಶನಾಲಯದಿಂದ ಬಂಧಿತರಾಗಿ  2 ವರ್ಷಗಳ ಕಾಲ ಜೈಲಿನಲ್ಲಿದ್ದ  ಎನ್‌ಸಿಪಿ  ಹಿರಿಯ ನಾಯಕ, ಮಾಜಿ  ಉಪ ಮುಖ್ಯಮಂತ್ರಿ  ಛಗನ್‌ ಭುಜಬಲ್‌ ಅವರು  ಎರಡು ವಾರಗಳ ಹಿಂದೆ  ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದರು. ಈ  ಬೆಳವಣಿಗೆಯ ಬಳಿಕ  ಛಗನ್‌ ಭುಜಬಲ್‌ ಅವರು  ಮತ್ತೆ  ರಾಜಕೀಯದಲ್ಲಿ ಸಕ್ರಿಯರಾಗಲಿದ್ದಾರೆಯೇ  ಎಂಬ  ಚರ್ಚೆಗಳು  ತೀವ್ರಗೊಂಡಿರುವ  ಬೆನ್ನಲ್ಲೇ  ಭುಜಬಲ್‌  ಅವರು  ತನ್ನ  ಮಾತೃಪಕ್ಷ  ಶಿವಸೇನೆಗೆ  ವಾಪಸಾಗಲಿದ್ದಾರೆ ಎಂಬ  ಗುಸು ಗುಸು  ರಾಜ್ಯದ  ರಾಜಕೀಯ ಪಡಸಾಲೆಯಲ್ಲಿ  ಹಬ್ಬಿದೆ. 

ಜೈಲಿನಿಂದ ಬಿಡು ಗಡೆಯಾಗಿ  ಹೊರಬಂದ  ಕೆಲವೇ ದಿನಗಳಲ್ಲಿ  ಭುಜಬಲ್‌ ಅವರ  ಪುತ್ರ  ಪಂಕಜ್‌ ಭುಜಬಲ್‌ ಅವರು  ಶಿವಸೇನೆ ವರಿಷ್ಠ  ಉದ್ಧವ್‌ ಠಾಕ್ರೆ ಅವರ  ನಿವಾಸ “ಮಾತೋಶ್ರೀ’ಗೆ  ಭೇಟಿ ನೀಡಿ  ಉದ್ಧವ್‌ ಅವರೊಂದಿಗೆ  ಮಾತುಕತೆ ನಡೆಸಿದಾಗಿನಿಂದ ಭುಜಬಲ್‌  ಶಿವಸೇನೆಗೆ ಮರಳಲಿದ್ದಾರೆ ಎಂಬ  ಬಗೆಗೆ  ವದಂತಿಗಳು  ಹರಡಲಾರಂಭಿಸಿದ್ದವು.  

ಈ ವದಂತಿಗೆ  ಪುಷ್ಟಿ ಎಂಬಂತೆ ಇದೀಗ  ಶಿವಸೇನೆ  ಕಾರ್ಯದರ್ಶಿ  ಮಿಲಿಂದ್‌ ನಾರ್ವೇಕರ್‌ ಅವರು  ರವಿವಾರದಂದು  ಛಗನ್‌ ಭುಜಬಲ್‌ ಅವರನ್ನು  ಭೇಟಿಯಾಗಿ  ಸಮಾಲೋಚನೆ ನಡೆಸಿರುವುದು  ಕುತೂಹಲಕ್ಕೆ  ಕಾರಣವಾಗಿದೆ. ಶಿವಸೇನೆಯಿಂದಲೇ  ತಮ್ಮ  ರಾಜಕೀಯ  ಆರಂಭಿಸಿದ್ದ  ಛಗನ್‌ ಭುಜಬಲ್‌  ಅವರು  1991ರಲ್ಲಿ  ಶಿವಸೇನೆ  ಸ್ಥಾಪಕ ಬಾಳಾ ಠಾಕ್ರೆ ಅವರೊಂದಿಗಿನ  ವೈಮನಸ್ಸಿನ  ಕಾರಣದಿಂದಾಗಿ  ಪಕ್ಷವನ್ನು  ತೊರೆದಿದ್ದರು. 

ಛಗನ್‌ ಭುಜಬಲ್‌ ಅವರನ್ನು  ಭೇಟಿಯಾಗಿ  ಸಮಾಲೋಚನೆ ನಡೆಸಿರುವುದನ್ನು  ನಾರ್ವೇಕರ್‌  ದೃಢಪಡಿಸಿದ್ದಾರೆ. ಸದ್ಯ ಭುಜಬಲ್‌ ಅವರು  ನಗರದ  ಆಸ್ಪತ್ರೆಯೊಂದರಲ್ಲಿ  ಚಿಕಿತ್ಸೆ  ಪಡೆಯುತ್ತಿದ್ದು  ಅಲ್ಲಿಗೇ ತೆರಳಿ  ಭುಜಬಲ್‌ ಅವರೊಂದಿಗೆ  ಮಾತುಕತೆ ನಡೆಸಿರುವುದಾಗಿ  ಅವರು  ಹೇಳಿದರು. ಆದರೆ  ಮಾತುಕತೆಯ  ವಿವರಗಳನ್ನು  ನೀಡಲು  ನಾರ್ವೇಕರ್‌ ನಿರಾಕರಿಸಿದರು. ಈರ್ವರು  ನಾಯಕರು ಸುಮಾರು  ಒಂದು ತಾಸಿಗೂ  ಅಧಿಕ ಸಮಯ  ಮಾತುಕತೆ ನಡೆಸಿದರು ಎನ್ನಲಾಗಿದೆ.  

ಭುಜಬಲ್‌  ಸಕ್ರಿಯ ರಾಜಕಾರಣಕ್ಕೆ ಮರಳುವುದಕ್ಕೂ ಮುನ್ನ ಠಾಕ್ರೆ  ಕುಟುಂಬ ದೊಂದಿಗಿನ  ತನ್ನ ಸಂಬಂಧವನ್ನು  ಸುಧಾರಿಸಿ ಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದವರ  ಆಪ್ತ ಮೂಲಗಳು ತಿಳಿಸಿವೆ.       

ಆದರೆ  ಶಿವಸೇನೆಯ ಮೂಲಗಳು  ಇದೊಂದು  ಸೌಹಾರ್ದ ಭೇಟಿ  ಎಂದಿದ್ದು  ಅನಾರೋಗ್ಯದ ಕಾರಣದಿಂದಾಗಿ  ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿರುವ  ಭುಜಬಲ್‌ ಅವರ ಯೋಗಕ್ಷೇಮವನ್ನು  ವಿಚಾರಿಸಲು ನಾರ್ವೇಕರ್‌ ಆಸ್ಪತ್ರೆಗೆ ಭೇಟಿ ನೀಡಿದ್ದರೇ ಹೊರತು ಭೇಟಿಯ ವೇಳೆ  ಯಾವುದೇ ರಾಜಕೀಯ ವಿಚಾರಗಳು  ಚರ್ಚೆಗೆ ಬರಲಿಲ್ಲ ಎಂದು ಸ್ಪಷ್ಟಪಡಿಸಿವೆ. 

ಟಾಪ್ ನ್ಯೂಸ್

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

Mika Singh: ಮಿಕಾ ಹಾಡಿಗೆ ಫಿದಾ..‌ಪಾಕ್‌ ಅಭಿಮಾನಿಯಿಂದ 3 ಕೋಟಿ ರೂ. ವಾಚ್‌, ಚಿನ್ನ ಗಿಫ್ಟ್

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು

Belagavi: ಎಸ್‌ಡಿಎ ರುದ್ರಣ್ಣ ಕೇಸ್:‌ ಮೂವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

Vimana 2

Kochi airport; ಶಬರಿಮಲೆ ಭಕ್ತರಿಗೆ ಅನುಕೂಲವಾಗುವಂತೆ ವಿಶೇಷ ವ್ಯವಸ್ಥೆಗಳು

1-kanna

Maharashtra Election; ಫಡ್ನವಿಸ್ ಪತ್ನಿಯ ವಿರುದ್ಧ ಕನ್ಹಯ್ಯಾ ಕುಮಾರ್ ಹೇಳಿಕೆ

1-raga

Modiji ಸಂವಿಧಾನವನ್ನು ಓದಲೇ ಇಲ್ಲ, ಹಾಗಾಗಿ…: ರಾಹುಲ್ ಗಾಂಧಿ

9

Kasturi Shankar: ನಟಿ ಕಸ್ತೂರಿ ಶಂಕರ್‌ ಜಾಮೀನು ಅರ್ಜಿ ವಜಾ; ಶೀಘ್ರ ಬಂಧನ ಸಾಧ್ಯತೆ  

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

1-p-r

US; ಒಬಾಮಾ ಮನೆಯಲ್ಲಿ ಪ್ರೇಯಸಿ ಕರೆಸಿ ಸೆ*ಕ್ಸ್ ಮಾಡಿದ ಸೀಕ್ರೆಟ್ ಸರ್ವಿಸ್ ಏಜೆಂಟ್ ವಜಾ!

POLICE-5

Malpe: ಜುಗಾರಿ ಅಡ್ಡೆಗೆ ದಾಳಿ, ವಶಕ್ಕೆ

POlice

Malpe: ಜೂಜಾಟ; 12 ಮಂದಿ ಅಂದರ್‌; ಪ್ರಕರಣ ದಾಖಲು

1—amanatulla-khan

Waqf; ಅಮಾನತುಲ್ಲಾ ಖಾನ್ ಗೆ ಜಾಮೀನು: ಮೋದಿಯ ಸುಳ್ಳು ಪ್ರಕರಣ ಬಹಿರಂಗ ಎಂದ ಆಪ್

marriage 2

Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.