ಸೆನ್ಸೆಕ್ಸ್ 531 ಅಂಕ ಕುಸಿತ
Team Udayavani, Jan 26, 2021, 7:25 AM IST
ಮುಂಬೈ: ಇಂಧನ ಮತ್ತು ಐಟಿ ಕ್ಷೇತ್ರಗಳ ಷೇರುಗಳ ಭಾರೀ ಮಾರಾಟವು ಸೆನ್ಸೆಕ್ಸ್ ಅನ್ನು ಸತತ 3ನೇ ದಿನವೂ ಕುಸಿಯುವಂತೆ ಮಾಡಿದೆ. ಜಾಗತಿಕ ಬೆಳವಣಿಗೆಗಳು ಹಾಗೂ ಭಾರತ-ಚೀನಾ ಸೈನಿಕರ ನಡುವಿನ ಘರ್ಷಣೆಯ ಸುದ್ದಿಗಳ ಹಿನ್ನೆಲೆಯಲ್ಲಿ ಹೂಡಿಕೆದಾರರು ಷೇರುಗಳ ಖರೀದಿಯಲ್ಲಿ ಆಸಕ್ತಿ ತೋರಲಿಲ್ಲ. ಪರಿಣಾ ಮ ಮುಂಬೈ ಷೇರುಪೇಟೆಸಂವೇದಿ ಸೂಚ್ಯಂಕ ಸೋಮವಾರ 530.95 ಅಂಕ ಕುಸಿತ ದಾಖಲಿಸಿ, 48,347.59 ರಲ್ಲಿ ಅಂತ್ಯಗೊಂ ಡಿದೆ. ಇದೇ ವೇಳೆ, ನಿಫ್ಟಿ ಕೂಡ 133 ಅಂಕ ಕುಸಿದು, ದಿನಾಂತ್ಯಕ್ಕೆ 14,238. 90ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಕಳೆದ ಮೂರು ವಹಿವಾಟಿನ ದಿನಗಳಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಒಟ್ಟಾರೆ 1,444.53 ಅಂಕಗಳಷ್ಟು ಪತನಗೊಂಡಿದ್ದರೆ, ನಿಫ್ಟಿ 405.80 ಅಂಕ ಕುಸಿದಿದೆ.
ಚಿನ್ನದ ದರ ಇಳಿಕೆ: ದೆಹಲಿ ಚಿನಿವಾರ ಮಾರುಕಟ್ಟೆಯಲ್ಲಿ ಹಳದಿ ಲೋಹದ ದರ 141 ರೂ. ಇಳಿಕೆಯಾಗಿ, 10 ಗ್ರಾಂಗೆ 48,509 ರೂ. ಆಗಿದೆ. ಬೆಳ್ಳಿ ದರ 43 ರೂ. ಹೆಚ್ಚಳವಾಗಿ, ಕೆಜಿಗೆ 66,019 ರೂ. ಆಗಿದೆ. ಇನ್ನು, ಡಾಲರ್ ಎದುರು ರೂಪಾಯಿ ಮೌಲ್ಯ 3 ಪೈಸೆ ಏರಿಕೆಯಾಗಿ, 72.94 ರೂ. ಆಗಿದೆ.
2020ರಲ್ಲಿ ಎಫ್ಡಿಐ ಹೆಚ್ಚಳ :
ಕಳೆದ ವರ್ಷ ಭಾರತಕ್ಕೆ ಶೇ.13ರಷ್ಟು ಹೆಚ್ಚು ವಿದೇಶಿ ನೇರ ಬಂಡವಾಳ(ಎಫ್ಡಿಐ) ಹರಿದುಬಂದಿದೆ. ಕೊರೊನಾ ಸೋಂಕಿನಿಂದಾಗಿ ಅಮೆರಿಕ, ಯು.ಕೆ. ಮತ್ತು ರಷ್ಯಾದಂತಹ ದೇಶಗಳಲ್ಲಿ ಬಂಡವಾಳದ ಪ್ರಮಾಣವು ಗಣನೀಯವಾಗಿ ಕುಗ್ಗಿದ್ದರೆ, ಅದರ ಲಾಭವನ್ನು ಭಾರತ ಮತ್ತು ಚೀನಾ ಪಡೆದವು ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. 2019ಕ್ಕೆ ಹೋಲಿಸಿದರೆ 2020ರಲ್ಲಿ ಜಾಗತಿಕ ವಿದೇಶಿ ನೇರ ಬಂಡವಾಳದ ಪ್ರಮಾಣ ಶೇ.42ರಷ್ಟು ಕುಸಿದಿದೆ. ಆದರೆ, ಭಾರತದಲ್ಲಿ ಈ ಪ್ರಮಾಣ ಶೇ.13ರಷ್ಟು ಹೆಚ್ಚಳವಾಗಿದೆ ಎಂದಿದೆ ವರದಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್ ರದ್ದು: ಸುಪ್ರೀಂ ಕೋರ್ಟ್
ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್ ಸರಕಾರ; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
India Cricket: ಸೀಮಿತ ಓವರ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಸ್ಟಾರ್ ಆಲ್ ರೌಂಡರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.