ಸೌದಿ ಭ್ರಷ್ಟ ನಿಗ್ರಹಕ್ಕೆ ಸೆನ್ಸೆಕ್ಸ್ ತಲ್ಲಣ
Team Udayavani, Nov 8, 2017, 7:05 AM IST
ಮುಂಬಯಿ: ಸೌದಿ ಅರೇಬಿಯಾದ ರಾಜಮನೆ ತನದ ಮಟ್ಟದಲ್ಲಿ ನಡೆದಿರುವ ಬೆಳವಣಿಗೆಗಳು ಮುಂಬೈ ಷೇರು ಪೇಟೆಯಲ್ಲೂ ಸಂಚಲನಕ್ಕೆ ಕಾರಣವಾಗಿದೆ. ಅರಬ್ ರಾಷ್ಟ್ರದ ವಿದ್ಯಮಾನಗಳಿಂದಾಗಿ ಕಚ್ಚಾ ತೈಲದ ದರ ಏರಿಕೆ ಆಗಲಿದೆಯೇ ಎಂಬ ಭೀತಿ ಹೂಡಿಕೆದಾರರಲ್ಲಿ ಮೂಡಿದ್ದು, ಬಹುತೇಕ ಮಂದಿ ಷೇರು ಮಾರಾಟದಲ್ಲಿ ತೊಡಗಿದರು.
ಪರಿಣಾಮ ಮಂಗಳವಾರ ಮುಂಬೈ ಷೇರು ಪೇಟೆ ಸಂವೇದಿ ಸೂಚ್ಯಂಕ 360 ಅಂಕಗಳ ಭಾರೀ ಕುಸಿತ ದಾಖಲಿಸಿ, 33,370ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 101 ಅಂಕ ಇಳಿಕೆಯಾಗಿ, 10,350ರಲ್ಲಿ ಅಂತ್ಯಗೊಂಡಿತು.
ಸೌದಿಯ ಭಾವೀ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಅಲ್ಲಿನ ಭ್ರಷ್ಟ ರಾಜಕುಮಾರರು, ಸಚಿವರ ವಿರುದ್ಧ ಕೈಗೊಂಡ ಕ್ರಮಗಳ ಪರಿಣಾಮ, ರಾತ್ರಿ ಬೆಳಗಾಗುವುದರೊಳಗೆ ಕಚ್ಚಾ ತೈಲದ ದರ ಶೇ.3.5 ರಷ್ಟು ಏರಿಕೆಯಾಗಿತ್ತು. ಜುಲೈ 2015ರ ನಂತರ ಇಷ್ಟೊಂದು ಏರಿಕೆ ಆಗಿದ್ದು ಇದೇ ಮೊದಲು. ತೈಲ ದರದ ಏರಿಕೆ ಭಾರತದಂತಹ ತೈಲ ಆಮದು ಮಾಡುವ ದೇಶಗಳಿಗೆ ಸಮಸ್ಯೆ ಆಗಲಿದ್ದು, ಹಣದುಬ್ಬರ, ವಿತ್ತೀಯ ಲೆಕ್ಕಾಚಾರದಲ್ಲಿ ಅಲ್ಲೋಲಕಲ್ಲೋಲ ಉಂಟಾಗುವ ಸಾಧ್ಯತೆಯಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.