ಇಂಜಿನಿಯರಿಂಗ್ ಬೋಧಕರಿಗೂ ಪ್ರತ್ಯೇಕ ಪರೀಕ್ಷೆ
Team Udayavani, Sep 13, 2019, 5:00 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಇಂಜನಿಯರಿಂಗ್, ವೈದ್ಯಕೀಯ ಅಥವಾ ಆಡಳಿತಾತ್ಮಕ ಕಾಲೇಜುಗಳಲ್ಲಿ ಬೋಧಕರಾಗಿ ಸೇರಲು ಇಚ್ಛಿಸುವವರೂ ಇನ್ನೂ ಎಐಸಿಟಿಇ ಇಂದ ಕಡ್ಡಾಯ ತರಬೇತಿ ಮತ್ತು ಪರೀಕ್ಷೆಯಲ್ಲಿ ಪಾಸಾಗುವುದು ಕಡ್ಡಾಯವಾಗಲಿದೆ. ಬಿಎಡ್ ಹಾಗೂ ನೆಟ್ ಮಾದರಿಯಲ್ಲೇ ಈ ಪರೀಕ್ಷೆಯನ್ನೂ ನಡೆಸಲು ನಿರ್ಧರಿಸಲಾಗಿದೆ.
ಸದ್ಯ ಬಿಟೆಕ್ ಅಥವಾ ಎಂಟೆಕ್ ಪದವಿಗಳನ್ನು ಆಧರಿಸಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಬೋಧಕರನ್ನು ನೇಮಿಸಿಕೊಳ್ಳಲಾಗುತ್ತಿದೆ. ಆದರೆ ಬಹುತೇಕ ಇಂಜಿನಿಯರುಗಳು ಹಾಗೂ ವೈದ್ಯರು ಉದ್ಯೋಗರ್ಹರಾಗಿರುವುದಿಲ್ಲ ಎಂಬ ಆರೋಪದ ಹಿನ್ನೆಲೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಕ್ಕಾಗಿ ಎಐಸಿಟಿಇ ಅಡಿಯಲ್ಲಿ ಅಟಲ್ ಎಂಬ ವಿಶೇಷ ಅಕಾಡೆಮಿಗಳನ್ನು ಸ್ಥಾಪಿಸಲಾಗಿದೆ. ಈಗಾಗಲೇ ಜೈಪುರ, ತಿರುವನಂತಪುರ, ಗುವಾಹಟಿ ಮತ್ತು ವಡೋದರಾದಲ್ಲಿ ಈ ಸಂಸ್ಥೆಗಳಿದ್ದು, ಇನ್ನೂ 11 ಕಡೆ ಸಂಸ್ಥೆಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದರೊಂದಿಗೆ ಈಗಾಗಲೇ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ರಾಷ್ಟ್ರೀಯ ತಾಂತ್ರಿಕ ಶಿಕ್ಷಕರ ತರಬೇತಿ ಮತ್ತು ಸಂಶೋಧನೆ ಕೇಂದ್ರ (ಎನ್‌ಟಿಟಿಟಿಆರ್) ಹೊಂದಿದೆ. ಅಟಲ್ ಸಂಸ್ಥೆಗಳ್ಳಲ್ಲಿ ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್ ಟೆಕ್ನಾಲಜಿ, ಸೈಬರ್ ಸೆಕ್ಯುರಿಟಿ ಸೇರಿದಂತೆ ಸುಧಾರಿತ ತಂತ್ರಜ್ಞಾನದ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.