ಪ್ರತ್ಯೇಕತಾವಾದಿಗಳನ್ನು ಕೆನಡಾ ಬೆಂಬಲಿಸಲ್ಲ
Team Udayavani, Feb 22, 2018, 12:23 PM IST
ಅಮೃತಸರ: ಕೆನಡಾ ಯಾವತ್ತೂ ಅಖಂಡ ಭಾರತದ ನಿಲುವಿಗೆ ಬದ್ಧವಾಗಿರುತ್ತ ದೆಯೇ ವಿನಾ ಯಾವುದೇ ಪ್ರತ್ಯೇಕತಾವಾದಿ ಚಳವಳಿಗೆ ಬೆಂಬಲ ನೀಡುವುದಿಲ್ಲ ಎಂದು ಕೆನಡಾ ಪ್ರಧಾನಿ ಜಸ್ಟಿನ್ ಟ್ರಾಡ್ನೂ ಸ್ಪಷ್ಟಪಡಿಸಿದ್ದಾರೆ.
ಭಾರತ ಪ್ರವಾಸದಲ್ಲಿರುವ ಜಸ್ಟಿನ್ ಅವರು ಬುಧವಾರ ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಜತೆ ಮಾತುಕತೆ ನಡೆಸಿದ ಬಳಿಕ ಈ ವಿಚಾರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅಮರೀಂದರ್ ಅವರು ಮಾತುಕತೆಯ ವೇಳೆ ಕಲಿಸ್ಥಾನ ವಿಚಾರ ಪ್ರಸ್ತಾಪಿಸಿದ್ದು, ಕೆನಡಾ ಸಹಿತ ಹಲವು ದೇಶಗಳು ಪ್ರತ್ಯೇಕತಾವಾದಿಗಳಿಗೆ ಹಣಕಾಸು ನೆರವು ನೀಡುತ್ತಿದೆ. ಇದು ನಿಲ್ಲಬೇಕು. ಜತೆಗೆ, ಪ್ರತ್ಯೇಕ ಸಿಕ್ಖ್ ರಾಜ್ಯ ಸ್ಥಾಪಿಸುವ ಉದ್ದೇಶದಿಂದ ಪಂಜಾಬ್ ಅನ್ನು ಅಸ್ಥಿರಗೊಳಿಸಲು ಹೊರಟಿರುವ ಶಕ್ತಿಗಳನ್ನು ನಿರ್ಮೂಲನೆ ಮಾಡುವಲ್ಲಿ ಸಹಕಾರ ನೀಡಬೇಕು ಎಂದು ಕೆನಡಾ ಪ್ರಧಾನಿಯನ್ನು ಅಮರೀಂದರ್ ಕೋರಿದರು. ಇದಕ್ಕೆ ಟ್ರಡ್ನೂ ಈ ರೀತಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನಿ ಜತೆಗಲ್ಲದೆ ಕೆನಡಾದಿಂದ ಆಗಮಿಸಿರುವ 6 ಮಂದಿ ಸಚಿವ ರೊಂದಿಗೂ ಅಮರೀಂದರ್, ಬುಧವಾರ ಮಾತು ಕತೆ ನಡೆಸಿದ್ದಾರೆ. ಕಲಿಸ್ತಾನ ಉಗ್ರರಿಗೆ ಕೆನಡಾ ಬೆಂಬಲ ನೀಡುತ್ತಿದೆ ಎಂಬ ಕಾರಣ ಕ್ಕಾಗಿಯೇ ಕಳೆದ ವರ್ಷ ಕೆನಡಾ ರಕ್ಷಣಾ ಸಚಿವ ಹರ್ಜಿತ್ ಸಿಂಗ್ ಸಜ್ಜನ್‌ರನ್ನು ಭೇಟಿಯಾಗಲು ಅಮರೀಂದರ್ ನಿರಾಕರಿ ಸಿದ್ದನ್ನು ಸ್ಮರಿಸಬಹುದು.
ತೀವ್ರವಾದಿಗಳ ಪಟ್ಟಿ: ಪಂಜಾಬ್‌ನಲ್ಲಿ ಜನಾಂಗೀಯ ಅಪರಾಧ ಎಸಗಿರುವ, ಉಗ್ರರಿಗೆ ಶಸ್ತ್ರಾಸ್ತ್ರ ಹಾಗೂ ಹಣಕಾಸು ಪೂರೈಸುವ 9 ಮಂದಿ ಕೆನಡಾ ತೀವ್ರವಾದಿಗಳ ಹೆಸರುಳ್ಳ ಪಟ್ಟಿಯನ್ನೂ ಕೆನಡಾ ಪ್ರಧಾನಿಗೆ ಅಮ ರೀಂದರ್ ಹಸ್ತಾಂತರಿಸಿ, ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದರು. ಸ್ವರ್ಣಮಂದಿರಕ್ಕೆ ಭೇಟಿ: ಇದಕ್ಕೂ ಮುನ್ನ ಕೆನಡಾ ಪ್ರಧಾನಿ ಮತ್ತವರ ಕುಟುಂಬ ಅಮೃತಸರದ ಸ್ವರ್ಣಮಂದಿರಕ್ಕೆ ಭೇಟಿ ನೀಡಿ, ಒಂದು ಗಂಟೆ ಕಾಲ ಅಲ್ಲಿ ಕಾಲ ಕಳೆಯಿತು. ನಂತರ ದೇಶ ವಿಭಜನೆಗೆ ಸಂಬಂಧಿಸಿದ ಮ್ಯೂಸಿಯಂಗೂ ತೆರಳಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.