ದಿಲ್ಲಿಯಲ್ಲಿ ಗಂಭೀರ ಮಾಲಿನ್ಯ
Team Udayavani, Oct 21, 2017, 7:30 AM IST
ನವದೆಹಲಿ: ಪಟಾಕಿಗಳ ಮಾರಾಟ ನಿಷೇಧಿಸಿ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶವನ್ನೇ ಗಾಳಿಗೆ ತೂರಿದ ದೆಹಲಿ ನಾಗರಿಕರು, ದೀಪಾವಳಿಯ ರಾತ್ರಿ ನಡೆಸಿದ ಸುಡುಮದ್ದುಗಳ ಅಬ್ಬರದಿಂದಾಗಿ ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಶುಕ್ರವಾರ “ಗಂಭೀರ’ ಹಾಗೂ ಕಳವಳಕಾರಿ ಸ್ಥಿತಿ ತಲುಪಿತು. ಬೆಳಗ್ಗೆ ಏಳುತ್ತಿದ್ದಂತೆಯೇ ಸುಟ್ಟು ಪಟಾಕಿಯ ದಟ್ಟ ಹೊಗೆಯ ಹೊದಿಕೆಯು ನಗರವನ್ನು ಆವರಿಸಿತ್ತು.
ಮಾಲಿನ್ಯ ಮಟ್ಟವನ್ನು ಸೂಚಿಸುವಂಥ ಸರ್ಕಾರಿ ಸ್ವಾಮ್ಯದ ವಾಯು ಗುಣಮಟ್ಟ ಮುನ್ಸೂಚನೆ ಮತ್ತು ಸಂಶೋಧನಾ ವ್ಯವಸ್ಥೆ(ಸಫರ್)ಯು ಕಡು ಕಂದುಬಣ್ಣಕ್ಕೆ ತಿರುಗುವ ಮೂಲಕ, ದೆಹಲಿಯಲ್ಲಿ ವಾಯು ಮಾಲಿನ್ಯದ ಗಂಭೀರತೆಯನ್ನು ಪರಿಚಯಿ ಸಿತು. ಈ ಪರಿಯ ವಾಯುಮಾಲಿನ್ಯವು ಉಸಿರಾಟದ ಮತ್ತು ಹೃದಯಸಂಬಂಧಿ ಸಮಸ್ಯೆ ಉಳ್ಳವರಿಗೆ ಮಾತ್ರವಲ್ಲ ಆರೋಗ್ಯ ವಂತರ ದೇಹದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಆದರೆ, ಸಮಾಧಾನದ ವಿಷಯವೆಂದರೆ, ಸುಪ್ರೀಂ ಕೋರ್ಟ್‌ನ ಆದೇಶದ ಹಿನ್ನೆಲೆಯಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಪಟಾಕಿಗಳ ಸದ್ದು, ಮಾಲಿನ್ಯ ಸ್ವಲ್ಪಮಟ್ಟಿಗೆ ಕಡಿಮೆಯೇ ಇತ್ತು. ಕಳೆದ ವರ್ಷ ದಾಖಲಾದ ಮಾಲಿನ್ಯ ಪ್ರಮಾಣವು ಕನಿಷ್ಠ 3 ದಶಕಗಳಲ್ಲೇ ಅತ್ಯಂತ ಹೆಚ್ಚಿನದ್ದಾಗಿತ್ತು.
ಅಗ್ನಿಶಾಮಕ ದಳಕ್ಕೆ 204 ಕರೆ
ದೆಹಲಿಯಲ್ಲಿ ಬುಧವಾರ ರಾತ್ರಿಯಿಂದ ಗುರುವಾರ ರಾತ್ರಿಯ ಅವಧಿಯಲ್ಲಿ ಬೆಂಕಿ ಸಂಬಂಧಿ ಅವಘಡಗಳ ಕುರಿತು ಸುಮಾರು 204 ಕರೆಗಳು ಬಂದಿದ್ದು, ಈ ಪೈಕಿ 51 ಕರೆಗಳು ಪಟಾಕಿ ದುರಂತ ಗಳದ್ದೇ ಆಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ 243 ಕರೆಗಳು ಬಂದಿದ್ದವು ಎಂದೂ ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Allu Arjun ನಿವಾಸದಲ್ಲಿ ದಾಂಧಲೆ!; 8 ಮಂದಿ ಬಂಧನ: ಕೃತ್ಯ ಎಸಗಿದ್ದು ಯಾರು?
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Mohan Bhagwat; ತಿಳಿವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.