ರೇಪಿಸ್ಟ್‌ಗಳನ್ನು ಬಹಿರಂಗವಾಗಿ ಗುಂಡಿಕ್ಕಿ ಸಾಯಿಸಬೇಕು: ಬಿಜೆಪಿ ಸಂಸದ
Team Udayavani, Mar 29, 2018, 11:11 AM IST
ತೇಜ್‌ಪುರ, ಅಸ್ಸಾಂ: ಮಹಿಳೆಯರನ್ನು ಗೌರವದಿಂದ ಕಾಣದ ಅತ್ಯಾಚಾರಿಗಳಿಗೆ ಬಹಿರಂಗವಾಗಿ ಗುಂಡಿಕ್ಕಿ ಸಾಯಿಸಬೇಕು ಎಂದು ಅಸ್ಸಾಂ ತೇಜ್‌ಪುರ ಬಿಜೆಪಿ ಸಂಸದ ರಾಮ್ ಪ್ರಸಾದ್ ಶರ್ಮಾ ಹೇಳಿದ್ದಾರೆ.
“ಅತ್ಯಾಚಾರದಂತಹ ಹೇಯ ಅಪರಾಧಗಳನ್ನು ಎಸಗುವವರಿಗೆ ಸಾರ್ವಜನಿಕವಾಗಿ ಗುಂಡೆಸೆದು ಕೊಲ್ಲಬೇಕು. ಈ ವಿಧಾನದಿಂದ ಮಾತ್ರವೇ ಸಮಾಜದಲ್ಲಿ ಮಹಿಳೆಯರು, ಹುಡುಗಿಯರ ಮತ್ತು ಮಕ್ಕಳ ಮೇಲಿನ ಅತ್ಯಾಚಾರಕ್ಕೆ ಕಡಿವಾಣ ಹಾಕಬಹುದು’ ಎಂದು ರಾಮಪ್ರಸಾದ್ ಶರ್ಮಾ ಹೇಳಿದರು.
“ಅತ್ಯಾಚಾರಿಗಳಿಗೆ ಗುಂಡು ಹೊಡೆದು ಸಾಯಿಸಲು ಶೂಟಿಂಗ್ ಸ್ಕ್ವಾಡ್ ಸ್ಥಾಪಿಸಬೇಕು. ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ, ದೌರ್ಜನ್ಯ ಎಸಗುವ ಮತ್ತು ಮಹಿಳೆಯರನ್ನು ಅನುಚಿತವಾಗಿ ಸ್ಪರ್ಶಿಸಿ ತಮ್ಮ ಲೈಂಗಿಕ ದಾಹ ತೀರಿಸಿಕೊಳ್ಳುವ ಅಪರಾಧಗಳಿಗೆ ಕನಿಷ್ಠ 10 ವರ್ಷಗಳ ಜೈಲು ಶಿಕ್ಷೆಯನ್ನು ನೀಡಬೇಕು’ ಎಂದು ಶರ್ಮಾ ಹೇಳಿದರು.
ಕಳೆದ ವಾರ ಅಸ್ಸಾಂ ನಲ್ಲಿ ಬಾಲಕಿಯೊಬ್ಬಳ ಮೇಲೆ ನಡೆದಿದ್ದ ಅಮಾನುಷ ಅತ್ಯಾಚಾರ ಮತ್ತು ಆಕೆಯನ್ನು ಅನಂತರ ಬೆಂಕಿ ಹಚ್ಚಿ ಸಜೀವವಾಗಿ ಸುಟ್ಟ ಘಟನೆಗೆ ಪ್ರತಿಕ್ರಿಯೆ ನೀಡುತ್ತಾ ಸಂಸದ ಶರ್ಮಾ ಅವರು ಈ ನಿಷ್ಠುರ ಮಾತುಗಳನ್ನು ಆಡಿದರು. ಅಸ್ಸಾಂನ ನಗಾಂವ್ ಜಿಲ್ಲೆಯಲ್ಲಿ ಬಾಲಕಿಯೊಬ್ಬಳ ಮೇಲೆ ಮೂವರು ಗ್ಯಾಂಗ್ ರೇಪ್ ನಡೆಸಿದ್ದರು; ಇವರ ಪೈಕಿ ಇಬ್ಬರು ಅಪ್ರಾಪ್ತ ವಯಸ್ಸಿನವರಾಗಿದ್ದರು.
ಅತ್ಯಾಚಾರಿಗಳಿಂದ ಗ್ಯಾಂಗ್ ರೇಪ್‌ಗೆ ಒಳಗಾಗಿ ಸಜೀವ ದಹಿಸಲ್ಪಟ್ಟಿದ್ದ ಐದನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಆ ಬಾಲಕಿಯು ಶೇ.95ರಷ್ಟು ಸುಟ್ಟಗಾಯಗಳೊಂದಿಗೆ ಅನಂತರ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಳು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.