ನ್ಯಾಶನಲ್ ಹೆರಾಲ್ಡ್ ಐಟಿ ತನಿಖೆ: ಸೋನಿಯಾ, ರಾಹುಲ್ಗೆ ಹಿನ್ನಡೆ
Team Udayavani, May 12, 2017, 4:24 PM IST
ಹೊಸದಿಲ್ಲಿ : ನ್ಯಾಶನಲ್ ಹೆರಾಲ್ಡ್ ಕೇಸಿಗೆ ಸಂಬಂಧಪಟ್ಟು ಐಟಿ ತನಿಖೆ ನಡೆಸುವುದಕ್ಕೆ ದಿಲ್ಲಿ ಹೈಕೋರ್ಟ್ ಅನುಮತಿ ನೀಡಿದೆ. ಇದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಆಕೆಯ ಮಗ, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.
ನ್ಯಾಶನಲ್ ಹೆರಾಲ್ಡ್ ಕಂಪೆನಿಯಲ್ಲಿ ಸೋನಿಯಾ ಮತ್ತು ರಾಹುಲ್ ಗಾಂಧಿಗೆ ಆರ್ಥಿಕ ಹಿತಾಸಕ್ತಿ ಇರುವುದರಿಂದ ಆ ಬಗ್ಗೆ ಆದಾಯ ತೆರಿಗೆ ಇಲಾಖಾಧಿಕಾರಿಗಳು ತನಿಖೆ ನಡೆಸಬೇಕು ಎಂದು ದಿಲ್ಲಿ ಹೈಕೋರ್ಟ್ ಇಂದು ತನ್ನ ಆದೇಶದಲ್ಲಿ ಹೇಳಿತು.
ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಸಂಸ್ಥೆಯು ಕಾಂಗ್ರೆಸ್ಗೆ ಕೊಡಬೇಕಿದ್ದ 90.25 ಕೋಟಿ ರೂ. ವಸೂಲಾತಿಯ ಹಕ್ಕನ್ನು ಯಂಗ್ ಇಂಡಿಯನ್ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಗೆ ನೀಡುವುದಕ್ಕೆ ಅದಕೆ 50 ಲಕ್ಷ ರೂ. ಕೊಡುವ ಮೂಲಕ “ವಂಚನೆ ಹಾಗೂ ಹಣ ದುರುಪಯೋಗ’ ಮಾಡಿರುವುದಾಗಿ ಸೋನಿಯಾ ಹಾಗೂ ರಾಹುಲ್ ಗಾಂಧಿ ವಿರುದ್ಧ ಆಪಾದಿಸಲಾಗಿತ್ತು.
ನ್ಯಾಶನಲ್ ಹೆರಾಲ್ಡ್ ಕೇಸಿನಲ್ಲಿ ಸಾಕ್ಷಿದಾರರಿಗೆ ಸಮನ್ಸ್ ನೀಡಬೇಕೆಂಬ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರ ಕೋರಿಕೆಯು ಅಸ್ಪಷ್ಟ ಹಾಗೂ ಅಗತ್ಯ ವಿವರಗಳು ಇಲ್ಲವೆಂದು ಆರೋಪಿಸುವ ಮೂಲಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಆಕೆಯ ಪುತ್ರ ರಾಹುಲ್ ಗಾಂಧಿ ಅದನ್ನು ಈ ಮೊದಲು ವಿರೋಧಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipur ಘಟನೆಗಳಿಗೆ ಕ್ಷಮೆ ಕೇಳಿದ ಸಿಎಂ: ಪ್ರಧಾನಿ ಏಕೆ ಭೇಟಿ ನೀಡಿಲ್ಲ ಎಂದ ಕಾಂಗ್ರೆಸ್
Delhi: ಪತ್ನಿಯಿಂದ ವಿಚ್ಛೇದನ ಪಡೆಯುವ ಹಂತದಲ್ಲಿದ್ದ ವ್ಯಕ್ತಿ ನೇಣಿಗೆ ಶರಣು
Kutch; 3.2 ತೀವ್ರತೆಯ ಭೂ ಕಂಪನ
Lucknow; ಯುವಕನಿಂದ ತಾಯಿ ಮತ್ತು ನಾಲ್ವರು ಸಹೋದರಿಯರ ಬರ್ಬರ ಹ*ತ್ಯೆ!
BJP ತಪ್ಪುಗಳನ್ನು ಆರ್ಎಸ್ಎಸ್ ಬೆಂಬಲಿಸುತ್ತದೆಯೇ? ಭಾಗವತ್ ರನ್ನು ಪ್ರಶ್ನಿಸಿದ ಕೇಜ್ರಿವಾಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.