ಇಂದಿನಿಂದ 20 ದಿನ ಸೇವಾ ಪರ್ವ : ಪ್ರಧಾನಿ ಮೋದಿ ಜನ್ಮದಿನ; ದೇಶಾದ್ಯಂತ ಕಾರ್ಯಕ್ರಮ
ಪ್ರತೀ ಬೂತ್‌ನಿಂದ 10 ಅಂಚೆ ಕಾರ್ಡ್ ಬರೆಯುವ ಗುರಿ
Team Udayavani, Sep 17, 2021, 10:10 AM IST
ಹೊಸದಿಲ್ಲಿ: ಪ್ರಧಾನಿ ಮೋದಿಯವರ ಜನ್ಮದಿನವಾದ ಸೆ. 17ರಂದು ದೇಶಾದ್ಯಂತ ಬಿಜೆಪಿ ಮತ್ತು ಹಲವು ಸಂಘ ಸಂಸ್ಥೆಗಳು ವಿವಿಧ ಕಾರ್ಯಕ್ರಮ ಹಮ್ಮಿಕೊಂಡಿವೆ.
ಬಿಜೆಪಿಯು ವಾರಾಣಸಿಯ ಭಾರತ್ ಮಾತಾ ದೇಗುಲದಲ್ಲಿ 71 ಸಹಸ್ರ ದೀಪಗಳನ್ನು ಬೆಳಗಿಸಲಿದೆ ಮತ್ತು ವಿವಿಧೆಡೆ ಒಟ್ಟು 14 ಕೋಟಿ ಪಡಿತರ ಚೀಲಗಳನ್ನು ವಿತರಿಸಲಿದೆ. ದೇಶಾದ್ಯಂತದ ಅಂಚೆ ಕಚೇರಿಗಳಿಂದ ಮೋದಿ ಚಿತ್ರವಿರುವ 5 ಕೋಟಿ ಪೋಸ್ಟ್ ಕಾರ್ಡ್‌ಗಳನ್ನು ಪ್ರಧಾನಿಗೆ ಕಳುಹಿಸಲು ಸಿದ್ಧತೆ ನಡೆದಿದೆ.
20 ದಿನಗಳ ಅಭಿಯಾನ:
ಗುಜರಾತ್ ಸಿಎಂ ಆಗಿ 13 ವರ್ಷ ಮತ್ತು ದೇಶದ ಪ್ರಧಾನಿಯಾಗಿ 7 ವರ್ಷಗಳು ಪೂರ್ಣಗೊಳಿಸುವುದರ ಜತೆಗೆ ಮೋದಿ ಅವರು ಒಟ್ಟು 20 ವರ್ಷಗಳಿಂದ ಸಾರ್ವಜನಿಕ ಸೇವೆ ಯಲ್ಲಿ ನಿರತರಾಗಿದ್ದಾರೆ. ಹೀಗಾಗಿ ಈ ಬಾರಿ 20 ದಿನಗಳ ಕಾಲ “ಸೇವೆ ಮತ್ತು ಸಮರ್ಪಣೆ ಅಭಿಯಾನ’ ನಡೆಸಲಾಗುವುದು ಎಂದು ಪಕ್ಷ ತಿಳಿಸಿದೆ.
ಒಂದೇ ದಿನ 30 ಲಕ್ಷ ಲಸಿಕೆ:
ಕರ್ನಾಟಕದಲ್ಲಿ ಶುಕ್ರವಾರ 30 ಲಕ್ಷ ಮಂದಿಗೆ ಕೊರೊನಾ ಮುನ್ನೆ ಚ್ಚರಿಕೆಯೊಂದಿಗೆ ಲಸಿಕೆ ವಿತರಿಸಲು ರಾಜ್ಯ ಸರಕಾರ ಸಿದ್ಧತೆ ನಡೆಸಿದೆ.
ನವಭಾರತ ಮೇಳ :
- ಸೆ. 17ರಿಂದ ಅ. 7ರ ವರೆಗೆ 20 ದಿನಗಳ ಕಾಲ “ಸೇವೆ ಮತ್ತು ಸಮರ್ಪಣೆ ಅಭಿಯಾನ’.
- ದೇಶಾದ್ಯಂತ “ನವ ಭಾರತ ಮೇಳ’ ಆಯೋಜನೆ. 7 ವರ್ಷಗಳಲ್ಲಿ ಮೋದಿ ಸರಕಾರ ಮಾಡಿದ ಸಾಧನೆಯನ್ನು ಜನರಿಗೆ ವಿವರಿಸುವ ಯತ್ನ.
- ಸ್ವಚ್ಛತಾ ಕಾರ್ಯಕ್ರಮ, ರಕ್ತದಾನ ಶಿಬಿರ ಮತ್ತು ರಸಪ್ರಶ್ನೆಗಳ ಆಯೋಜನೆ.
- ವಿವಿಧ ಕ್ಷೇಮಾಭಿವೃದ್ಧಿ ಯೋಜನೆಗಳ ಫಲಾನುಭವಿ ಗಳಾಗಲು ಇಚ್ಛಿಸುವವರ ನೋಂದಣಿಗೆ ಕೇಂದ್ರಗಳ ಸ್ಥಾಪನೆ.
- ಜನರು ನಮೋ ಆ್ಯಪ್ ಡೌನ್‌ಲೋಡ್ ಮಾಡಿ ಕೊಳ್ಳುವಂತೆ ಪ್ರೇರಣೆ ನೀಡಲು ವಿಶೇಷ ಕೇಂದ್ರ.
- ಅ. 2ರಂದು “ಸ್ವತ್ಛತಾ ಸೇ ಸಮ್ಮಾನ್’ ಅಭಿಯಾನ ಆಯೋಜನೆ. ಸ್ವತ್ಛತೆ ಮತ್ತು ಸಸಿ ನೆಡುವ ಕಾರ್ಯಕ್ರಮ.
ಕೃತಕ ಕಾಲು ಜೋಡಣೆ :
ಜೈಪುರ್ ಫೂಟ್ ಯುಎಸ್‌ಎ ಸಂಸ್ಥೆಯು ಗುಜರಾತ್‌ನಲ್ಲಿ ಸಂಚಾರಿ ವ್ಯಾನ್ ಮೂಲಕ ಅಂಗವಿಕಲರಿಗೆ ಉಚಿತವಾಗಿ ಕೃತಕ ಕಾಲು ಜೋಡಣೆ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದೆ. ವಡ್ನಾಗರ್‌ನಲ್ಲಿ ಮೋದಿ ಹಿರಿಯ ಸಹೋದರ ಸೋಮಭಾಯಿ ಮೋದಿ ಶುಕ್ರವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕರ್ನಾಟಕ: ಸೇವೆ-ಸಮರ್ಪಣೆ :
- ಸೆ. 17- ಅ. 7: ಸೇವೆ ಮತ್ತು ಸಮರ್ಪಣೆ ಅಭಿಯಾನ.
- ಆಸ್ಪತ್ರೆಗಳಲ್ಲಿ ಬಡ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ, ಉಚಿತ ಆರೋಗ್ಯ ತಪಾಸಣ ಶಿಬಿರಗಳು.
- ಅಂಗವಿಕಲರಿಗೆ ನೆರವು.
- ಅ. 2ರಂದು ಸ್ವದೇಶಿ ವಸ್ತು ಖರೀದಿ ಅಭಿಯಾನ.
- ಮೋದಿಯವರಿಗೆ ಶುಭ ಹಾರೈಸಿ, ಅವರ ಕೊಡುಗೆಗಳಿಗೆ ಧನ್ಯವಾದ ಸಲ್ಲಿಸಿ 5 ಕೋಟಿ ಪೋಸ್ಟ್‌ಕಾರ್ಡ್‌ಗಳನ್ನು ಜನರೇ ಬರೆಯುವಂತೆ ಪ್ರೇರೇಪಿಸುವುದು.
- ಪ್ರತೀ ಬೂತ್‌ನಿಂದ 10 ಅಂಚೆ ಕಾರ್ಡ್ ಬರೆಯುವ ಗುರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tour: ಮೂರು ದೇಶ ಪ್ರವಾಸ: ಪ್ರಧಾನಿ ಮೋದಿ 31 ದ್ವಿಪಕ್ಷೀಯ ಸಭೆಗಳು!
Assembly bypolls; 14 ರಾಜ್ಯಗಳ 48 ಸ್ಥಾನಗಳ ಗೆಲುವಿನ ವಿವರ ಇಲ್ಲಿದೆ: ಎನ್‌ಡಿಎ ಮೇಲುಗೈ
Maharashtra ; ಕೈ ಯಿಂದ ಲೋಕಸಭಾ ಸ್ಥಾನ ಕಸಿದ ಬಿಜೆಪಿ: ರಾಜ್ಯಸಭೆ ಬಹುಮತದತ್ತ ಚಿತ್ತ
Maharashtra; ಪತಿಗೆ ಸೋಲು: ಮತಯಂತ್ರಗಳ ಕುರಿತು ಆಪಾದಿಸಿದ ನಟಿ ಸ್ವರಾ ಭಾಸ್ಕರ್
West Bengal bypolls; ಟಿಎಂಸಿ ಕ್ಲೀನ್ ಸ್ವೀಪ್: ಪ್ರತಿಭಟನೆಗಳು ಬಿಜೆಪಿಗೆ ಸಹಕಾರಿಯಾಗಲಿಲ್ಲ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.