ದೆಹಲಿಯಲ್ಲಿ ನಕಲಿ ರೆಮಿ ಡೆಸಿವಿರ್ ಮಾರಾಟ ಮಾಡುತ್ತಿದ್ದ ಏಳು ಜನರ ಬಂಧನ..!
Team Udayavani, Apr 30, 2021, 9:26 PM IST
ನವ ದೆಹಲಿ : ಕೋವಿಡ್ ಸೋಂಕಿನ ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಪೊಲೀಸ್ ಅಪರಾಧ ವಿಭಾಗವು ನಕಲಿ ರೆಮಿ ಡೆಸಿವಿರ್ ಇಂಜೆಕ್ಶನ್ ನನ್ನು ಮಾರಾಟ ಮಾಡಿದ ಆರೋಪದ ಮೇಲೆ ಏಳು ಜನರನ್ನು ಬಂಧಿಸಲಾಗಿದೆ.
ಆರೋಪಿಗಳನ್ನು ಮೊಹಮ್ಮದ್ ಶೋಯಾಬ್ ಖಾನ್ (28), ಮೋಹನ್ ಕುಮಾರ್ ಝಾ (40), ಮನೀಶ್ ಗೋಯಲ್ (35), ಪುಷ್ಕರ್ ಚಂದರ್ಕಾಂತ್ ಪಖಲೆ (32), ಸಾಧನಾ ಶರ್ಮಾ (40), ವತನ್ ಕುಮಾರ್ ಸೈನಿ (32) ಮತ್ತು ಆದಿತ್ಯ ಗೌತಮ್ (33) ), ಎಂದು ಗುರುತಿಸಲಾಗಿದೆ.
ಖಚಿತ ಮಾಹಿತಿಯ ಬೆನ್ನು ಹತ್ತಿದ್ದ ಪೊಲೀಸರು ಏಪ್ರಿಲ್ 23 ರಂದು ಸಂಗಮ್ ವಿಹಾರದ ಎಂ ಬಿ ರಸ್ತೆ ಬಳಿ ನಕಲಿ ರೆಮಿ ಡೆಸಿವಿರ್ ಇಂಜೆಕ್ಶನ್ ನ ಬ್ಲ್ಯಾಕ್ ಮಾರ್ಕೇಟಿಂಗ್ ನಲ್ಲಿ ಮಾರಾಟದಲ್ಲಿ ತೊಡಗಿದ್ದ ಖಾನ್ ಮತ್ತು ಝಾ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರ ಬಳಿ ಹತ್ತು ನಕಲಿ ರೆಮಿ ಡೆಸಿವಿರ್ ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಓದಿ : ಚುನಾವಣಾ ಫಲಿತಾಂಶಕ್ಕೆ ‘ಕೈ’ ಹರ್ಷ; ಜನತೆ ಬದಲಾವಣೆ ಬಯಸಿರುವುದಕ್ಕೆ ಸಾಕ್ಷಿ ಎಂದ ನಾಯಕರು
ವಿಚಾರಣೆಯ ವೇಳೆ, ಕೋವಿಡ್ ಸೋಂಕು ಏರಿಕೆಯಾಗುತ್ತಿರು ಸಂದರ್ಭದಲ್ಲಿ ನಾವು ನಕಲಿ ರೆಮಿ ಡೆಸಿವಿರ್ ಇಂಜೆಕ್ಶನ್ ನನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದೆವು ಎಂದು ಬಾಯ್ಬಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಯಮುನಾ ವಿಹಾರ್ ಬಳಿ ಭಾನುವಾರ ದಾಳಿ ನಡೆಸಿದ ಪೊಲೀಸರು ಗೋಯಲ್ ಮತ್ತು ಪಖಲೆ ಅವರನ್ನು ಬಂಧಿಸಿದರು. ಅವರ ಬಳಿ ಹನ್ನೆರಡು ನಕಲಿ ಇಂಜೆಕ್ಶನ್ ನನ್ನು ವಶಪಡಿಸಿಕೊಳ್ಳಲಾಗಿದೆ.
“ಇನ್ನು, ಸೋಮವಾರ, ಸಾಧನಾ ಶರ್ಮಾ ಅವರನ್ನು ಸಹ ಬಂಧಿಸಲಾಯಿತು ಮತ್ತು 160 ಬಾಟಲಿಗಳ ನಕಲಿ ರೆಮಿ ಡೆಸಿವಿರ್ ಇಂಜೆಕ್ಶನ್ ವಶಪಡಿಸಿಕೊಂಡಿದೆ” ಎಂದು ಅಪರಾಧ ವಿಭಾಗದ ಉಪ ಪೊಲೀಸ್ ಆಯುಕ್ತ ಮೋನಿಕಾ ಭಾರದ್ವಾಜ್ ಮಾಹಿತಿ ನೀಡಿದ್ದಾರೆ.
ಹರಿದ್ವಾರದಲ್ಲಿ ಸೈನಿಯನ್ನು ಬಂಧಿಸಲಾಯಿತು. ಅವರ ನಿದರ್ಶನದಲ್ಲಿ, ಔಷಧಾಲಯದಲ್ಲಿ ಕೆಲಸ ಮಾಡುತ್ತಿದ್ದ ಗೌತಮ್ ನನ್ನು ರೂರ್ಕಿಯಲ್ಲಿ ಬಂಧಿಸಲಾಯಿತು. ಅವರು ರೆಮಿ ಡೆಸಿವಿರ್ ನ ಒಂದೇ ರೀತಿಯ ಪ್ಯಾಕಿಂಗ್ ಹೊಂದಿರುವ ಸುಮಾರು 2,000 ಆಂಟಿ-ಬಯೋಟಿಕ್ ಇಂಜೆಕ್ಷನ್ ಬಾಟಲುಗಳನ್ನು ಖರೀದಿಸಿದ್ದರು ಮತ್ತು ಲೇಬಲ್ ಗಳನ್ನು ಬದಲಾಯಿಸಿದರು, ರೆಮಇ ಡೆಸಿವಿರ್ ಎಂದು ಮಾರಾಟ ಮಾಡಿದರು ಎಂದು ಭಾರದ್ವಾಜ್ ಹೇಳಿದರು.
ಇನ್ನು, ಆರೋಪಿಗಳು ಲೇಬಲ್ ಗಳನ್ನು ಸಿದ್ಧಪಡಿಸಿದ ಕಂಪ್ಯೂಟರ್ ಮತ್ತು ಇನ್ನೂ 16 ನಕಲಿ ರೆಮಿ ಡೆಸಿವಿರ್ ಇಂಜೆಕ್ಷನ್ ಬಾಟಲುಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.
ನಕಲಿ ರೆಮಿ ಡೆಸಿವಿರ್ ನ ಒಟ್ಟು 198 ಬಾಟಲುಗಳು, ಒಂದು ಪ್ಯಾಕಿಂಗ್ ಯಂತ್ರ, 3,000 ಖಾಲಿ ಬಾಟಲುಗಳು ಮತ್ತು ಅಜಿಥ್ರೊಮೈಸಿನ್ ಇತ್ಯಾದಿ ಪ್ಯಾಕಿಂಗ್ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದ ಅವರು ಹೇಳಿರುವುದಾಗಿ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಓದಿ : ಸಕ್ಕರೆ ನಾಡಿಗೆ ಕೊರೊನಾಘಾತ: 1348 ಮಂದಿಗೆ ಸೋಂಕು, 5 ಮಂದಿ ಸಾವು, 814 ಮಂದಿ ಗುಣಮುಖ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Eye Surgeries: ವೈದ್ಯಕೀಯ ಪದವಿ ಪೂರ್ಣಗೊಳಿಸದೇ 44 ಕಣ್ಣಿನ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯ
Wayanad Results 2024:ವಯನಾಡ್ ನಲ್ಲಿ ಪ್ರಿಯಾಂಕಾಗೆ 3.68 ಲಕ್ಷಕ್ಕೂ ಅಧಿಕ ಮತಗಳ ಮುನ್ನಡೆ!
Video: ವಿದ್ಯಾರ್ಥಿಯಿಂದ ಕಾಲು ಒತ್ತಲು ಹೇಳಿ ಶಾಲೆಯಲ್ಲೇ ವಿಶ್ರಾಂತಿಗೆ ಜಾರಿದ ಶಿಕ್ಷಕ
ಶೋರೂಮ್ ನಿಂದ ಕದ್ದು ಬಾಂಗ್ಲಾದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 2 ಕೋಟಿ ಮೌಲ್ಯದ ಐಫೋನ್ ವಶ
Panaji: ಮಣಿರತ್ನಂರ ಕ್ಯಾಮೆರಾ ಕಣ್ಣು ಹಂಪಿ ಕಡೆಗೆ ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.