ಗಂಗಾ ಸ್ನಾನಕ್ಕೆ ಇಳಿದ ಒಂದೇ ಕುಟುಂಬದ ಏಳು ಮಂದಿಯ ದಾರುಣ ಸಾವು
Team Udayavani, Jun 11, 2019, 12:10 PM IST
ಅಮ್‌ರೋಹಾ : ಉತ್ತರ ಪ್ರದೇಶದ ಅಮ್‌ರೋಹಾ ಜಿಲ್ಲೆಯಲ್ಲಿನ ಬ್ರಿಜ್‌ಘಾಟ್ ನಲ್ಲಿ ಗಂಗಾನದಿಯಲ್ಲಿ ಸ್ನಾನ ಮಾಡಲು ಇಳಿದ ಇಬ್ಬರು ಮಕ್ಕಳ ಸಹಿತ ಒಂದೇ ಕುಟುಂಬದ ಏಳು ಮಂದಿ ಮುಳುಗಿ ಮೃತಪಟ್ಟ ದಾರುಣ ಘಟನೆ ವರದಿಯಾಗಿದೆ.
ನಿನ್ನೆ ಸೋಮವಾರ ಈ ದುರ್ಘಟನೆ ನಡೆದುದನ್ನು ಅನುಸರಿಸಿ ಐದು ಮೃತ ದೇಹಗಳನ್ನು ಮೇಲೆತ್ತಲಾಗಿದೆ; ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ಇಂದು ಮಂಗಳವಾರ ತಿಳಿಸಿದ್ದಾರೆ.
ಈ ಕುಟುಂಬ ಲುಹಾರಿ ಗ್ರಾಮದ್ದಾಗಿದ್ದು ಮೃತರ ಹೆಸರು ಇಂತಿದೆ : ಬಂಟಿ 21, ಸಂಜೀವ್ 18, ವಿಪಿನ್ 21, ಮನೋಜ್ 20, ಸಂಜೀವ 17. ನಾಪತ್ತೆಯಾಗಿರುವವರು : ಗೌತಮ್ 20, ಧರ್ಮೇಂದ್ರ 16.
ಈ ಕುಟುಂಬದ ಸದಸ್ಯರು ಕೇಶ ಮುಂಡನದ ಬಳಿಕ ಗಂಗಾ ಸ್ನಾನಕ್ಕಾಗಿ ನದಿಗೆ ಇಳಿದಿದ್ದರು. ಆಗ ಇಬ್ಬರು ಆಕಸ್ಮಿಕವಾಗಿ ಒಡನೆಯೇ ಮುಳುಗಿದರು; ಅವರನ್ನು ಬದುಕಿಸಲು ಉಳಿದವರು ನದಿಗೆ ಹಾರಿದರು ಎಂದು ಸರ್ಕಲ್ ಆಫೀಸರ್ ಮೋನಿಕಾ ಯಾದವ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರನ್ನು ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ