‘ರಾಷ್ಟ್ರೀಯ ಚಿಟ್ಟೆ’ ಆಯ್ಕೆ ಪ್ರಕ್ರಿಯೆಗೆ ಚಾಲನೆ: ಏಳು ತಳಿಯ ಚಿಟ್ಟೆಗಳ ನಡುವೆ ಪೈಪೋಟಿ
ಸೆ. 10ರಿಂದ ಆರಂಭವಾಗಿರುವ ಆನ್‌ಲೈನ್ ಮತದಾನ
Team Udayavani, Sep 11, 2020, 6:00 AM IST
ಹೊಸದಿಲ್ಲಿ: ರಾಷ್ಟ್ರೀಯ ಪ್ರಾಣಿಯಾಗಿ ಹುಲಿ, ರಾಷ್ಟ್ರೀಯ ಪಕ್ಷಿಯಾಗಿ ನವಿಲು, ರಾಷ್ಟ್ರೀಯ ಪುಷ್ಪವಾಗಿ ಕಮಲವನ್ನು ಪರಿಗಣಿಸಿರುವಂತೆ, ಚಿಟ್ಟೆಗಳಲ್ಲಿ ಅತ್ಯುತ್ತಮ ಪ್ರಭೇದವೊಂದನ್ನು ಆರಿಸಿ, ಅದಕ್ಕೆ ರಾಷ್ಟ್ರೀಯ ಸ್ಥಾನಮಾನ ನೀಡುವ ವಿಶೇಷ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಚಿಟ್ಟೆಗಳ ಬಗ್ಗೆ ಇಂಥ ಪ್ರಯತ್ನ ನಡೆಯುತ್ತಿರುವುದು ಇದೇ ಮೊದಲು.
ಇದಕ್ಕಾಗಿ ಚಿಟ್ಟೆಗಳ ಹವ್ಯಾಸಿ ಅಧ್ಯಯನಕಾರರು, ಸಂಶೋಧಕರು, ಬರಹಗಾರರು ಮತ್ತು ತಜ್ಞರಿರುವ 50 ಸದಸ್ಯರ ಸಮಿತಿಯೊಂದನ್ನು ಕೇಂದ್ರ ಪರಿಸರ ಇಲಾಖೆ ರಚಿಸಿದೆ. ಚಿಟ್ಟೆಗಳ ಮಾಸವೆಂದೇ ಪರಿಗಣಿಸಲ್ಪಟ್ಟಿರುವ ಸೆಪ್ಟಂಬರ್‌ನಲ್ಲಿ ಈ ಕೆಲಸಕ್ಕೆ ಚಾಲನೆ ನೀಡಲಾಗಿದೆ.
ಸಮಿತಿಯಲ್ಲಿ ಖ್ಯಾತ ಚಿಟ್ಟೆಗಳ ತಜ್ಞ ಡಾ| ಕೃಷ್ಣಮೇಘ ಕುಂಟೆ, ಐಸಾಕ್ ಕೆಹಿಂಕರ್ ಅವರು ಇದ್ದು, ರಾಷ್ಟ್ರೀಯ ಚಿಟ್ಟೆಯ ಆಯ್ಕೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಈ ಸಮಿತಿಯು ಶಿಫಾರಸು ಮಾಡುವ ಚಿಟ್ಟೆಯ ಪ್ರಭೇದಕ್ಕೆ “ರಾಷ್ಟ್ರೀಯ ಚಿಟ್ಟೆ’ ಎಂಬ ಹೆಗ್ಗಳಿಕೆ ಸಿಗಲಿದೆ.
ಯಾವ ಚಿಟ್ಟೆಗೆ ಒಲಿಯುವುದು ಅದೃಷ್ಟ?
ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಳು ಚಿಟ್ಟೆಗಳಲ್ಲಿ ಯಾವುದು ರಾಷ್ಟ್ರೀಯ ಚಿಟ್ಟೆಯ ಸ್ಥಾನಮಾನ ಪಡೆಯಬೇಕು ಎಂಬ ಪ್ರಶ್ನೆಯನ್ನು ಆನ್‌ಲೈನ್ ಮೂಲಕ ಸಾರ್ವಜನಿಕರ ಮುಂದಿಡಲಾಗಿದೆ. ಗುರುವಾರ (ಸೆ. 10) ದಿಂದಲೇ ಸಾಮಾಜಿಕ ಜಾಲತಾಣ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಸಾರ್ವಜನಿಕರ ಬಹುಮತದ ಆಯ್ಕೆಗೆ ಅನುಗುಣವಾಗಿ ಆಯ್ಕೆಯಾಗುವ ಚಿಟ್ಟೆಯ ಹೆಸರನ್ನು ಕೇಂದ್ರ ಪರಿಸರ ಖಾತೆಯ ಗಮನಕ್ಕೆ ತರಲಾಗುತ್ತದೆ. ಅನಂತರ ರಾಷ್ಟ್ರೀಯ ಚಿಟ್ಟೆಯ ಹೆಸರನ್ನು ಪರಿಸರ ಖಾತೆಯೇ ಅಧಿಕೃತವಾಗಿ ಘೋಷಿಸುತ್ತದೆ. ಈ ವರ್ಷಾಂತ್ಯಕ್ಕೆ ಅಥವಾ 2021ರ ಆರಂಭದಲ್ಲಿ ಅಧಿಕೃತವಾಗಿ ಪ್ರಕಟಗೊಳ್ಳುವ ಸಾಧ್ಯತೆಯಿದೆ ಎಂದು ಮುಂಬಯಿಯ ಚಿಟ್ಟೆಗಳ ಅಧ್ಯಯನಕಾರ ದಿವಾಕರ್ ತೋಬ್ರೆ ತಿಳಿಸಿದ್ದಾರೆ.
ಅಂತಿಮ ಪಟ್ಟಿಯಲ್ಲಿ ಚಿಟ್ಟೆಗಳು
ಕಾಮನ್ ಜೆಝೆಬೆಲ್
ಫೈವ್-ಬಾರ್ ಸ್ವೋರ್ಡ್ ಟೇಲ್
ಕೃಷ್ಣಾ ಪೀಕಾಕ್
ಎಲ್ಲೋ ಗಾರ್ಗನ್
ಕಾಮನ್/ಇಂಡಿಯನ್ ನವಾಬ್
ನದರ್ನ್ ಜಂಗಲ್ ಕ್ವೀನ್
ಆರೆಂಜ್ ಓಕ್‌ಲೀಫ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.