ಜನನ ಲಿಂಗಾನುಪಾತ: ಕರ್ನಾಟಕದಲ್ಲಿ 11 ಅಂಕ ಇಳಿಕೆ
Team Udayavani, Feb 18, 2018, 8:15 AM IST
ಹೊಸದಿಲ್ಲಿ: ಜನನ ಲಿಂಗಾನುಪಾತ ಕರ್ನಾಟಕ ಸೇರಿದಂತೆ 21 ದೊಡ್ಡ ರಾಜ್ಯಗಳಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ನೀತಿ ಆಯೋಗ ಈ ವರದಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದಲ್ಲಿ 11 ಅಂಕ ಇಳಿಕೆ ಕಂಡಿದೆ. ಗುಜರಾತ್‌ನಲ್ಲಿ 53 ಪಾಯಿಂಟ್‌ಗಳಷ್ಟು ಇಳಿಕೆ ಕಂಡಿರುವುದು ಎಚ್ಚರಿಕೆಯ ಗಂಟೆಯಾಗಿದೆ. ಇದರಿಂದಾಗಿ ಲಿಂಗ ಆಧರಿತ ಗರ್ಭಪಾತ ಪ್ರಕರಣ ಹೆಚ್ಚುತ್ತಿದೆಯೇ ಎಂಬ ಅನುಮಾನವೂ ಉಂಟಾಗಿದೆ.
2012-14ರ ವರ್ಷವನ್ನು ಮೂಲ ವರ್ಷವನ್ನಾಗಿರಿಸಿ ಕೊಂಡು ಈ ವಿಶ್ಲೇಷಣೆ ಮಾಡಲಾಗಿದ್ದು, ಆಗ ಅನುಪಾತ 1000:907ರಷ್ಟಿತ್ತು. ಪ್ರಸಕ್ತ ವರ್ಷ ಇದು 1000:854 ಕ್ಕೆ ಇಳಿಕೆ ಕಂಡಿದೆ. ಗುಜರಾತ್ ನಂತರದಲ್ಲಿ ಹರಿಯಾಣದಲ್ಲಿ ಹೆಚ್ಚು ಇಳಿಕೆಯಾಗಿದ್ದು, 35 ಅಂಶ ಕುಸಿದಿದೆ. ಇದೇ ರೀತಿ ರಾಜಸ್ಥಾನ (32), ಉತ್ತರಾಖಂಡ (27), ಮಹಾರಾಷ್ಟ್ರ (18), ಹಿಮಾಚಲ ಪ್ರದೇಶ (14), ಛತ್ತೀಸ್‌ಗಢ (12)ದಲ್ಲೂ ಇಳಿಕೆ ಕಂಡುಬಂದಿದೆ.
ಈ ಹಿನ್ನೆಲೆಯಲ್ಲಿ ಗರ್ಭಧಾರಣೆ ಪೂರ್ವ ಮತ್ತು ಶೈಶವ ಪೂರ್ವ ತಪಾಸಣೆ ತಂತ್ರಗಳ ಕಾಯ್ದೆ 1994ರ ಪರಿಣಾಮಕಾರಿ ಅನುಷ್ಠಾನ ಕೈಗೊಳ್ಳುವ ಅಗತ್ಯವಿದೆ ಎಂದು ನೀತಿ ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್
Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?
ಎ.ಎಂ. ಪ್ರಸಾದ್ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?
Bidar Robbery Case: ಹೈದರಾಬಾದ್‌ನಲ್ಲಿ ಇನ್ನಿಬ್ಬರ ಸಾಥ್!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.