ಪಾತಕಿಗಳ ಶಾರುಖ್ ಪ್ರೀತಿ
Team Udayavani, May 9, 2018, 9:40 AM IST
ಹೊಸದಿಲ್ಲಿ: ದೇಶದ ರಾಜಧಾನಿಯ ಭೂಗತ ಲೋಕದ ಅನೇಕ ಆರೋಪಿಗಳು ತಮ್ಮ ಹೆಸರಿನ ಬದಲಿಗೆ ಶಾರುಖ್ ಖಾನ್ ಹೆಸರಿಟ್ಟುಕೊಂಡು ವ್ಯವಹಾರ ನಡೆಸುತ್ತಿರುವಂಥ ಕುತೂಹಲಕರ ಮಾಹಿತಿಯೊಂದು ಹೊರಬಿದ್ದಿದೆ. ಭೂಗತ ಲೋಕದ ಪಾತಕಿಗಳು, ಸರಗಳ್ಳರು, ಉಗ್ರರು, ಕಳ್ಳಸಾಗಣೆದಾರರು, ಚೋರರು… ಹೀಗೆ ಭೂಗತ ಲೋಕದ ನಾನಾ ಕಸುಬಿನ ಹಲವರು ತಮ್ಮ ವ್ಯಾವಹಾರಿಕ ನಾಮವಾಗಿ ಶಾರುಖ್ ಖಾನ್ ಎಂದೇ ಇಟ್ಟುಕೊಂಡಿದ್ದಾರೆ ಎಂದು ಪೊಲೀಸರು ಹೇಳುತ್ತಾರೆ. ಬಂಧನದಲ್ಲಿರುವ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಇಕ್ಬಾಲ್, ರಿಯಾಜ್, ಯಾಸಿನ್ ಭಟ್ಕಳ್ ಅವರು ತಮ್ಮ ನೈಜ ಹೆಸರುಗಳ ಬದಲಿಗೆ ಶಾರುಖ್ ಎಂದೇ ಕರೆಯಿಸಿಕೊಳ್ಳುತ್ತಿದ್ದರು.
ಕಳೆದ ವರ್ಷ, ಶ್ರೀನಗರ ಮೂಲದ ಶಾರುಖ್ ಖಾನ್ ಎಂಬಾತನನ್ನು ಡ್ರಗ್ಸ್ ಡೀಲಿಂಗ್ ಪ್ರಕರಣದಲ್ಲಿ ಬಂಧಿಸಿದಾಗ, ಆತ ತನ್ನ ನೈಜ ಹೆಸರು ಶಬೀರ್ ಅಹ್ಮದ್ ಎಂದಿದ್ದ. 2016ರಲ್ಲಿ ‘ಬರಾತಿ ಗ್ಯಾಂಗ್’ ಎಂಬ ಕಳ್ಳರ ತಂಡವೊಂದನ್ನು ಹಿಡಿದಾಗ, ಆ ಗ್ಯಾಂಗ್‌ನ ಪ್ರಮುಖ ಸದಸ್ಯನೊಬ್ಬ ಶಾರುಖ್ ಎಂದು ಹೆಸರಿಟ್ಟುಕೊಂಡಿದ್ದು ಪತ್ತೆಯಾಗಿತ್ತು. 2013ರ ಮೇ ತಿಂಗಳಲ್ಲಿ ಬಂಧಿತನಾಗಿದ್ದ ಬಂಟಿ ಎಂಬ ಕಳ್ಳ ಕೂಡ, ಶಾರುಖ್ ಖಾನ್ ಎಂದು ಹೆಸರಿಟ್ಟುಕೊಂಡಿದ್ದ. ಇಂಥ ಹಲವಾರು ಕೇಸುಗಳಿವೆ ಎನ್ನಲಾಗುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಪೊಲೀಸರು, ಮುಂಚೆ ಅನೇಕ ಭೂಗತ ಪಾತಕಿಗಳು ಪೆಹಲ್ವಾನ್ ಎಂಬ ಹೆಸರು ಇಟ್ಟುಕೊಳ್ಳುತ್ತಿದ್ದರು. ಈಗ, ಶಾರುಖ್ ಹೆಸರು ಟ್ರೆಂಡ್ ಆಗಿದೆ. ಕೆಲವರು ನಟ ಸಂಜಯ್ ದತ್ ಹೆಸರನ್ನೂ ಇಟ್ಟುಕೊಂಡಿದ್ದಾರೆ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shocking: ಪತ್ನಿಯನ್ನು ಕೊಂದು ದೇಹವನ್ನು ತುಂಡರಿಸಿ ಕುಕ್ಕರ್ ನಲ್ಲಿ ಬೇಯಿಸಿದ ನಿವೃತ್ತ ಯೋಧ
Mumbai: ಸೈಫ್ ಮೇಲೆ ಹಲ್ಲೆಗೆ ಬಳಸಿದ್ದ ಚಾಕುವಿನ ಮೂರನೇ ಭಾಗ ಬಾಂದ್ರಾ ಕೆರೆ ಬಳಿ ಪತ್ತೆ
Holy Dip: ಮಹಾಕುಂಭದಲ್ಲಿ ಸಿಎಂ ಯೋಗಿ ಸಂಪುಟ ಸದಸ್ಯರ ಪವಿತ್ರ ಸ್ನಾನ
Crew Module: ಗಗನಯಾನಕ್ಕೆ ಮಾನವರ ಕರೆದೊಯ್ಯುವ ನೌಕೆ ಶ್ರೀಹರಿಕೋಟಾಕ್ಕೆ ರವಾನೆ
Mosque Survey: ಮಥುರಾ ಮಸೀದಿ ಸಮೀಕ್ಷೆ… ಸುಪ್ರೀಂ ತಡೆಯಾಜ್ಞೆ ಮುಂದುವರಿಕೆ