ಪರ್ವತ ಅಲುಗಾಡಿಸಬಹುದು; ಚೀನ ಸೇನೆಯನ್ನಲ್ಲ: ಭಾರತಕ್ಕೆ ಬೀಜಿಂಗ್‌

Team Udayavani, Jul 24, 2017, 12:11 PM IST

India-China Flag-700.jpg

ಬೀಜಿಂಗ್‌ : ‘ಪರ್ವತವನ್ನು ಅಲುಗಾಡಿಸುವುದು ಸುಲಭ; ಆದರೆ ಚೀನ ಸೇನೆಯನ್ನು ಅಲುಗಾಡಿಸುವುದು ಬಹಳ ಕಷ್ಟ’ ಎಂಬ ಖಡಕ್‌ ಸಂದೇಶವನ್ನು ಚೀನ, ಭಾರತಕ್ಕೆ ರವಾನಿಸಿದೆ. 

ಕಳೆದ ಎರಡು ತಿಂಗಳಲ್ಲಿ ಸಿಕ್ಕಿಂ ಗಡಿಯಲ್ಲಿನ ತ್ರಿರಾಷ್ಟ್ರ  ಚೌಕದಲ್ಲಿ ಭಾರತ ಮತ್ತು ಚೀನ ಸೇನೆಯ ಮುಖಾಮುಖೀ ಇನ್ನೂ ಪಟ್ಟಾಗಿ ಮುಂದುವರಿದಿದೆ. ಇದೀಗ ತಾಜಾ ಎಚ್ಚರಿಕೆ ಎಂಬಂತೆ ಚೀನ, “ಡೋಕ್‌ಲಾಂ ಗಡಿಯಿಂದ ಭಾರತ ತನ್ನ ಸೇನೆಯನ್ನು  ಈ ಕೂಡಲೇ ಹಿಂದೆಗೆಯಬೇಕು, ಇಲ್ಲವೇ ಪರಿಣಾಮವನ್ನು ಎದುರಿಸಬೇಕು’ ಎಂದು ಕಟು ಮಾತುಗಳಲ್ಲಿ ಎಚ್ಚರಿಕೆ ನೀಡಿದೆ. 

“ಪರ್ವತವನ್ನು ಅಲುಗಾಡಿಸುವುದು ಸುಲಭ; ಆದರೆ ಚೀನದ ಪೀಪಲ್ಸ್‌ ಲಿಬರೇಶನ್‌ ಆರ್ಮಿಯನ್ನು ಅಲುಗಾಡಿಸುವುದು ಅತ್ಯಂತ ಕಠಿನ’ ಎಂದು ಚೀನ ಸಚಿವಾಲಯದ ವಕ್ತಾರ ವು ಕಿಯಾನ್‌ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಚೀನದ ಭೂಭಾಗ ಮತ್ತು ಸಾರ್ವಭೌಮತೆಯನ್ನು ರಕ್ಷಿಸುವ ಪಿಎಲ್‌ಎ ಸಾಮರ್ಥ್ಯವನ್ನು ಕಾಲಕಾಲಕ್ಕೆ ಬಲಪಡಿಸುತ್ತಲೇ ಬರಲಾಗಿದೆ ಎಂದವರು ನೆನಪಿಸಿಕೊಟ್ಟಿದ್ದಾರೆ. 

“ಭಾರತ ಡೋಕ್‌ಲಾಂ ನಿಂದ ತನ್ನ ಸೇನೆಯನ್ನು ಹಿಂಪಡೆಯಬೇಕು; ಇಲ್ಲದಿದ್ದರೆ ಯುದ್ಧಕ್ಕೆ ತಯಾರಾಗಬೇಕು ಮತ್ತು ಆ ಯುದ್ಧದಲ್ಲಿ  ಭಾರತ ತನ್ನದೇ ಭೂಭಾಗವನ್ನು ಕಳೆದುಕೊಳ್ಳಬೇಕಾಗುವುದು’ ಎಂದು ಚೀನದ ಸರಕಾರಿ ಒಡೆತನದ ದೈನಿಕ ಕಳೆದ ಜೂನ್‌ 21ರಂದು ಭಾರತಕ್ಕೆ ಎಚ್ಚರಿಕೆ ನೀಡಿದ ಬಳಿಕ ಇದೀಗ ಚೀನದ ಸಚಿವಾಲಯದ ವಕ್ತಾರನಿಂದ ಈ ಹೇಳಿಕೆ ಬಂದಿರುವುದು ಗಮನಾರ್ಹವಾಗಿದೆ. 

ಭಾರತ – ಭೂತಾನ್‌ – ಚೀನ ಟ್ರೈ ನೇಶನ್‌ ಜಂಕ್ಷನ್‌ನ ಡೋಕ್‌ಲಾಂ ನಲ್ಲಿ  ಭಾರತ ಮತ್ತು ಭೂತಾನ್‌ನ ಭದ್ರತೆಗೆ ಅಪಾಯಕಾರಿ ಎಂಬ ರೀತಿಯಲ್ಲಿ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದನ್ನು ಭಾರತ ಸೇನೆ ನಿಲ್ಲಿಸಿರುವುದರಿಂದ ಡೋಕ್‌ಲಾಂ ನಲ್ಲಿ ಭಾರತ – ಚೀನ ಸೇನೆ ಕಳೆದ ಎರಡು ತಿಂಗಳಿಂದ ಮುಖಾಮುಖೀಯಾಗಿದ್ದು ಸಮರ ಉದ್ವಿಗ್ನತೆ ಸೃಷ್ಟಿಯಾಗಿದೆ.

ವಿವಾದಾತ್ಮಕ ಡೋಕ್‌ಲಾಂ ಪ್ರದೇಶವು ತನಗೆ ಸೇರಿರುವ ಡೋಂಗ್‌ಲಾಂಗ್‌ ಪ್ರದೇಶದ ಭಾಗವಾಗಿದೆ ಎಂದು ಚೀನ ಹೇಳಿಕೊಂಡಿದೆ. 

ಟಾಪ್ ನ್ಯೂಸ್

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

19

New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

1-ladakk

China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ

arrested

16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.