Shambhu border; ದಿಲ್ಲಿ ಚಲೋಗೆ ತಡೆ: ರೈಲು ರೋಕೋಗೆ ರೈತರ ನಿರ್ಧಾರ
Team Udayavani, Dec 15, 2024, 6:30 AM IST
ಹೊಸದಿಲ್ಲಿ: ಎಂಎಸ್‌ಪಿಗೆ ಕಾನೂನು ಖಾತರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹರಿಯಾಣದ ಶಂಭು ಗಡಿಯಿಂದ 3ನೇ ಬಾರಿಗೆ ದಿಲ್ಲಿಗೆ ತೆರಳುತ್ತಿದ್ದ ರೈತರ ಕಾಲ್ನಡಿಗೆ ಜಾಥಾವನ್ನು ಶನಿವಾರವೂ ಪೊಲೀಸರು ತಡೆದಿದ್ದಾರೆ. ರೈತರನ್ನು ಹಿಮ್ಮೆಟ್ಟಿಸಲು ಅಶ್ರುವಾಯು, ಜಲಫಿರಂಗಿ ಬಳಸಿದ ಪರಿಣಾಮ 17 -18 ರೈತರು ಗಾಯಗೊಂಡಿದ್ದಾರೆ. ಹೀಗಾಗಿ ಜಾಥಾ ರದ್ದುಗೊಳಿಸಿದ ರೈತರು, ಪಂಜಾಬ್‌ನಲ್ಲಿ ಸೋಮವಾರ ಟ್ರ್ಯಾಕ್ಟರ್ ಜಾಥಾ, ಬುಧವಾರ ರೈಲ್ ರೋಕೋ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಘೋಷಿಸಿದ್ದಾರೆ.
ಈ ಪ್ರತಿಭಟನೆಯಲ್ಲಿ ಎಲ್ಲ ಪಂಜಾಬಿಗಳೂ ಭಾಗವಹಿಸಬೇಕು ಎಂದು ರೈತ ನಾಯಕ ಸರ್ವನ್ ಸಿಂಗ್ ಪಂಧರ್ ಕರೆ ನೀಡಿದ್ದಾರೆ. ಶನಿವಾರ ಶಂಭು ಗಡಿಯಿಂದ ಸ್ವಲ್ಪವೇ ದೂರ ತೆರಳುತ್ತಿದ್ದಂತೆ ರೈತರ ಮೇಲೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದರು, ರಸಾಯನಿಕ ಮಿಶ್ರಿತ ಜಲಫಿರಂಗಿ, ರಬ್ಬರ್ ಬುಲೆಟ್‌ಗಳನ್ನೂ ಬಳಸಿದರು ಎಂದು ಪಂಧರ್ ಆರೋಪಿಸಿದ್ದಾರೆ.
ಇತ್ತ ಕನೌರಿ ಗಡಿಯಲ್ಲಿ ರೈತ ನಾಯಕ ದಲ್ಲೇವಾಲ್ ಅವರು ಆಮರಣಾಂತ ಉಪವಾಸ ಕೈಗೊಂಡು ಶನಿವಾರಕ್ಕೆ 19 ದಿನಗಳಾಗಿದ್ದು, ಅವರ ಆರೋಗ್ಯ ಸ್ಥಿತಿ ಬಗ್ಗೆ ಆತಂಕ ಹೆಚ್ಚಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ, ಉದ್ಯೋಗಾಸಕ್ತರಿಗೆ ಶುಭ ಸಮಾಚಾರ
Manipal: ಬೈಕ್ ಸವಾರನ ಜೀವಕ್ಕೆ ಎರವಾದ ಮರಳು ಅಕ್ರಮ ಸಾಗಾಟದ ಟಿಪ್ಪರ್
Kumbale: ಸ್ಕೂಟರಿಗೆ ಕಾರು ಢಿಕ್ಕಿ: ಬಿಜೆಪಿ ಯುವ ಮುಖಂಡ ಸಾವು
BBK11:ಒಬ್ಬರಲ್ಲ ಇಬ್ಬರು ಟಾಪ್ ಸ್ಪರ್ಧಿಗಳು ಎಲಿಮಿನೇಟ್;ವೀಕ್ಷಕರಿಗೆ ಶಾಕ್ ಕೊಟ್ಟ ಬಿಗ್ ಬಾಸ್
Udupi: ರಾಷ್ಟ್ರೀಯ ಲೋಕ ಅದಾಲತ್: ಗಾಲಿ ಕುರ್ಚಿಯಲ್ಲಿ ಬಂದು ಸಹೋದರನೊಂದಿಗೆ ರಾಜಿಯಾದ ವೃದ್ಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.