ಪಿಎನ್‌ಬಿ ಸಾಲ ತೀರಿಸಲು ಪಿಂಚಣಿ ಬಳಸಿದ್ದ ಶಾಸ್ತ್ರಿ ಪತ್ನಿ!
Team Udayavani, Feb 22, 2018, 12:38 PM IST
ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ಬೆನ್ನಲ್ಲೇ, ಅತ್ಯಂತ ಪ್ರಾಮಾಣಿಕ, ಸರಳ ಪ್ರಧಾನಿ ಎಂದೇ ಹೆಸರಾಗಿದ್ದ ಲಾಲ್ ಬಹಾದ್ದೂರ್ ಶಾಸ್ತ್ರಿ ಮಾಡಿದ್ದ 5 ಸಾವಿರ ರೂ. ಸಾಲ ತೀರಿಸಲು ಅವರ ಪತ್ನಿ ಹೆಣಗಾ ಡಿದ ಕಥೆಯನ್ನು ಶಾಸ್ತ್ರಿ ಪುತ್ರ ಅನಿಲ್ ಶಾಸ್ತ್ರಿ ಹಂಚಿಕೊಂಡಿದ್ದಾರೆ.
1964ರಲ್ಲಿ ಪ್ರಧಾನಿಯಾಗಿದ್ದರೂ ಶಾಸ್ತ್ರಿ ಬಳಿ ಕಾರಿರಲಿಲ್ಲ. ಸರಕಾರದ ಕಾರನ್ನು ಸ್ವಂತಕ್ಕೆ ಬಳಸಿಕೊಳ್ಳಲು ಒಪ್ಪುತ್ತಿರಲಿಲ್ಲ. ಹೀಗಾಗಿ ಕುಟುಂಬದವರಿಗಾಗಿ ಒಂದು ಕಾರು ಬೇಕಿತ್ತು. ಆಗ ಫಿಯೆಟ್ ಕಾರಿಗೆ 12,000 ರೂ. ಇತ್ತು. ಶಾಸ್ತ್ರಿ ಬಳಿ ಇದ್ದಿದ್ದು 7 ಸಾವಿರ ರೂ. ಉಳಿದ ಮೊತ್ತವನ್ನು ಸಾಲ ಪಡೆಯಲು ಪಿಎನ್‌ಬಿಗೆ ಅರ್ಜಿ ಹಾಕಿದ್ದರು.
ಅರ್ಜಿ ಹಾಕಿದಂದೇ ಸಾಲ ಮಂಜೂರಾಗಿತ್ತು. ಆದರೆ 1966ರಲ್ಲಿ ಅವರು ನಿಧನರಾದ ನಂತರ ಸಾಲ ತೀರಿಸಲು ಕಷ್ಟಪಟ್ಟ ಅವರ ಪತ್ನಿ, ಪಿಂಚಣಿ ಹಣವನ್ನು ಸಾಲಕ್ಕಾಗಿ ಮೀಸಲಿಟ್ಟಿದ್ದರು. ಈ ಫಿಯೆಟ್ ಕಾರು ಈಗ ಶಾಸ್ತ್ರಿ ಸ್ಮಾರಕದಲ್ಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jharkhand: ಜನ-ಪ್ರಧಾನಿ ಪರ ಸರ್ಕಾರ ನಡುವಿನ ಸ್ಪರ್ಧೆ: ಕಾಂಗ್ರೆಸ್
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.