ಕ್ಯಾನ್ಸರ್ ಪೀಡಿತರಿಗಾಗಿ ತನ್ನ ತಲೆ ಕೂದಲನ್ನು ಬೋಳಿಸಿಕೊಂಡ ಮಹಿಳಾ ಪೊಲೀಸ್ ಅಧಿಕಾರಿ
Team Udayavani, Sep 29, 2019, 7:10 PM IST
ಕೇರಳ : ಇನ್ನೊಬ್ಬರಿಗೆ ಸಹಾಯವನ್ನು ಹೇಗೆ ಬೇಕಾದರೂ ಮಾಡಬಹುದು. ಸಹಾಯ ಮಾಡುವವರಿಗೆ ಅರ್ಹತೆ ಬೇಕಾಗಿಲ್ಲ.ಹಣ ಬೇಕಾಗಿಲ್ಲ ಒಂದೊಳ್ಳೆ ಮನಸ್ಸು ಇದ್ದಾರೆ ಸಾಕು. ಈ ಮಾತಿಗೆ ಉದಾಹರಣೆಯಾಗಿ ನಿಂತಿದ್ದಾರೆ ಕೇರಳದ ಮಹಿಳಾ ಪೊಲೀಸ್ ಅಧಿಕಾರಿ ಅಪರ್ಣಾ ಲವಕುಮಾರ್.
ಕೇರಳದ ತ್ರಿಶೂರ್ ಜಿಲ್ಲೆಯ ಇರಿಂಜಲಕುಡದಲ್ಲಿ ವಾಸಿಸುವ ಪೊಲೀಸ್ ಅಧಿಕಾರಿ ಅಪರ್ಣಾ. ತನ್ನ ತಲೆ ಕೂದಲನ್ನು ಬೋಳಿಸಿಕೊಂಡು ಅದನ್ನು ಕ್ಯಾನ್ಸ್ ರ್ ಪೀಡಿತರಿಗಾಗಿ ವಿಗ್ ತಯಾರಿಸಲು ದಾನವಾಗಿಸಿದ್ದಾರೆ.!
ಕಳೆದ ಕೆಲ ದಿನಗಳ ಹಿಂದೆ ಅಪರ್ಣಾ ಸ್ಥಳೀಯ ಶಾಲೆಯೊಂದರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಆಗ ಅಲ್ಲೊಬ್ಬ ಕೂದಲು ಬೋಳಿಸಿರುವ ಕ್ಯಾನ್ಸರ್ ಪೀಡಿತ ಹುಡುಗನನ್ನು ನೋಡುತ್ತಾರೆ.ಇದು ಅಪರ್ಣಾ ಅವರನ್ನು ಕಾಡುತ್ತದೆ.
ಅದೇ ದಿನ ಅಪರ್ಣಾ ಸ್ಥಳೀಯ ಪಾರ್ಲರ್ ವೊಂದಕ್ಕೆ ಹೋಗಿ ತಮ್ಮ ತಲೆ ಕೂದಲನ್ನು ಬೋಳಿಸಿದ್ದಾರೆ. ತನ್ನಿಂದ ಆರ್ಥಿಕ ಸಹಾಯ ಆಗದೇ ಇದ್ರು ಪರವಾಗಿಲ್ಲ ಈ ರೀತಿಯ ಸಹಾಯ ಆದರೂ ಆಗಲಿ,ಇದು ದೊಡ್ಡ ಸಹಾಯ ಅಲ್ಲ ನನಗಿಂತ ಹೆಚ್ಚಿನ ಹಾಗೂ ಮಹತ್ತರವಾದ ಸಹಾಯವನ್ನು ಮಾಡುವವರು ಇದ್ದಾರೆ ಎಂದು ಹೇಳುತ್ತಾರೆ ಅಪರ್ಣಾ.
ನಾನು ನನ್ನ ಕೂದಲುನ್ನು ಯಾರ ಬಳಿಯೂ ಮುಂಚಿತವಾಗಿ ಹೇಳದೆ ಕ್ಷೌರ ಮಾಡಿಸಿದ್ದೇನೆ. ಒಂದು ವೇಳೆ ಮೊದಲೇ ಹೇಳಿ ಮಾಡೋಕೆ ಹೊರಟಿದ್ರೆ ಇದಕ್ಕೆ ಅಡ್ಡಿ ಆಗುತ್ತಿತ್ತು. ನನ್ನ ಕೂದಲು ಒಂದು ಅಥವಾ ಎರಡು ವರ್ಷದ ನಂತರ ಮತ್ತೆ ಬರಬಹುದು ಆದರೆ ಇನ್ನೊಬ್ಬರ ಬಾಳಿನಲ್ಲಿ ಆಸರೆ ಆಗುವುದರಲ್ಲಿ ಖುಷಿ ಇದೆ ಅನ್ನುತ್ತಾರೆ ಅಪರ್ಣಾ.
ಅಪರ್ಣಾ ಈ ಹಿಂದೆ ಆಸ್ಪತ್ರೆಯಲ್ಲಿ ಬಡ ಕುಟುಂಬವೊಂದು ಬಿಲ್ ಪಾವತಿಸಲು ಕಷ್ಟ ಪಡುತ್ತಿದ್ದ ಸಮಯದಲ್ಲಿ ತನ್ನ ಮೂರು ಚಿನ್ನದ ಬಳೆಗಳನ್ನು ಕೊಟ್ಟು ಆ ಕುಟುಂಬಕ್ಕೆ ಸಹಾಯವಾಗಿ ನಿಂತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Video: ಕಾರಿನ ಟಯರ್ ಒಳಗಿತ್ತು ಒಂದಲ್ಲ, ಎರಡಲ್ಲ ಬರೋಬ್ಬರಿ 50 ಲಕ್ಷ… ದಂಗಾದ ಅಧಿಕಾರಿಗಳು
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Media powerhouse: ರಿಲಯನ್ಸ್- ಡಿಸ್ನಿ ಕಂಪನಿ ವಿಲೀನ ಈಗ ಅಧಿಕೃತ
PM ನರೇಂದ್ರ ಮೋದಿಗೆ ಡೊಮಿನಿಕಾದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಗೌರವ
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.