ಮುಂಬಯಿ: ಶಿವಸೇನಾ ನಾಯಕ ಅಶೋಕ್ ಸಾವಂತ್ ಇರಿದು ಕೊಲೆ
Team Udayavani, Jan 8, 2018, 11:08 AM IST
ಮುಂಬಯಿ : ಮುಂಬಯಿಯ ಕಾಂದಿವಿಲಿಯಲ್ಲಿ ನಿನ್ನೆ ಭಾನುವಾರ ಶಿವಸೇನೆಯ ನಾಯಕ ಅಶೋಕ್ ಸಾವಂತ್ ಅವರನ್ನು ಹಂತಕರು ಇರಿದು ಕೊಂದಿರುವ ಘಟನೆ ನಡೆದಿದೆ.
ಸಾವಂತ್ ಅವರು ನಿನ್ನೆ ರಾತ್ರಿ 10.45ರ ಹೊತ್ತಿಗೆ ತನ್ನ ಸ್ನೇಹಿತರೋರ್ವರನ್ನು ಭೇಟಿಯಾಗಿ ಮನೆಗೆ ಮರಳುತ್ತಿದ್ದಾಗ ಅವರನ್ನು ಹಂತಕರು ಇರಿದು ಕೊಂದರು. ಮುಂಬಯಿಯ ಮಾಜಿ ಕಾರ್ಪೊರೇಟರ್ ಕೂಡ ಆಗಿರುವ ಸಾವಂತ್ ಅವರು ತಮ್ಮ ಮೇಲೆ ಮಾರಣಾಂತಿಕ ದಾಳಿ ನಡೆದಾಗ ತಮ್ಮ ಮನೆಯಿಂದ ಕೇವಲ 200 ಮೀಟರ್ ದೂರದಲ್ಲಿದ್ದರು.
ಸಮತಾ ನಗರದಲ್ಲಿನ ಸುರ್ ಕಟ್ಟಡದಲ್ಲಿನ ಸಾವಂತ್ ಅವರ ಮನೆಯ ಮುಂದೆ ವಾಹನವೊಂದರಲ್ಲಿ ಕಾಯುತ್ತಿದ್ದ ಹಂತಕರು ಸಾವಂತ್ ಅವರನ್ನು ಕಂಡಾಕ್ಷಣ ಅವರ ಬಳಿ ಸಾರಿ ಅತ್ಯಂತ ಆಕ್ರಮಣಕಾರಿ ರೀತಿಯಲ್ಲಿ ತಮ್ಮಲ್ಲಿನ ಹರಿತವಾ ಆಯುಧವನ್ನು ಝಳಪಿಸಿ ಸಾವಂತ್ ಅವರನ್ನು ಬಲವಾಗಿ ಇರಿದು ಸ್ಥಳದಿಂದ ಪರಾರಿಯಾದರು.
ರಕ್ತದ ಮಡುವಿನಲ್ಲಿ ಬಿದ್ದಿದ್ದ 62ರ ಹರೆಯದ ಸಾಂವತ್ ಅವರನ್ನು ಸ್ಥಳೀಯರು ಒಡನೆಯೇ ಆಸ್ಪತ್ರೆಗೆ ಒಯ್ದರು. ಆದರೆ ಅಲ್ಲಿನ ವೈದ್ಯರು ಸಾವಂತ್ ಅದಾಗಲೇ ಮೃತಪಟ್ಟಿರುವುದಾಗಿ ಘೋಷಿಸಿದರು.
ಐಪಿಸಿ ಸೆ.302ರ ಪ್ರಕಾರ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು ಕೊಲೆ ನಡೆದ ತಾಣದಲ್ಲಿನ ಸಿಸಿಟಿಟಿವಿಯಲ್ಲಿ ದಾಖಲಾದ ಚಿತ್ರಿಕೆಯನ್ನು ಪರಿಶೀಲಿಸುತ್ತಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ ಹತ ಸಾವಂತ್ ಅವರು ಈಚೆಗೆ ಕೇಬಲ್ ಉದ್ಯಮವನ್ನು ಪ್ರವೇಶಿಸಿದ್ದರು. ಅವರಿಗೆ ಕೆಲವು ದಿನಗಳಿಂದ ಸುಲಿಗೆ ಕರೆಗಳು ಬರುತ್ತಿದ್ದವು.
ಸಾವಂತ್ ಅವರು ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Henley Passport Index: ಸಿಂಗಾಪುರಕ್ಕೆ ಮೊದಲ ಸ್ಥಾನ: ಭಾರತದ ಪಾಸ್‌ಪೋರ್ಟ್ ಎಷ್ಟು ಸದೃಢ?
Dense Fog: ದೆಹಲಿ-ಲಖನೌ ಹೆದ್ದಾರಿಯಲ್ಲಿ ಸರಣಿ ಅಪಘಾತ, ವಿಮಾನ, ರೈಲು ಸಂಚಾರದಲ್ಲಿ ವ್ಯತ್ಯಯ
ಸೊಸೆಯಾಗಿ ಬರಬೇಕಾಗಿದ್ದವಳನ್ನೇ ಮದುವೆಯಾದ ಅಪ್ಪ… ಬೇಸರದಿಂದ ಸನ್ಯಾಸಿಯಾಗಲು ಹೊರಟ ಮಗ
Bhopal: ಬಿಜೆಪಿ ಮಾಜಿ ಶಾಸಕ ಸಿಂಗ್ ನಿವಾಸದ ಮೇಲೆ ಐಟಿ ದಾಳಿ; ನಗದು, 3 ಮೊಸಳೆ ಪತ್ತೆ!
ಪರೀಕ್ಷೆಯಿಂದ ತಪ್ಪಿಸಿಕೊಳ್ಳಲು 23ಶಾಲೆಗೆ ಬಾಂಬ್ ಬೆದರಿಕೆ ಹಾಕಿದ್ದ 12ನೇ ತರಗತಿ ವಿದ್ಯಾರ್ಥಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.