ಶಿವಸೇನೆ ಸಂಸದ ಗಾಯಕ್ವಾಡ್ ವಿಮಾನಯಾನ ನಿಷೇಧ ತೆರವು
Team Udayavani, Apr 7, 2017, 3:50 PM IST
ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿಗೆ ಚಪ್ಪಲಿಯೇಟು ನೀಡಿದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್‌ಗೆ ಹಾರಾಟ ನಿಷೇಧ ಹೇರಿದ್ದನ್ನು ಶುಕ್ರವಾರ ವಿಮಾನಯಾನ ಸಂಸ್ಥೆಗಳು ತೆರವುಗೊಳಿಸಿವೆ.
ಘಟನೆಗೆ ವಿಷಾದ ವ್ಯಕ್ತ ಪಡಿಸಿ ನಾಗರಿಕ ವಿಮಾನಯಾನ ಸಚಿವ ಅಶೋಕ್ ಗಜಪತಿ ರಾಜು ಅವರಿಗೆ ಪತ್ರ ಬರೆದಿದ್ದು, ಈ ಪತ್ರವನ್ನು ನೀಡಿದ ಬಳಿಕ ವಿಮಾನಯಾನ ಸಂಸ್ಥೆಗಳು ನಿಷೇಧ ತೆರವುಗೊಳಿಸಿವೆ ಎಂದು ಏರ್ ಇಂಡಿಯಾ ಹೇಳಿದೆ.
ಸುಮಾರು 2 ವಾರಗಳ ಕಾಲ ನಿಷೇಧಹೇರಿದ ಕಾರಣ ಗಾಯಕ್ವಾಡ್‌ಗೆ ವಿಮಾನ ಪ್ರಯಾಣ ಸಾಧ್ಯವಾಗಿರಲಿಲ್ಲ. ಅವರು ರೈಲಿನಲ್ಲೇ ದೆಹಲಿಗೆ ಪ್ರಯಾಣಸಿದ್ದರು.
ಈ ವಿಚಾರ ಗುರುವಾರ ಸಂಸತ್‌ನಲ್ಲಿ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿತ್ತಲ್ಲದೆ ಕೇಂದ್ರದ ಇಬ್ಬರು ಸಚಿವರ ನಡುವೆಯೇ ಮಾತಿನ ಚಕಮಕಿಗೆ ಕಾರಣವಾಗಿ, ಪರಿಸ್ಥಿತಿ ಕೈಮೀರುವ ಹಂತಕ್ಕೆ ತಲುಪಿ, ಕೊನೆಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ರ ಮಧ್ಯಪ್ರವೇಶದಿಂದಾಗಿ ತಿಳಿಯಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Maharashtra polls: ಗೋಪಾಲ್ ಶೆಟ್ಟಿ ನಾಮಪತ್ರ ಹಿಂಪಡೆಯುವಲ್ಲಿ ಯಶಸ್ವಿಯಾದ ಬಿಜೆಪಿ
Maharashtra polls; ಫಲಿತಾಂಶದ ಬಳಿಕವೇ ಸಿಎಂ ಯಾರೆಂದು ನಿರ್ಧಾರ: ಕಾಂಗ್ರೆಸ್
Andhra; ಮಿತ್ರ ಪಕ್ಷ ಟಿಡಿಪಿಯ ಗೃಹ ಸಚಿವೆಗೇ ವಾರ್ನಿಂಗ್ ನೀಡಿದ ಡಿಸಿಎಂ ಪವನ್ ಕಲ್ಯಾಣ್!
Agra: ಭಾರತೀಯ ವಾಯುಪಡೆ ಮಿಗ್ 29 ಯುದ್ಧ ವಿಮಾನ ಪತನ, ಪೈಲಟ್ ಪಾರು
Jammu Kashmir: ಕಲಂ-370- ವಿಧಾನಸಭೆ ಮೊದಲ ಕಲಾಪದಲ್ಲೇ ಪಿಡಿಪಿ-ಬಿಜೆಪಿ ಕೋಲಾಹಲ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.