Shocking: 70ರ ವೃದ್ಧೆಯ ಮೇಲೆ 2 ವರ್ಷದಿಂದ 45ರ ಮಗನಿಂದ ರೇಪ್
Team Udayavani, Sep 18, 2017, 11:01 AM IST
ಹೊಸದಿಲ್ಲಿ : ಅತ್ಯಂತ ಆಘಾತಕಾರಿ ಎನ್ನುವ ರೀತಿಯಲ್ಲಿ 70 ವರ್ಷ ಪ್ರಾಯದ ವೃದ್ಧೆಯೋರ್ವರು ತನ್ನ ಮೇಲೆ ತನ್ನ 45ರ ಹರೆಯದ ಅವಿವಾಹಿತ ಪುತ್ರನು ಕಳೆದ ಎರಡು ವರ್ಷಗಳಿಂದ ಅತ್ಯಾಚಾರ ನಡೆಸುತ್ತಿದ್ದಾನೆ ಎಂದು ಆರೋಪಿಸಿದ್ದಾರೆ.
ಪಂಜಾಬಿನ ಬಟಾಲಾ ವಾಸಿಯಾಗಿರುವ ಈ ವೃದ್ಧೆಯು ತನ್ನ ಮೇಲೆ ತನ್ನ ಪುತ್ರನೇ ಅತ್ಯಾಚಾರ ಎಸುಗುತ್ತಿದ್ದಾನೆ ಪೊಲೀಸರಿಗೆ ದೂರು ನೀಡಿದ್ದಾರೆ.
“ನನಗೆ ನಾಲ್ವರು ಪುತ್ರರು ಮತ್ತು ಮೂವರು ಪುತ್ರರು ಇದ್ದಾರೆ. ನಾನು ಅವಿವಾಹಿತ ಪುತ್ರನೊಂದಿಗೆ ವಾಸಿಸುತ್ತಿದ್ದೇನೆ; ಉಳಿದ ಪುತ್ರರು ಮತ್ತು ಎಲ್ಲ ಪುತ್ರಿಯರು ಮದುವೆಯಾಗಿ ಪ್ರತ್ಯೇಕವಾಗಿ ವಾಸಿಸಿಕೊಂಡಿದ್ದಾರೆ. ನನ್ನ ಮೇಲೆ ನನ್ನ ಮಗನೇ ಅತ್ಯಾಚಾರ ನಡೆಸುತ್ತಿರುವುದನ್ನು ಕಳೆದ ಎರಡು ವರ್ಷಗಳಿಂದ ನಾನು ಸಹಿಸಿಕೊಂಡಿದ್ದೆ. ವಿಷಯ ಬಹಿರಂಗ ಮಾಡಿದರೆ ನಮ್ಮ ಮನೆಯ ಮಾನ ಹರಾಜಾಗುವುದೆಂಬ ಭೀತಿಯಲ್ಲಿ ಈ ತನಕವೂ ಸುಮ್ಮನಿದ್ದೆ’ ಎಂದು ವೃದ್ಧೆಯು ತನ್ನ ದೂರಿನಲ್ಲಿ ಅಳಲನ್ನು ತೋಡಿಕೊಂಡಿದ್ದಾಳೆ.
“ನನ್ನ ಮಗನೇ ನನ್ನ ಮೇಲೆ ಅತ್ಯಾಚಾರ ಎಸಗುತ್ತಿರುವುದನ್ನು ನಾನು ಕೊನೆಗೂ ನನ್ನ ಪುತ್ರಿಯರಲ್ಲಿ ಓರ್ವಳ ಬಳಿ ಹೇಳಿದೆ. ಕೂಡಲೇ ಆಕೆಯ ಕುಟುಂಬದವರು ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದರು’ ಎಂದು ರೇಪ್ ಸಂತ್ರಸ್ತ ವೃದ್ಧೆ ಹೇಳಿದ್ದಾರೆ.
ವೃದ್ಧೆಯು ಕೊಟ್ಟಿರುವ ದೂರಿನ ಪ್ರಕಾರ ಪೊಲೀಸು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಈ ನಡುವೆ ತಲೆ ಮರೆಸಿಕೊಂಡಿರುವ ಆಕೆಯ ಅತ್ಯಾಚಾರಿ ಪುತ್ರನಿಗೆ ಪೊಲೀಸರು ವ್ಯಾಪಕ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.