ಶೂ ಪಾಲಿಷ್ ಮಾಡಿಸ್ತಾರೆ: ಮತ್ತೂಬ್ಬ ಯೋಧನ ಅಳಲು
Team Udayavani, Jan 14, 2017, 9:40 AM IST
ಹೊಸದಿಲ್ಲಿ: ಬಿಎಸ್ಎಫ್, ಸಿಆರ್ಪಿಎಫ್ ಯೋಧರ ಬಳಿಕ ಇದೀಗ ಭೂಸೇನೆಯ ಸಿಪಾಯಿಯೊಬ್ಬ ತನ್ನ ಗೋಳು ತೋಡಿ ಕೊಳ್ಳಲು ವೀಡಿಯೋ ಮೊರೆ ಹೋಗಿದ್ದಾನೆ. ಮೇಲಧಿಕಾರಿಗಳು ನಮ್ಮಿಂದ ಶೂ ಪಾಲಿಷ್ ಮಾಡಿಸಿಕೊಳ್ಳುತ್ತಾರೆ. ಅದನ್ನು ನಿಲ್ಲಿಸುವಂತೆ
ಸೂಚಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದ ಕಾರಣಕ್ಕೆ ಮೇಲಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಲ್ಯಾನ್ಸ್ ನಾಯಕ್ ಯಜ್ಞ ಪ್ರತಾಪ್ ಸಿಂಗ್ ಎಂಬಾತ ಗೋಳು ತೋಡಿಕೊಂಡಿದ್ದಾನೆ.
ಯೋಧರು ಎದುರಿಸುತ್ತಿರುವ ತೊಂದರೆ ಬಗ್ಗೆ ಪ್ರಧಾನಿ, ರಕ್ಷಣಾ ಸಚಿವರು, ರಾಷ್ಟ್ರಪತಿ, ಸುಪ್ರೀಂಕೋರ್ಟ್ಗೆ ಕಳೆದ ವರ್ಷ ಪತ್ರ ಬರೆದಿದ್ದೆ. ಈ ಬಗ್ಗೆ ತನಿಖೆ ನಡೆಸುವಂತೆ ಪ್ರಧಾನಿ ಕಾರ್ಯಾಲಯದಿಂದ ಸೂಚನೆಯೂ ಬಂದಿತ್ತು. ಆದರೆ ತನಿಖೆ ಮಾಡುವ ಬದ
ಲಿಗೆ ಮೇಲಧಿಕಾರಿಗಳು ನನಗೆ ಕಿರುಕುಳ ಆರಂಭಿಸಿದ್ದಾರೆ. ನಾನು ಆತ್ಮಹತ್ಯೆ ಮಾಡಿ ಕೊಳ್ಳುವ ಮಟ್ಟಕ್ಕೆ ಹಿಂಸೆ ನೀಡಿದ್ದಾರೆ. ಆದರೆ ನಾನು ಸಾವಿಗೆ ಶರಣಾಗುವುದಿಲ್ಲ. ಈಗಾಗಲೇ ನನ್ನ ವಿರುದ್ಧ ವಿಚಾರಣೆ ಯನ್ನೂ ಶುರು ಮಾಡಿದ್ದು, ನಾನು ಕೋರ್ಟ್ ಮಾರ್ಷಲ್ಗೆ ಒಳಗಾಗುವ ಸಂಭವವಿದೆ ಎಂದು ಡೆಹ್ರಾಡೂನ್ನಲ್ಲಿರುವ 42ನೇ ಇನ್ಫೆಂಟ್ರಿ ಬ್ರಿಗೇಡ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಯೋಧ ಅಳಲು ತೋಡಿಕೊಂಡಿದ್ದಾನೆ.
ಈ ನಡುವೆ, ಯೋಧರು ತಮಗೆ ಸಮಸ್ಯೆ ಇದ್ದರೆ ಆಂತರಿಕವಾಗಿ ಅಥವಾ ನೇರವಾಗಿ ನನಗೆ ಹೇಳಬಹುದು.ಆದರೆ ಸಾಮಾಜಿಕ ಜಾಲ ತಾಣಗಳ ಮೊರೆ ಹೋಗುವುದು ತರವಲ್ಲ ಎಂದು ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸಲಹೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ರೋಗಿಯ ಕಣ್ಣೇ ಮಾಯಾ… ಇಲಿ ತಿಂದಿದೆ ಎಂದ ವೈದ್ಯರು
Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
MUST WATCH
ಹೊಸ ಸೇರ್ಪಡೆ
World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್ 17
Bantwal: ನೇತ್ರಾವತಿ ಹೊಸ ಸೇತುವೆ ಸಂಚಾರಕ್ಕೆ ಮುಕ್ತ
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಬಿಗ್ಬಾಸ್ ಮನೆಗೆ
Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.