ಆಕ್ಸಿಜನ್ ಕೊರತೆ ಸಾವು ಪಂಜಾಬ್‌ನಲ್ಲಿ ಮಾತ್ರ!
ಲೋಕಸಭೆಯಲ್ಲಿ ಕೇಂದ್ರ ಸಚಿವ ಮಾಹಿತಿ
Team Udayavani, Dec 4, 2021, 6:50 AM IST
ಹೊಸದಿಲ್ಲಿ: ದೇಶದಲ್ಲಿ ಕೊರೊನಾ 2ನೇ ಅಲೆಯ ವೇಳೆ ಆಮ್ಲಜನಕದ ಕೊರತೆಯಿಂದ ಪಂಜಾಬ್‌ನಲ್ಲಿ ಮಾತ್ರ ನಾಲ್ವರು ಮೃತಪಟ್ಟಿದ್ದಾರೆ ಎಂದು ಲೋಕಸಭೆಗೆ ಕೇಂದ್ರ ಆರೋಗ್ಯ ಸಚಿವ ಮನಸುಖ ಮಾಂಡವಿಯ ಶುಕ್ರವಾರ ಮಾಹಿತಿ ನೀಡಿದ್ದಾರೆ.
ಆಕ್ಸಿಜನ್ ಅಭಾವದಿಂದಾದ ಸಾವಿನ ಬಗ್ಗೆ ಮಾಹಿತಿ ಕೇಳಲಾಗಿದ್ದು, ಒಟ್ಟು 19 ರಾಜ್ಯಗಳು ಪ್ರತಿಕ್ರಿಯೆ ನೀಡಿವೆ. ಈ ಪೈಕಿ ಪಂಜಾಬ್‌ನಲ್ಲಿ ಮಾತ್ರ ನಾಲ್ವರು ಸಾವಿಗೀಡಾಗಿದ ಮಾಹಿತಿ ಬಂದಿದೆ. ಉಳಿದ ರಾಜ್ಯಗಳಲ್ಲಿ ಇಂಥ ಸಾವು ಸಂಭವಿಸಿದ ವರದಿಯಿಲ್ಲ ಎಂದೂ ಅವರು ತಿಳಿಸಿದ್ದಾರೆ. ಜತೆಗೆ ವಿಪಕ್ಷಗಳ ವಿರುದ್ಧ ಕಿಡಿಕಾರಿದ ಅವರು, “ಸಾವಿನ ವಿಚಾರದಲ್ಲಿ ರಾಜಕೀಯ ಮಾಡುವುದನ್ನು ಇನ್ನಾದರೂ ನಿಲ್ಲಿಸಿ’ ಎಂದಿದ್ದಾರೆ. 2ನೇ ಅಲೆಯ ವೇಳೆ ಕೇಂದ್ರ ಸರಕಾರವು ಆಕ್ಸಿಜನ್ ಲಭ್ಯತೆಗೆ ಎಲ್ಲ ರೀತಿಯಲ್ಲೂ ಪ್ರಯತ್ನಪಟ್ಟಿದೆ. ಆದರೂ, ಕೆಲವು ರಾಜಕೀಯ ಮಾಡುತ್ತಿದ್ದರು ಎಂದಿದ್ದಾರೆ.
ವಿಪಕ್ಷ-ಬಿಜೆಪಿ ಮುಖಾಮುಖಿ: ಸಂಸತ್‌ಭವನದ ಆವರಣದಲ್ಲಿ ಪ್ರತಿಭಟನೆ ಮುಂದುವರಿಸಿರುವ ಅಮಾನತು ಗೊಂಡ 12 ಮಂದಿ ರಾಜ್ಯಸಭೆ ಸದಸ್ಯರು ಮತ್ತು ಬಿಜೆಪಿ ಸದಸ್ಯರು ಮುಖಾಮುಖಿಯಾದ ಘಟನೆ ಶುಕ್ರವಾರ ನಡೆದಿದೆ. ಸದನದ ಒಳಗೆ “ಅಸಾಂವಿಧಾನಿಕ ನಡವಳಿಕೆ’ ಖಂಡಿಸಿ ಬಿಜೆಪಿ ಸದಸ್ಯರು ಕೂಡ ಫಲಕ ಗಳನ್ನು ಹಿಡಿದುಕೊಂಡು ಗಾಂಧಿ ಪ್ರತಿಮೆ ಬಳಿ ಬಂದಿದ್ದಾರೆ. ಈ ವೇಳೆ ಎರಡೂ ಕಡೆ ಸ್ವಲ್ಪಮಟ್ಟಿಗೆ ಮಾತಿನ ಚಕಮಕಿ ನಡೆದಿದೆ.
ಇದನ್ನೂ ಓದಿ:ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ದ್ವಿತೀಯ: ಪ್ರಧಾನಿ ಮೋದಿ
ಸಂಸತ್ ಮುಖ್ಯಾಂಶಗಳು
-ಶಿಕ್ಷಣ ಸಂಸ್ಥೆಯಲ್ಲಿ ಕಡ್ಡಾಯ ಭಗವದ್ಗೀತೆ ಕಲಿಕೆ, ಥಳಿಸಿ ಹತ್ಯೆಯಿಂದ ರಕ್ಷಣೆ ಸೇರಿ 153 ಖಾಸಗಿ ಸದಸ್ಯರ ಮಸೂದೆ ಲೋಕಸಭೆಯಲ್ಲಿ ಮಂಡನೆ
-ರೈಲು ನಿಲ್ದಾಣಗಳ ಖಾಸಗೀಕರಣ ಪ್ರಸಾವ ಸರಕಾರದ ಮುಂದಿಲ್ಲ. ಖಾಸಗಿಯವರ ಲೈಸೆನ್ಸ್ ಅವಧಿ ಮುಗಿದ ಕೂಡಲೇ ಸ್ಟೇಶನ್ ಮರು ಅಭಿವೃದ್ಧಿಗಾಗಿ ನೀಡಿದ್ದ ಭೂಮಿಯನ್ನು ವಾಪಸ್ ಪಡೆಯಲಾಗುತ್ತದೆ: ರೈಲ್ವೇ ಸಚಿವ ಅಶ್ವಿನಿ ವೈಷ್ಣವ್
-ಸಿಬಿಐ, ಇಡಿ ಮುಖ್ಯಸ್ಥರ ಸೇವಾವಧಿ ವಿಸ್ತರಣೆ ಮಸೂದೆ ಮಂಡನೆ
-ಎಂಎಸ್‌ಪಿ, ನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿ ಚರ್ಚೆಗೆ ಅವಕಾಶ ನೀಡುವಂತೆ ವಿಪಕ್ಷ ನಾಯಕರು ನೀಡಿದ್ದ ನೋಟಿಸ್ ತಿರಸ್ಕರಿಸಿದ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pawan Kalyan: ಕಾನೂನು ಎಲ್ಲರಿಗೂ ಒಂದೇ: ಅಲ್ಲು ಬಂಧನಕ್ಕೆ ಆಂಧ್ರ ಡಿಸಿಎಂ ಪ್ರತಿಕ್ರಿಯೆ
Delhi: 9 ವರ್ಷಗಳಲ್ಲೇ ಡಿಸೆಂಬರ್ ತಿಂಗಳಲ್ಲಿ ಅತ್ಯಂತ ಸ್ವಚ್ಛ ಗಾಳಿ!
Tamil Nadu: ಸ್ತ್ರೀಯರಿಗೆ ರಕ್ಷಣೆ ಕಲ್ಪಿಸಿ: ತಮಿಳುನಾಡು ಗೌರ್ನರ್‌ಗೆ ನಟ ವಿಜಯ್ ಮನವಿ
ರೊಹಿಂಗ್ಯಾಗಳಿಗೆ ನೆಲೆ: ಕೇಜ್ರಿವಾಲ್, ಕೇಂದ್ರ ಸಚಿವ ಮಧ್ಯೆ ವಾಗ್ಯುದ್ಧ
Mumbai: ಮಹಾರಾಷ್ಟ್ರದಲ್ಲಿ ಅಸುನೀಗಿದ ಹುಲಿ ಮರಿ ಶವ ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.