ಶ್ರದ್ಧಾ ಪ್ರಕರಣ: ಸಾಕ್ಷ್ಯ ಪತ್ತೆಗಾಗಿ ಕೆರೆಯೇ ಬರಿದು: ಇಂದು ಆರೋಪಿ ಅಫ್ತಾಬ್ ಮಂಪರು ಪರೀಕ್ಷೆ
Team Udayavani, Nov 21, 2022, 7:10 AM IST
ಹೊಸದಿಲ್ಲಿ: ಶ್ರದ್ಧಾ ವಾಲ್ಕರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತದೇಹದ ಉಳಿದ ಭಾಗಗಳ ಪತ್ತೆಗಾಗಿ ಪೊಲೀಸರು ಹೊಸದಿಲ್ಲಿಯ ಮೆಹೌಲಿ ಸಮೀಪದ ಮೈದಾನ್ ಗಹಿ ಕೆರೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ ಇದಕ್ಕಾಗಿ ಕೆರೆಯ ನೀರನ್ನೇ ಬರಿದು ಮಾಡುತ್ತಿದ್ದಾರೆ. ಈ ಕೆರೆಯು ಆರೋಪಿ ಅಫ್ತಾಬ್ ಅಮಿನ್ ಪೂನಾವಾಲಾ ವಾಸವಿದ್ದ ಮನೆಯ ಸಮೀಪದಲ್ಲಿಯೇ ಇದೆ.
ತಲೆಬುರುಡೆ ಪತ್ತೆ: ಗುರುಗ್ರಾಮದಲ್ಲಿ ತಲೆಬುರುಡೆಯ ಕೆಲವು ಭಾಗಗಳು ಪತ್ತೆಯಾಗಿವೆ. ಅಲ್ಲದೇ ದಿಲ್ಲಿಯ ಅರಣ್ಯ ಪ್ರದೇಶದಲ್ಲಿ ಪೊಲೀಸರ ತಂಡವು ರವಿವಾರವೂ ಹುಡುಕಾಟ ಮುಂದುವರಿಸಿದ್ದು, ಅವರಿಗೆ ದೇಹದ ಕೆಲವು ಭಾಗಗಳು (ಮೂಳೆಗಳು) ದೊರೆತಿವೆ. ಇವು ಶ್ರದ್ಧಾಳದೇ ಎಂಬುದನ್ನು ಪತ್ತೆಹಚ್ಚಲು ಅವುಗಳನ್ನು ಪೊಲೀಸರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಇನ್ನೊಂದೆಡೆ, ಮೆಹೌಲಿಯಲ್ಲಿರುವ ಆರೋಪಿ ಅಫ್ತಾಬ್‌ನ ಮನೆಯಿಂದ ಎರಡು ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೂವರ ಹೇಳಿಕೆ ದಾಖಲು: ಶ್ರದ್ಧಾಳಿಗೆ ಪರಿಚಯ ವಿದ್ದ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಸಾಯಿ ನಗರದ ಮೂವರು ವ್ಯಕ್ತಿಗಳ ಹೇಳಿಕೆಗಳನ್ನು ದಿಲ್ಲಿ ಪೊಲೀಸರು ದಾಖಲಿಸಿಕೊಂಡಿದ್ದಾರೆ. ಈ ಮೂವರು ಶ್ರದ್ಧಾಳನ್ನು ಹತ್ತಿರದಿಂದ ಕಂಡವರಾಗಿದ್ದಾರೆ. ಶ್ರದ್ಧಾ ಪ್ರಕರಣ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರಗಳ ಸಂಗ್ರಹಕ್ಕಾಗಿ ದಿಲ್ಲಿ ಪೊಲೀಸರು ಮಹಾರಾಷ್ಟ್ರ, ಹರಿಯಾಣ ಮತ್ತು ಹಿಮಾಚಲ ಪ್ರದೇಶಕ್ಕೆ ತೆರಳಿದ್ದಾರೆ.
ಇಂದು ಮಂಪರು ಪರೀಕ್ಷೆ: ಹೊಸದಿಲ್ಲಿಯ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆಯಲ್ಲಿ ಸೋಮ ವಾರ ಆರೋಪಿ ಅಫ್ತಾಬ್‌ನ ಮಂಪರು ಪರೀಕ್ಷೆ ನಡೆಯಲಿದೆ. ದಿಲ್ಲಿ ನ್ಯಾಯಾಲಯವು ಮಂಗಳವಾರ ದವರೆಗೆ ಆರೋಪಿ ಅಫ್ತಾಬ್‌ನನ್ನು ಪೊಲೀಸರ ವಶಕ್ಕೆ ನೀಡಿದೆ.
ಮಾಲಕರ ವಿಚಾರಣೆ: ಈ ಹಿಂದೆ ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವಸಾಯಿಯಲ್ಲಿ ಶ್ರದ್ಧಾ ಮತ್ತು ಅಫ್ತಾಬ್ ವಾಸವಿದ್ದರು. ಈ ಹಿನ್ನೆಲೆಯಲ್ಲಿ ದಿಲ್ಲಿ ಪೊಲೀ ಸರು ರವಿವಾರ ಮನೆ ಮಾಲಕರ ವಿಚಾರಣೆ ನಡೆಸಿ ದ್ದಾರೆ. “ಇಬ್ಬರು ಮದುವೆಯಾಗಿದ್ದಾಗಿ ಹೇಳಿ ತಮ್ಮ ಬಾಡಿಗೆ ಮನೆಯಲ್ಲಿ 10 ತಿಂಗಳು ವಾಸವಿದ್ದರು,’ ಎಂದು ಮನೆ ಮಾಲಕರು ಹೇಳಿಕೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!
Delhi airport; ಮೊಸಳೆ ತಲೆಬುರುಡೆ ಸಾಗಿಸುತ್ತಿದ್ದ ಕೆನಡಾ ಪ್ರಜೆ ಬಂಧನ
Tirupati; ಗಾಯಾಳುಗಳನ್ನು ಭೇಟಿಯಾದ ಸಿಎಂ ನಾಯ್ಡು: ಟಿಟಿಡಿ ಅಧಿಕಾರಿಗಳಿಗೆ ಛೀಮಾರಿ!
Tirupati;ದುರಂತಕ್ಕೆ ಸಿಎಂ ನಾಯ್ಡು,ಆಡಳಿತ ಮಂಡಳಿ,ಪೊಲೀಸರು ಕಾರಣ: ಮಾಜಿ ಟಿಟಿಡಿ ಮುಖ್ಯಸ್ಥರು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.