Shraddha case ಆರೋಪಿ ಅಫ್ತಾಬ್ಗೆ 8 ತಾಸು ಒಂಟಿ ಕೋಣೆಯಿಂದ ಮುಕ್ತಿ
Team Udayavani, Mar 16, 2024, 6:15 AM IST
ಹೊಸದಿಲ್ಲಿ: ದೇಶದಲ್ಲೇ ಸಂಚಲನ ಮೂಡಿಸಿದ್ದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ ಆರೋಪಿ ಅಫ್ತಾಬ್ ಅಮಿನ್ ಪೂನಾವಾಲನನ್ನು ದಿನಕ್ಕೆ 8 ಗಂಟೆಗಳ ಕಾಲ ಇತರ ಕೈದಿಗಳ ಜತೆ ಬಿಡಬೇಕೆಂದು ದಿಲ್ಲಿ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ.
ಅಪಾ ಯಕಾರಿಯೆಂಬ ಕಾರಣಕ್ಕೆ ಅಫ್ತಾಬ್ ಬಂಧನವಾದಾಗಿನಿಂದಲೂ ಆತನನ್ನು ಏಕಾಂಗಿಯಾಗಿ ಜೈಲಿನಲ್ಲಿ ಇಡಲಾಗಿತ್ತು. ಇದನ್ನು ಪ್ರಶ್ನಿಸಿ ಆತನ ವಕೀಲ ಹೈಕೋರ್ಟ್ ಮೊರೆ ಹೋಗಿದ್ದು, ಕನಿಷ್ಠಪಕ್ಷ ದಿನಕ್ಕೆ 2 ಗಂಟೆಯಾದರೂ ಏಕಾಂಗಿ ಕೋಣೆಯಿಂದ ಹೊರ ಬಿಡುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದ್ದರು. ಈ ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಈ ಆದೇಶ ನೀಡಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.