PM Modiಯವರಿಂದ ಅತ್ಯುತ್ತಮ ಸೃಜನಶೀಲ ಕ್ರಿಯೇಟರ್ ಪ್ರಶಸ್ತಿ ಸ್ವೀಕರಿಸಿದ ಅಯ್ಯೋ ಶ್ರದ್ಧಾ
Team Udayavani, Mar 8, 2024, 5:36 PM IST
ಹೊಸದಿಲ್ಲಿ: ಸಾಮಾಜಿಕ ತಾಣದಲ್ಲಿ ಜನಪ್ರಿಯವಾಗಿರುವ ಶ್ರದ್ಧಾ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅತ್ಯುತ್ತಮ ಸೃಜನಶೀಲ ಕ್ರಿಯೇಟರ್ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಭಾರತ್ ಮಂಟಪ್ ನಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಮಂತ್ರಿಯವರು 20 ವಿಭಾಗಗಳಲ್ಲಿ ಮೊಟ್ಟ ಮೊದಲ ರಾಷ್ಟ್ರೀಯ ಕ್ರಿಯೇಟರ್ಸ್ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಮಹಿಳಾ ವಿಭಾಗದಲ್ಲಿ ‘ಅತ್ಯುತ್ತಮ ಸೃಜನಶೀಲ ಸೃಷ್ಟಿಕರ್ತ’ ಪ್ರಶಸ್ತಿ ಶ್ರದ್ಧಾ ಸ್ವೀಕರಿಸಿದರು. ಕಾರ್ಕಳ ಮೂಲದ ಶ್ರದ್ಧಾ ಜೈನ್ ಅವರು ‘ಅಯ್ಯೋ ಶ್ರದ್ಧಾ’ ಎಂದು ಜನಪ್ರಿಯರಾಗಿದ್ದಾರೆ. ಕನ್ನಡ, ತುಳು, ಹಿಂದಿ ಸೇರಿ ಹಲವು ಭಾಷೆಗಳಲ್ಲಿ ನೂರಾರು ರಂಜನೀಯ ಸಾಮಾನ್ಯ ಪಾತ್ರಗಳು ಆಡುಮಾತಿನ ಭಾಷೆಯನ್ನು ಬಳಸಿ ಸನ್ನಿವೇಶಗಳ ಚಿತ್ರಣ ತಮಾಷೆ ಮತ್ತು ಮನರಂಜನೆ ನೀಡುವ ಮೂಲಕ ಅಪಾರ ಜನಮನ್ನಣೆ ಗಳಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಪ್ರಧಾನಿ ಮೋದಿ ಅವರ ಸಮ್ಮುಖದಲ್ಲಿ ಅರಳು ಹುರಿದಂತೆ ಮಾತನಾಡಿದ ಶ್ರದ್ದಾ ”ಎಷ್ಟೇ ಒತ್ತಡವಿದ್ದರೂ ನಾವು ಭಾರತೀಯರು ನಗುವ ಮಾರ್ಗ ಕಂಡುಕೊಳ್ಳುತ್ತಲೇ ಇದ್ದೇವೆ’ ಎಂದರು.
#WATCH | Delhi: At the first ever National Creators Award, Prime Minister Narendra Modi presents the Most Creative Creator- Female award to Shraddha at Bharat Mandapam. pic.twitter.com/EY6jyP8zdw
— ANI (@ANI) March 8, 2024
ಅತ್ಯುತ್ತಮ ಕಥೆಗಾರ, ಅತ್ಯಂತ ಪ್ರಭಾವಶಾಲಿ ಕೃಷಿ ಸೃಷ್ಟಿಕರ್ತ, ಸಾಂಸ್ಕೃತಿಕ ರಾಯಭಾರಿ, ಅತ್ಯುತ್ತಮ ಪ್ರಯಾಣ ಸೃಷ್ಟಿಕರ್ತ, ಸ್ವಚ್ಛತಾ ರಾಯಭಾರಿ, ನವ ಭಾರತ ಚಾಂಪಿಯನ್, ಟೆಕ್ ಸೃಷ್ಟಿಕರ್ತ, ಹೆರಿಟೇಜ್ ಫ್ಯಾಶನ್, ಆಹಾರ ವಿಭಾಗ, ಶಿಕ್ಷಣದಲ್ಲಿ ಮತ್ತು ಅಂತಾರಾಷ್ಟ್ರೀಯ ರಚನೆಕಾರ ಪ್ರಶಸ್ತಿಗಳನ್ನೂ ನೀಡಲಾಯಿತು.
ಪ್ರೇರಣಾದಾಯಕ ಭಾಷಣಕಾರ್ತಿ ಜಯ ಕಿಶೋರಿ, ಅಮೇರಿಕನ್ ಯೂಟ್ಯೂಬರ್ ಡ್ರೂ ಹಿಕ್ಸ್ ಮತ್ತು ಇತರರು ಪ್ರಶಸ್ತಿ ಸ್ವೀಕರಿಸಿದರು. ಮೈಥಿಲಿ ಠಾಕೂರ್ ಅವರಿಗೆ ವರ್ಷದ ಸಾಂಸ್ಕೃತಿಕ ರಾಯಭಾರಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್‌ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್‌ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
Kota; ಮತ್ತೊಬ್ಬ ವಿದ್ಯಾರ್ಥಿ ಆತ್ಮಹ*ತ್ಯೆ: ವರ್ಷದ 17ನೇ ಕೇಸು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.