ಸೊಲ್ಲಾಪುರ: ಪಂಢರಪುರ ವಿಠ್ಠಲನ ದರ್ಶನಕ್ಕೆ ಭಕ್ತಸಾಗರ
Team Udayavani, Jul 10, 2022, 11:17 PM IST
ಸೊಲ್ಲಾಪುರ: ಆಷಾಢ ಏಕಾದಶಿ ಅಂಗವಾಗಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ತೆಲಂಗಾಣ ಸಹಿತ ದೇಶದ ಮೂಲೆ ಮೂಲೆಯಿಂದ ಬಂದಿರುವ ಸುಮಾರು 10 ಲಕ್ಷಕ್ಕೂ ಹೆಚ್ಚು ವಾರಕರಿಗಳು (ಭಕ್ತರು) ರವಿವಾರ ಪಂಢರಪುರ ವಿಠ್ಠಲನ ದರ್ಶನ ಪಡೆದರು.
ರವಿವಾರ ಬೆಳಗ್ಗೆ 2.30ಕ್ಕೆ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಹಾಗೂ ಅವರು ಪತ್ನಿ ಲತಾ ಶಿಂಧೆ ಅವರೊಂದಿಗೆ ಸರಕಾರಿ ಮಹಾಪೂಜೆ ನಡೆಸುವ ಅವಕಾಶವು ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಮುರಳಿ ಭಗವಾನ್ ನವಲೆ ಹಾಗೂ ಅವರ ಪತ್ನಿ ಜೀಜಾಬಾಯಿ ಮುರಳಿ ನವಲೆ ಅವರಿಗೆ ಲಭಿಸಿದೆ.
ಪಂಢರಪುರ ಜಾತ್ರೆಗೆ 15 ದಿನ ಗಳಿಂದ ಆಳಂದಿಯಿಂದ ಹೊರಟ್ಟಿದ್ದ ಸಂತ ಜ್ಞಾನೇಶ್ವರ ಮಹಾರಾಜ, ಶೇಗಾಂವ ಸಂತ ಗಜಾನನ ಮಹಾರಾಜ, ಸಂತ ತುಕಾರಾಮ ಮಹಾರಾಜರ ಪಲ್ಲಕ್ಕಿ ರವಿವಾರ ಬೆಳಗ್ಗೆ ಪಂಢರಪುರಕ್ಕೆ ಆಗಮಿಸಿತ್ತು.
ಬಳಿಕ ಮಾತನಾಡಿದ ಸಿಎಂ ಏಕನಾಥ ಶಿಂಧೆ, ಇವತ್ತಿನ ಆಷಾಢ ಏಕಾದಶಿ ನನಗೆ ಅತ್ಯಂತ ಮಹತ್ವದ ದಿನ. ರಾಜ್ಯದ ಜನರಿಗಾಗಿ ನನ್ನ ಕೈಲಾದಷ್ಟು ಸೇವೆ ಮಾಡುತ್ತೇನೆ. ಕೊರೊನಾದಿಂದಾಗಿ ಎರಡು ವರ್ಷ ಆಷಾಢ ಏಕಾದಶಿ ಆಚರಿಸಲಾಗಿಲ್ಲ. ಆದ್ದರಿಂದ ಪ್ರಸಕ್ತ ವರ್ಷ 10 ಲಕ್ಷಕ್ಕೂ ಅಧಿ ಕ ವಾರಕರಿಗಳು ವಿಠ್ಠಲನ ದರ್ಶನ ಪಡೆದಿದ್ದಾರೆ ಎಂದರು.
ಸಿಎಂ ನಾಲ್ಕು ತಲೆಮಾರು ಪೂಜೆಯಲ್ಲಿ ಭಾಗಿ
ವಿಠ್ಠಲನ ಅಧಿಕೃತ ಮಹಾಪೂಜೆಗೆ ನೂತನ ಮುಖ್ಯಮಂತ್ರಿ ಏಕನಾಥ ಶಿಂಧೆ ತಮ್ಮ ಇಡೀ ಕುಟುಂಬದೊಂದಿಗೆ ಪಾಲ್ಗೊಂಡಿದ್ದರು. ಅವರ ತಂದೆ ಸಂಭಾಜಿ, ಏಕನಾಥ ಶಿಂಧೆ ಪತ್ನಿ ಲತಾ, ಪುತ್ರ ಶ್ರೀಕಾಂತ ಹಾಗೂ ಮೊಮ್ಮಗ ಇದ್ದರು.
ಸಂತರ ಕಾರು ಪಲ್ಟಿ: ಇಬ್ಬರ ಸಾವು
ಬೆಳಗಾವಿ: ಆಷಾಢ ಏಕಾದಶಿ ನಿಮಿತ್ತ ಮಹಾರಾಷ್ಟ್ರದ ಪಂಢರಪುರ ವಿಠ್ಠಲನ ದರ್ಶನಕ್ಕೆ ಹೊರಟಿದ್ದ ಬೆಳಗಾವಿಯ ಸಂತರ (ವಾರಕರಿ) ಕಾರು ಸೊಲ್ಲಾಪುರದ ಸಾಂಗೋಲ ಬಳಿ ರವಿವಾರ ಬೆಳಗ್ಗಿನ ಜಾವ ಅಪಘಾತಕ್ಕೀಡಾಗಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಂಭೀರ ಗಾಯಗೊಂಡಿದ್ದಾರೆ.
ನಗರದ ಬಾಂಧುರ ಗಲ್ಲಿ ನಿವಾಸಿಗಳಾದ ರಾಜು ಶಿಂಧೋಲ್ಕರ (45) ಹಾಗೂ ಪರಶುರಾಮ ಸಂಭಾಜಿ ಜಂಗ್ರುಚೆ (50) ಮೃತಪಟ್ಟವರು. ಅನಗೋಳ ನಿವಾಸಿಗಳಾದ ಗೀತೇಶ ಕೋಕಿತಕರ(28), ಅಭಿಜಿತ ಹುಂದರೆ (26) ಹಾಗೂ ಕಾರು ಚಾಲಕ ರಾಜು ಕೃಷ್ಣ ಮಜುಕರ (26) ಗಾಯಗೊಂಡಿದ್ದು, ಅವರನ್ನು ಪಂಢರಪುರದ ಲೈಫ್‌ಲೈನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hiriyadka: ಪಂಚಾಯತ್ ಸಿಬ್ಬಂದಿಗಳಿಲ್ಲದೆ ಬಾಗಿಲು ಮುಚ್ಚಿದ ಬೈರಂಪಳ್ಳಿ ಗ್ರಾಮ ಪಂಚಾಯತ್
New year : ಬಾಗಲಕೋಟೆ ಜಿಲ್ಲೇಲಿ ಅಭಿವೃದ್ಧಿ ಬಾಗಿಲು ತೆರೆಯಲಿ-ಸ್ಥಳಾಂತರವಾಗಬೇಕಿದೆ ಐಹೊಳೆ!
Belthangady: ಖಾಸಗಿ ಕಟ್ಟಡದ ಅವ್ಯವಸ್ಥೆ ವಿರುದ್ಧ ಸದಸ್ಯರು ಗರಂ
New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ
Bantwal: ಸಾಮಾನ್ಯ ಸೈಕಲನ್ನೇ ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಬಾಲಕ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.