Mallikarjun Kharge; ನಿಮ್ಮ ನಾಯಕರ ಬಾಯಿಗೆ ಬೀಗ ಹಾಕಿ: ಮೋದಿಗೆ ಖರ್ಗೆ ಪತ್ರ
Team Udayavani, Sep 17, 2024, 9:42 PM IST
ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮತ್ತು ಮಿತ್ರಪಕ್ಷಗಳ ಸದಸ್ಯರು ಆಕ್ಷೇಪಾರ್ಹ ಹಾಗೂ ಹಿಂಸಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಪ್ರಧಾನಿ ಮೋದಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಇಂತಹ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇದರಿಂದ ಭಾರತೀಯ ರಾಜಕೀಯವು ಅವನತಿಯತ್ತ ಸಾಗುವುದನ್ನು ತಡೆಯಬಹುದು. ನಿಮ್ಮ ನಾಯಕರಿಗೆ ಶಿಸ್ತಿನಿಂದ ಇರಲು ಸೂಚಿಸಿ ಎಂದು ಖರ್ಗೆ ಹೇಳಿದ್ದಾರೆ.
ಈಗ ಬಿಜೆಪಿ ಮತ್ತು ಮಿತ್ರ ಪಕ್ಷದವರು ಬಳಸುತ್ತಿರುವ ಭಾಷೆಯು ಭವಿಷ್ಯದ ದೃಷ್ಟಿಯಲ್ಲಿ ಮಾರಕವಾಗಿದೆ. ಇನ್ನೂ ನೋವಿನ ಸಂಗತಿಯೆಂದರೆ, ಕೇಂದ್ರ ಸರ್ಕಾರದ ರೈಲ್ವೆ ಖಾತೆ ರಾಜ್ಯ ಸಚಿವ ಪ್ರತಿಪಕ್ಷದ ನಾಯಕನನ್ನು “ನಂಬರ್ ಒನ್ ಭಯೋತ್ಪಾದಕ’ ಎಂದು ಕರೆದಿದ್ದಾರೆ. ಇನ್ನು “ಮಹಾರಾಷ್ಟ್ರದಲ್ಲಿ ನಿಮ್ಮ ಮಿತ್ರಪಕ್ಷದ ಶಾಸಕರೊಬ್ಬರು, ರಾಹುಲ್ ನಾಲಿಗೆ ಕತ್ತರಿಸಿದರೆ 11 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ’ ಎಂದು ಖರ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jafna: ಭಾರತೀಯ ಮೀನುಗಾರರಿಗೆ ಲಂಕಾ ಫೈರಿಂಗ್: 5 ಮಂದಿಗೆ ಗಾಯ
Invest Karnataka 2025:ವಾಣಿಜ್ಯ ನಗರಿಯ ಉದ್ಯಮ ದಿಗ್ಗಜರ ಜೊತೆ ಸಚಿವ ಎಂ. ಬಿ. ಪಾಟೀಲ ಚರ್ಚೆ
Maha Kumbh Mela: ಮೌನಿ ಅಮಾವಾಸ್ಯೆ ಶಾಹಿ ಸ್ನಾನಕ್ಕಾಗಿ ಜನಸಾಗರ…ಡ್ರೋನ್ ನಲ್ಲಿ ಸೆರೆ!
Mahakumbh Mela:ಬಾಗಿಲು ಲಾಕ್ ಆಗಿದ್ದಕ್ಕೆ ಆಕ್ರೋಶಗೊಂಡು ವಿಶೇಷ ರೈಲಿನ ಮೇಲೆ ಕಲ್ಲುತೂರಾಟ!
Video: ರಿವರ್ಸ್ ತೆಗೆಯುವ ವೇಳೆ ಅವಾಂತರ… ಕಟ್ಟಡದ ಮೊದಲ ಮಹಡಿಯಿಂದ ಕೆಳಗೆ ಬಿದ್ದ ಕಾರು