ಪಾಕ್ ಭೇಟಿಗೆ ಸಮರ್ಥನೆ; ಸಿಧು ತಲೆಗೆ 5 ಕೋಟಿ ರೂ.ಇನಾಮು!
Team Udayavani, Aug 21, 2018, 3:23 PM IST
ಅಮೃತಸರ: ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಪ್ರಮಾಣ ವಚನ ಸಮಾರಂಭಕ್ಕೆ ಹಾಜರಾಗಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಮಂಗಳವಾರ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
‘ನನಗೆ ಹೀಗೆ ಮಾಡು ಎಂದು ಯಾರೂ ಹೇಳಿರಲಿಲ್ಲ. ನನ್ನ ಆತ್ಮಸಾಕ್ಷಿಯ ಪ್ರಕಾರ ನಾನು ನಡೆದುಕೊಂಡಿದ್ದೇನೆ’ ಎಂದು ಸಿಧು ವಿವಾದದ ಕುರಿತು ಬೇಸರ ವ್ಯಕ್ತ ಪಡಿಸಿದ್ದಾರೆ.
ಪಾಕ್ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾರನ್ನು ಅಪ್ಪಿಕೊಂಡುದಕ್ಕೆ ಸ್ಪಷ್ಟನೆ ನೀಡಿದ ಸಿಧು ‘ನಾನು ಕುಳಿತಿದ್ದಲ್ಲಿ ಬಾಜ್ವಾ ಅವರು ಬಂದರು. ಸ್ವಾಭಾವಿಕವಾಗಿ ಎದ್ದು ನಿಂತು ಗೌರವಿಸಿದೆ. ಆ ಬಳಿಕ ನಮ್ಮಿಬ್ಬರ ನಡುವೆ ಯಾವುದೇ ಮಾತುಕತೆ ನಡೆದಿಲ್ಲ’ ಎಂದರು.
‘ದಿನ ನಿತ್ಯ ಭಾರತದ ಹಲವಾರು ಮಂದಿ ಪಾಕ್‌ಗೆ ತೆರಳುತ್ತಾರೆ. ನನಗೆ ಪಾಕ್ ಪತ್ರಕರ್ತರು, ರಾಜಕಾರಣಿಗಳು ಮತ್ತು ಜನರು ಅಪಾರ ಪ್ರೀತಿ ತೋರಿದರು’ ಎಂದರು.
‘ಹಿಂದೆಯೂ ಉಭಯ ರಾಷ್ಟ್ರಗಳ ನಡುವೆ ಶಾಂತಿ ಮೂಡಿಸುವ ಯತ್ನಗಳು ನಡೆದಿದ್ದವು. ಮಾಜಿ ಪ್ರಧಾನಿ ದಿವಂಗತ ವಾಜಪೇಯಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಅವರು ಹಿಂದೆ ಪಾಕ್‌ಗೆ ಭೇಟಿ ನೀಡಿರಲಿಲ್ಲವೆ’ ಎಂದು ಪ್ರಶ್ನಿಸಿದ ಸಿಧು ತಮ್ಮ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ.
‘ಹಿಂದೆ ದೋಸ್ತಿ ಬಸ್ ಸಂಚರಿಸುತ್ತಿತ್ತು, ಪ್ರಧಾನಿ ಮೋದಿ ಅವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ನವಾಜ್ ಷರೀಫ್ ಅವರನ್ನು ಆಹ್ವಾನಿಸಿರಲಿಲ್ಲವೆ? ಮೋದಿ ಅವರು ತುರ್ತಾಗಿ ಲಾಹೋರ್‌ಗೆ ತೆರಳಿರಲಿಲ್ಲವೆ’ ಎಂದು ಪ್ರಶ್ನಿಸಿದರು.
‘ಶಾಂತಿ ಮತ್ತು ಸ್ಥಿರತೆಗೆ ಉತ್ತಮ ಸಂದೇಶಗಳು ಅಗತ್ಯವಾಗಿದ್ದು , ಆಗ ಮಾತ್ರ ನಮ್ಮ ಸೈನಿಕರು ಹುತಾತ್ಮರಾಗುವುದನ್ನು ತಡೆಯಬಹುದು’ಎಂದು ಸಿಧು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಸಿಧು ನಡೆಗೆ ಪಂಜಾಬ್ ಸಿಎಂ ಕ್ಯಾ. ಅಮರಿಂದರ್ ಸಿಂಗ್ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು.
ಪಾಕಿಸ್ತಾನ ಪ್ರಧಾನಿಯಾಗಿ ಇಮ್ರಾನ್ ಖಾನ್ ಸಿಧು ಬೆಂಬಲಕ್ಕೆ ನಿಂತಿದ್ದು ಅವರು ‘ಶಾಂತಿಯ ದೂತ’ ಎಂದಿದ್ದಾರೆ.
ತಲೆಗೆ 5 ಕೋಟಿ ರೂ. ಘೋಷಿಸಿದ ಭಜರಂಗದಳ
ದೇಶದ್ರೋಹ ಎಸಗಿರುವ ಸಿಧು ತಲೆ ಕಡಿದು ತಂದವರಿಗೆ 5 ಲಕ್ಷ ರೂಪಾಯಿ ಇನಾಮು ನೀಡಿರುವುದಾಗಿ ರಾಷ್ಟ್ರೀಯ ಭಜರಂಗದಳ ಆಗ್ರಾ ಘಟಕದ ಅಧ್ಯಕ್ಷ ಸಂಜಯ್ ಜಾಟ್ ಘೋಷಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
ಅಪ್ಪನನ್ನೇ ಬದಲಿಸಿದ ಅತಿಶಿ: ಪ್ರಿಯಾಂಕಾ ಬೆನ್ನಲ್ಲೇ ವಿವಾದಾತ್ಮಕ ಹೇಳಿಕೆ ನೀಡಿದ ಬಿಧುರಿ
Prashant Kishor: ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಪ್ರಶಾಂತ್ ಕಿಶೋರ್ ಬಂಧನ
Protect: ಹೆತ್ತವರನ್ನು ಸಾಕದಿದ್ದರೆ ಗಿಫ್ಟ್ ಡೀಡ್ ರದ್ದು: ಸುಪ್ರೀಂ ಕೋರ್ಟ್
ವಲಸೆ ನಿಯಮ ಸಡಿಲಿಸಿದ ನ್ಯೂಜಿಲ್ಯಾಂಡ್ ಸರಕಾರ; ಭಾರತೀಯರಿಗೆ ಹೆಚ್ಚಿನ ಅವಕಾಶ ಸಾಧ್ಯತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Koppala: ಬಂದ್ ಕರೆಗೆ ಅಂಗಡಿ- ಮುಂಗಟ್ಟು ಬಂದ್
Chhattisgarh: ಪತ್ರಕರ್ತ ಮುಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಹೈದರಾಬಾದ್‌ನಲ್ಲಿ ಬಂಧನ
Leopard: ವಿಜಯಪುರ ನಗರದಲ್ಲಿ ಕಾಣಿಸಿಕೊಂಡ ಚಿರತೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ
Honnavara: ಲಾರಿ ಪಲ್ಟಿಯಾಗಿ ಇಬ್ಬರು ಸಾವು; ಮೂವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.